
ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಬರ್ಗರ್ ಪೇಂಟ್ಸ್ ಮಾಸಿಕದ ಹಣಕಾಸು ಫಲಿತಾಂಶ
ಸಮಗ್ರ ಫಲಿತಾಂಶದ ಮುಖ್ಯಾಂಶಗಳು:
ಎ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯ ₹2,827.5 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ಗಳಿಸಿದ ₹2,774.6 ಕೋಟಿ ಆದಾಯಕ್ಕೆ ಹೋಲಿಸಿದರೆ ಈ ವರ್ಷ ಶೇ.1.9ರಷ್ಟು ಬೆಳವಣಿಗೆ ಹೊಂದಿದೆ.
ಬಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದ ಇಬಿಐಟಿಡಿಎ (ಇತರ ಆದಾಯವನ್ನು ಹೊರತುಪಡಿಸಿ) ₹352.3 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ₹434.2 ಕೋಟಿ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ.18.9ರಷ್ಟು ಕುಸಿತ ಕಂಡಿದೆ.
ಸಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದ ನಿವ್ವಳ ಲಾಭ ₹206.4 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ₹269.9 ಕೋಟಿ ಗಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಈ ಅವಧಿಯ ತ್ರೈಮಾಸಿಕದಲ್ಲಿ ಶೇ.23.5 ಕುಸಿತ ಕಂಡಿದೆ.
ಸ್ವತಂತ್ರ ಫಲಿತಾಂಶಗಳ ಮುಖ್ಯಾಂಶಗಳು:
ಎ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯ ₹2,458.5 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ಗಳಿಸಿದ ₹2,430.7 ಕೋಟಿ ಆದಾಯಕ್ಕೆ ಹೋಲಿಸಿದರೆ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇ.1.1 ಬೆಳವಣಿಗೆ ಉಂಟಾಗಿದೆ.
ಬಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದ ಇಬಿಐಟಿಡಿಎ (ಇತರ ಆದಾಯವನ್ನು ಹೊರತುಪಡಿಸಿ) ₹311.2 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ಗಳಿಸಿದ ₹383.4 ಕೋಟಿಗೆ ಹೋಲಿಸಿದರೆ, ಕಳೆದ ವರ್ಷದ ಇದೇ ಅವಧಿಯ
ತ್ರೈಮಾಸಿಕಕ್ಕಿಂತ ಶೇ.18.8ರಷ್ಟು ಕುಸಿತವಾಗಿದೆ.
ಸಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ತ್ರೈಮಾಸಿಕದ ನಿವ್ವಳ ಲಾಭ ₹176.3 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ₹229.0 ಕೋಟಿ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ತ್ರೈಮಾಸಿಕದಲ್ಲಿ ಶೇ.23.0ರಷ್ಟು ಕುಸಿತವಾಗಿದೆ.
ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕ ಅವಧಿಯ ಆರ್ಥಿಕ ಫಲಿತಾಂಶ
ಸಮಗ್ರ ಫಲಿತಾಂಶಗಳ ಮುಖ್ಯಾಂಶಗಳು:
ಎ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯ ₹6,028.3 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕದಲ್ಲಿ ₹5,865.6 ಕೋಟಿ ಬಂದಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಇದೇ ಅವಧಿಗಿಂತ ಶೇ.2.8 ಹೆಚ್ಚಳವಾಗಿದೆ.
ಬಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದ ಇಬಿಐಟಿಡಿಎ (ಇತರ ಆದಾಯವನ್ನು ಹೊರತುಪಡಿಸಿ) ₹880.7 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ₹956.6 ಕೋಟಿಗೆ ಹೋಲಿಸಿದರೆ ಶೇ.7.9ರಷ್ಟು ಕುಸಿತವಾಗಿದೆ.
ಸಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದ ನಿವ್ವಳ ಲಾಭ ₹521.4 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ₹623.9 ಕೋಟಿ ಗಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಇದೇ ಅವಧಿಗಿಂತ ಶೇ.16.4ರಷ್ಟು ಕುಸಿತವಾಗಿದೆ.
