



ಬೆಂಗಳೂರಲ್ಲಿ ನ.23ಕ್ಕೆ ಹಿರಿಯರ ಹಬ್ಬ 2025; ಹಿರಿಯ ನಾಗರಿಕರ ಚೈತನ್ಯ, ಶಕ್ತಿ & ಜ್ಞಾನದ ಸಂಭ್ರಮಕ್ಕೆ ವೇದಿಕೆ ಸಜ್ಜು!
ಬೆಂಗಳೂರು, ನವೆಂಬರ್ 21, 2025 : ರಾಜಧಾನಿ ಬೆಂಗಳೂರು ಬಹುನಿರೀಕ್ಷಿತ ಹಿರಿಯರ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ನವೆಂಬರ್ 23, ಭಾನುವಾರದಂದು ಎಂಜಿ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆವರಣದಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಹಿರಿಯರ ಉತ್ಸವ ಜರುಗಲಿದೆ. ಹಿರಿಯ ನಾಗರಿಕರನ್ನು ಗೌರವಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನ ಹಿರಿಯರ ಪ್ರತಿಭೆ, ಜ್ಞಾನ ಮತ್ತು ಅಮೂಲ್ಯ ಕೊಡುಗೆಗಳನ್ನು ಸಂಭ್ರಮಿಸುವ ಪ್ರಮುಖ ವೇದಿಕೆಯಾಗಿದೆ.
ಈ ಸಲದ ಹಿರಿಯರ ಹಬ್ಬವನ್ನು ಎಲ್ಲರಿಗೂ ಖುಷಿಯಾದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಆಟಗಳು, ಕಲಾ ಪ್ರದರ್ಶನಗಳು, ಚರ್ಚೆಗಳು ಮತ್ತು ಸಮುದಾಯ ಸಂವಾದದಲ್ಲಿ ಹಿರಿಯರು ಭಾಗವಹಿಸಲು ಅನುಕೂಲವವಾಗುತ್ತದೆ. ಈ ಹಬ್ಬದ ಪ್ರಮುಖ ವಿಶೇಷತೆ ಎಂದರೆ, ಇಲ್ಲಿ ಹಿರಿಯರೇ ಪ್ರದರ್ಶಕರಾಗಿ, ಮಳಿಗೆಗಳ ಮಾಲೀಕರಾಗಿ, ಸ್ವಯಂಸೇವಕರಾಗಿ ಮತ್ತು ಆಯೋಜಕರಾಗಿ ಕಾರ್ಯಕ್ರಮದ ನೇತೃತ್ವವನ್ನು ವಹಿಸುತ್ತಾರೆ. ಈ ಮೂಲಕ ವಯಸ್ಸಾಗ್ತಿದೆ ಎಂಬುದು ಸೃಜನಶೀಲತೆ, ಎಲ್ಲರೊಂದಿಗೆ ಬೆರೆಯುವುದು ಮತ್ತು ಹೊಸ ಉದ್ದೇಶವನ್ನು ಕಂಡುಕೊಳ್ಳುವ ಹಂತ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ.
2025ರ ಹಿರಿಯರ ಹಬ್ಬದ ಪ್ರಮುಖ ಕಾರ್ಯಕ್ರಮಗಳು:
ಈ ವರ್ಷದ ಹಿರಿಯರ ಹಬ್ಬದಲ್ಲಿ, ಬದಲಾಗುತ್ತಿರುವ ಹಿರಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಲಾಗಿದೆ:
● ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತಾ ಕಾರ್ಯಾಗಾರಗಳು:
ಆತ್ಮವಿಶ್ವಾಸ ಹಾಗೂ ಸುರಕ್ಷತೆಯೊಂದಿಗೆ ತಂತ್ರಜ್ಞಾನವನ್ನು ಬಳಸುವಂತೆ ಹಿರಿಯರ ಸಬಲೀಕರಣ ಮಾಡುವುದು. ಮತ್ತು ಡಿಜಿಟಲ್ ವಂಚನೆಗಳಿಂದ ಅವರನ್ನು ರಕ್ಷಿಸುವುದು ಇದರ ಉದ್ದೇಶ.
