








ವಿವಿಧ ಸೇವಾ ಕಾರ್ಯಗಳ ಮೂಲಕ ಕೆ.ಎನ್.ಚಕ್ರಪಾಣಿ ಅವರ ಜನ್ಮದಿನಾಚರಣೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡರಾದ ಕೆ.ಎನ್.ಚಕ್ರಪಾಣಿ ಅವರ ಜನ್ಮದಿನದ ಪ್ರಯುಕ್ತ ಕೊಡಿಗೇಹಳ್ಳಿ ಯಲ್ಲಿನ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ವಿ.ಗೋಪಾಲಗೌಡರು, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್. ರಮೇಶ್, ಬಿಜೆಪಿ ಮುಖಂಡರಾದ ಎಲ್.ನಂಜಪ್ಪ, ಬಿಬಿಎಂಪಿ ಮಾಜಿ ಸದಸ್ಯ ಅಶ್ವಥ್ ನಾರಾಯಣಗೌಡ, ಮೋಹನ್ ರಾಜ್, ಅಳ್ಳಾಳಸಂದ್ರ ಎಸ್.ಸೋಮಶೇಖರ್, ರಾಜಶೇಖರ್, ಎಸ್.ಮುನೇಗೌಡ, ಕಾರ್ತಿಕ್ ವಿಜಯ್ ಕುಮಾರ್, ಪದ್ಮನಾಭ್, ಚಿತ್ರ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಮತ್ತು ಅವರ ತಂಡ ಸೇರಿದಂತೆ ಹಲವು ಮುಖಂಡರು, ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಕೆ.ಎನ್.ಚಕ್ರಪಾಣಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನದ ಪ್ರಯುಕ್ತ ಟಾಟಾ ನಗರದಲ್ಲಿ ಉಚಿತ ಆರೋಗ್ಯ ಶಿಬಿರ, ಮಾರುತಿ ಬಡಾವಣೆ ಸಮೀಪದ ಸ್ಲಂ ನಿವಾಸಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 7349337989