ಸ್ವತಂತ್ರ ಫಲಿತಾಂಶಗಳ ಮುಖ್ಯಾಂಶಗಳು:
ಎ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದಲ್ಲಿನ ಕಾರ್ಯಾಚರಣೆಗಳಿಂದ ಬಂದ ಆದಾಯ ₹5,321.1 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ₹5,237.0 ಕೋಟಿ ಗಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಇದೇ ಅವಧಿಗಿಂತ ಶೇ.1.6ರಷ್ಟು ಹೆಚ್ಚಳವಾಗಿದೆ.
ಬಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದ ಇಬಿಐಟಿಡಿಎ (ಇತರ ಆದಾಯವನ್ನು ಹೊರತುಪಡಿಸಿ) ₹810.7 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ₹867.1 ಕೋಟಿಗೆ ಹೋಲಿಸಿದರೆ ಕಳೆದ ವರ್ಷದ ಇದೇ ಅವಧಿಗಿಂತ ಶೇ.6.5ರಷ್ಟು ಕುಸಿತವಾಗಿದೆ.
ಸಿ. ಸೆಪ್ಟೆಂಬರ್ 30, 2025ರಂದು ಮುಕ್ತಾಯಗೊಂಡ ಅರ್ಧ ವಾರ್ಷಿಕದಲ್ಲಿನ ನಿವ್ವಳ ಲಾಭ ₹470.0 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ₹534.5 ಕೋಟಿ ಗಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಇದೇ ಅವಧಿಗಿಂತ ಶೇ.12.1ರಷ್ಟು ಕುಸಿತ ಕಂಡಿದೆ.
ಈ ಕುರಿತು ಮಾತನಾಡಿರುವ ಬರ್ಗರ್ ಪೇಂಟ್ಸ್ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಆಗಿರುವ ಅಭಿಜಿತ್ ರಾಯ್ ಅವರು, “ಈ ತ್ರೈಮಾಸಿಕದ ಉದ್ದಕ್ಕೂ ತೀವ್ರ ಮಳೆಗಾಲ ಇದ್ದಿದ್ದರಿಂದ ಹೆಚ್ಚಿನ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆ ಇತ್ತು. ಆದರೂ ನಾವು ಬಹುತೇಕ ಕಡೆಗಳಲ್ಲಿ ಏಕ-ಅಂಕಿ ಪ್ರಮಾಣದ ಬೆಳವಣಿಗೆಗಳನ್ನು ಮತ್ತು ಸ್ವಲ್ಪ ಧನಾತ್ಮಕ ಆದಾಯ ಅಭಿವೃದ್ಧಿ ಗಳಿಸುವುದು ಸಾಧ್ಯವಾಗಿದೆ. ಈ ತ್ರೈಮಾಸಿಕದ ಆದಾಯ ಬೆಳವಣಿಗೆ ದರ ಕಡಿಮೆ ಇದ್ದರೂ, ನಮ್ಮ ಅಂದಾಜುಗಳ ಪ್ರಕಾರ ಪೇಂಟ್ಸ್ ಮತ್ತು ಕೋಟಿಂಗ್ಸ್ ಕ್ಷೇತ್ರದ ಪ್ರಮುಖ ಲಿಸ್ಟೆಡ್ ಕಂಪನಿಗಳ ನಡುವೆ ಆರ್ಥಿಕ ವರ್ಷ 25ರ ಏಪ್ರಿಲ್ 25 ರಿಂದ ಸೆಪ್ಟೆಂಬರ್ 25ರ ಅವಧಿಯಲ್ಲಿ ಮಾರುಕಟ್ಟೆ ಪಾಲನ್ನು ಸುಧಾರಿಸುವುದನ್ನು ಮುಂದುವರಿಸಿದ್ದೇವೆ.
ಮುಂದಿನ ದಿನಗಳಲ್ಲಿ ನಾವು ಬರ್ಗರ್ ಪೇಂಟ್ಸ್ ಜಾಲ ವಿಸ್ತರಣೆ ಮತ್ತು ಬ್ರ್ಯಾಂಡ್ ಅಭಿವೃದ್ಧಿ ಪ್ರಯತ್ನಗಳನ್ನು ಮುಂದುವರಿಸಿ ನಮ್ಮ ಹೂಡಿಕೆದಾರರು ಮತ್ತು ಪಾಲುದಾರರಿಗೆ ಹೆಚ್ಚಿ ಮೌಲ್ಯ ಒದಗಿಸುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
