







ಯಲಹಂಕ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ :
ಯಲಹಂಕ : ಬಿಹಾರದಲ್ಲಿ ಎನ್ ಡಿ ಎ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಯಲಹಂಕ ನಗರ ಮತ್ತು ಅವರ ಸ್ವಗ್ರಾಮ ಸಿಂಗನಾಯಕನಹಳ್ಳಿ ಯಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಎನ್.ಡಿ.ಎ. ಗೆಲವಿನ ಸಂಭ್ರಮ ಆಚರಿಸಿದರು.
ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ.ಒಕ್ಕೂಟಕ್ಕೆ ಐತಿಹಾಸಿಕ ಗೆಲುವಾಗಿದೆ. ಕಾಂಗ್ರೆಸ್ ನೇತೃತ್ವ ಮಹಾಘಟಬಂಧನ್ ಹೀನಾಯ ಸೋಲನುಭವಿಸಿ ಮಕಾಡೆ ಮಲಗಿದೆ. ಚುನಾವಣಾ ಪೂರ್ವದಲ್ಲಿ ವೋಟ್ ಚೋರಿ ಹೆಸರೇಳಿಕೊಂಡು ನರೇಂದ್ರ ಮೋದಿಯವರನ್ನು ಅಂತ್ಯ ತೀಕ್ಷ್ಣ ಮಾತುಗಳಲ್ಲಿ ಚುಚ್ಚಿದರು. ಕರ್ನಾಟಕ ರಾಜ್ಯ ಕಾಂಗ್ರೆಸ್ ಮುಖಂಡರು ಸಹ ಮತಗಳ್ಳತನದ ನೆಪದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರ ಬಗ್ಗೆ ಹೀನಾಯವಾಗಿ ಮಾತನಾಡಿದ್ದರು. ಇದೀಗ ವಿರೋಧಿಗಳ ಟೀಕೆಗೆ ಬಿಹಾರ ಮತದಾರರು ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನ ಸುಳ್ಳು ಆರೋಪಕ್ಕೆ ಪ್ರತ್ಯುತ್ತರ ದೊರೆತಿದೆ. ಕಾಂಗ್ರೆಸ್ ಬಿಹಾರದಲ್ಲಿ ಹೇಳ ಹೆದರಿಲ್ಲದಂತೆ ಮಕಾಡೆ ಮಲಗಿದೆ. ಬಿಹಾರ ಫಲಿತಾಂಶ ನರೇಂದ್ರ ಮೋದಿಯವರ ಶಕ್ತಿಯನ್ನು ಮತ್ತೊಮ್ಮೆ ನಿರೂಪಿಸಿದೆ. ಈಗಲಾದರೂ ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಸತ್ಯ, ಪ್ರಾಮಾಣಿಕತೆಯ ತಳಹದಿಯ ಮೇಲೆ ಮುನ್ನಡೆಯಲಿ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಯಲಹಂಕ ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೆಡ್ಡಿ, ಚೊಕ್ಕನಹಳ್ಳಿ ವೆಂಕಟೇಶ್, ಮು.ಕೃಷ್ಣಮೂರ್ತಿ, ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಒಬಿಸಿ ಮೋರ್ಚಾ ಉಪಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಬಾಬು, ಎಸ್ಸಿ ಮೋರ್ಚಾದ ಮುನಿಕೃಷ್ಣ, ಮಲ್ಲೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.
