




ಮಾರೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಿಗೆ ಸನ್ಮಾನ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಧ್ಯಾ ಸುಂದರೇಶ್ ಅವರನ್ನು ಬ್ಯಾಟರಾಯನಪುರ ಕ್ಷೇತ್ರದ ಶಾಸಕರು, ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆಂಜಿನಪ್ಪ(ಪುಟ್ಟು), ಚೊಕ್ಕನಹಳ್ಳಿ ನಂಜೇಗೌಡ, ಡಿ.ಎಂ.ಚೌಡಪ್ಪ, ಹೊಸಹಳ್ಳಿ ಮುನಿರಾಜು, ಕಾಂಗ್ರೆಸ್ ಮುಖಂಡರಾದ ಪಾಲನಹಳ್ಳಿ ಈರಪ್ಪ, ಮಾರೇನಹಳ್ಳಿ ಸುಂದರೇಶ್, ಆನಂದ್ ಕುಮಾರ್, ಸೋಮಶೇಖರ್, ಎಂ.ಪಿ.ವಿಶ್ವನಾಥ್, ಮರಳುಕುಂಟೆ ರಮೇಶ್, ದಾಸನಾಯಕನಹಳ್ಳಿ ಗೋಪಾಲ್, ಶ್ರೀನಿವಾಸಪುರ ಸುಬ್ರಮಣಿ, ನಾರಾಯಣಸ್ವಾಮಿ, ಮಂಚಪನಹಳ್ಳಿ ನಾಗರಾಜ್, ಬಾಗಲೂರು ನಟರಾಜ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿದ್ದರು.