● ಸಮಗ್ರ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ಮೌಲ್ಯಮಾಪನ:
ಖ್ಯಾಲ್, ಕಾಡಬಾಮ್ಸ್, ಆಸ್ಟರ್ ಡಿಎಂ ಮತ್ತು ಸೊಡೆಕ್ಸೊ ಸೇರಿ ನಮ್ಮ ಪಾಲುದಾರ ಸಂಸ್ಥೆಗಳು ಈ ಸೇವೆಗಳನ್ನು ಒದಗಿಸಲಿವೆ. ಹಿರಿಯರು ತಮ್ಮ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಿ, ನಿರ್ವಹಣೆ ಮಾಡಲು ಇದು ನೆರವಾಗಲಿದೆ.
● ಕಾನೂನು ಸಲಹೆ ಮತ್ತು ಮಾರ್ಗದರ್ಶನ ಸೇವೆ:
ಆಸ್ತಿ ಯೋಜನೆ, ಆಸ್ತಿ ಹಕ್ಕುಗಳು, ನಿರಂತರತೆಯ ಯೋಜನೆ, ಹಿರಿಯರ ನಿಂದನೆ ತಡೆಗಟ್ಟುವಿಕೆ ಮತ್ತು ಸುರಕ್ಷಿತ ಆರೈಕೆಯಂತಹ ವಿಷಯಗಳ ಬಗ್ಗೆ ಮಾಹಿತಿ ನೀಡಿ, ತಮಗಿರುವ ಕಾನೂನು ರಕ್ಷಣೆಗಳನ್ನು ಹಿರಿಯರಿಗೆ ಅರ್ಥ ಮಾಡಿಸಿ, ಕಾನೂನುಗಳನ್ನು ಅಗತ್ಯವಿದ್ದಾಗ ಬಳಸಿಕೊಳ್ಳಲು ನೆರವಾಗುವುದು.
ಈ ಹೊಸ ಕಾರ್ಯಕ್ರಮಗಳು ಹಿರಿಯರು ಸುರಕ್ಷಿತ, ಸ್ವತಂತ್ರ ಮತ್ತು ಮಾಹಿತಿಪೂರ್ಣ ಜೀವನವನ್ನು ನಡೆಸಲು ಅನುವು ಮಾಡಿಕೊಡಲಿದೆ. ಇವು ನಮ್ಮ ಉದ್ದೇಶಕ್ಕೆ ಬಲ ನೀಡಲಿವೆ.
ಸಂಪರ್ಕ, ಸಮುದಾಯ ಹಾಗೂ ಸಂಭ್ರಮದ ದಿನ
ಇನ್ನು, ಹಿರಿಯರ ಹಬ್ಬವು ಹಿರಿಯರು ಮತ್ತು ಅವರ ಕುಟುಂಬದವರು ಒಟ್ಟಾಗಿ ಸೇರಿ ಆನಂದಿಸುವ ಒಂದು ಅಮೂಲ್ಯ ವೇದಿಕೆಯಾಗಿದೆ. ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹಿಡಿದು ಸಾಂಪ್ರದಾಯಿಕ ಆಟಗಳು ಮತ್ತು ಹಿರಿಯರು ನಡೆಸುವ ಮಳಿಗೆಗಳವರೆಗೆ, ಈ ಹಬ್ಬವನ್ನು ನಗು, ನೆನಪು ಮತ್ತು ಹೃತ್ಪೂರ್ವಕ ಸಂಬಂಧಗಳನ್ನು ಬೆಸೆಯುವಂತೆ ರೂಪಿಸಲಾಗಿದೆ. ಹಳೇ ಸ್ನೇಹಿತರನ್ನು ಮತ್ತೆ ಭೇಟಿಯಾಗಲು, ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಮತ್ತು ಸಮುದಾಯದೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯಲು ಇದು ಹಿರಿಯರಿಗೆ ಉತ್ತೇಜನ ನೀಡುತ್ತದೆ.
ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ವಯೋ ವಿಕಾಸ್‌ನ ಮುಖ್ಯಸ್ಥರಾದ ಕ್ರಿಸ್ ಗೋಪಾಲ ಕೃಷ್ಣ ಅವರು, ಸಮುದಾಯ ಮತ್ತು ಸಾಮಾಜಿಕ ಚಟುವಟಿಕೆಗಳು ಬೌದ್ಧಿಕ ಆರೋಗ್ಯಕ್ಕೆ ಅತ್ಯಗತ್ಯ. ದಶಕಗಳ ಕಾಲ ನಡೆದ ಮೆದುಳಿನ ಅಧ್ಯಯನದ ಪ್ರಕಾರ ಮನಸ್ಸಿಗೆ ಉಲ್ಲಾಸ ನೀಡುವ ಸಾಮಾಜಿಕ ವಾತಾವರಣವು ವಯಸ್ಸಾದಂತೆ ಮನುಷ್ಯನಿಗೆ ಬೌದ್ಧಿಕ ಸದೃಢತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಇದರ ಜೊತೆ ನಾರಾಯಣ ಹೆಲ್ತ್‌ನ ಮುಖ್ಯಸ್ಥರು ಮತ್ತು ವಯೋ ವಿಕಾಸ್‌ನ ಸ್ಥಾಪಕ ಸದಸ್ಯರಾದ ಡಾ. ದೇವಿ ಶೆಟ್ಟಿ ಅವರು, ಜಾಗೃತಿ ಮತ್ತು ರೋಗಗಳನ್ನು ತಡೆಗಟ್ಟುವ ಆರೋಗ್ಯ ಕ್ರಮಗಳು ಕೇವಲ ಹಿರಿಯರಿಗೆ ದೀರ್ಘಾಯುಷ್ಯವನ್ನು ಮಾತ್ರವಲ್ಲದೇ, ಅವರು ಆರೋಗ್ಯಕರ ಮತ್ತು ಸ್ವತಂತ್ರ ಜೀವನವನ್ನು ನಡೆಸಲು ಅತ್ಯಗತ್ಯ. ಆರಂಭಿಕ ಹಂತದಲ್ಲಿ ರೋಗ ಪತ್ತೆ ಮತ್ತು ನಿಯಮಿತ ತಪಾಸಣೆಗಳು ಹಿರಿಯರ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ತರಬಲ್ಲವು ಎಂದರು.
ತಲೆಮಾರುಗಳ ಜೊತೆ ಬಾಂಧವ್ಯ ಗಟ್ಟಿ
ಇನ್ನು, ಹಿರಿಯರ ಹಬ್ಬದ ಪ್ರಮುಖ ಲಕ್ಷಣ ಏನೆಂದರೆ ವಿವಿಧ ತಲೆಮಾರುಗಳ ಬಾಂಧವ್ಯವವನ್ನು ಗಟ್ಟಿಗೊಳಿಸುವುದಾಗಿದೆ. ಈ ಕಾರ್ಯಕ್ರಮದಲ್ಲಿ ಹಿರಿಯರ ಜೊತೆ ಕುಟುಂಬಗಳು, ಯುವ ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಸಮುದಾಯ ಸಂಸ್ಥೆಗಳು ಭಾಗವಹಿಸುವುದರಿಂದ ಪರಸ್ಪರ ಕಲಿಕೆ, ಸಹಾನುಭೂತಿ ಮತ್ತು ಗೌರವ ವೃದ್ಧಿಸುತ್ತದೆ. ಕುಟುಂಬ ಮತ್ತು ಸಮುದಾಯಗಳು ಒಟ್ಟಾಗಿ ಸಾಗಿದಾಗ ಹಿರಿಯರ ಯೋಗಕ್ಷೇಮವು ಇನ್ನಷ್ಟು ಹೆಚ್ಚುತ್ತದೆ ಎಂಬುದನ್ನು ಈ ಹಬ್ಬವು ಸಾರಲಿದೆ. ಘನತೆ, ಸೃಜನಶೀಲತೆ ಮತ್ತು ಸಮುದಾಯದೊಂದಿಗೆ ಹಿರಿಯರ ಹಬ್ಬ 2025, ವಯಸ್ಸಾಗುವಿಕೆಯ ಚೈತನ್ಯವನ್ನು ಗೌರವಿಸುವ ಒಂದು ವರ್ಣರಂಜಿತ ಸಮಾಗಮವಾಗಲಿದೆ. ತಮ್ಮ ಜ್ಞಾನ, ಅನುಭವ ಮತ್ತು ವಾತ್ಸಲ್ಯದಿಂದ ಸಮಾಜವನ್ನು ಉತ್ತಮಗೊಳಿಸುತ್ತಿರುವ ಹಿರಿಯರನ್ನು ಸಂಭ್ರಮಿಸಲು ಎಲ್ಲರಿಗೂ ಆದರದ ಸ್ವಾಗತವನ್ನು ಈ ಮೂಲಕ ಕೋರುತ್ತಿದ್ದೇವೆ.
ವೆಬ್‌ಸೈಟ್: https://vayah-vikas.org/
ಸಂಪರ್ಕಿಸಿ : ಜಾಯ್ಸ್ ಕುರಿಯನ್, ಸಿಆರ್‌ಎಂ ಮತ್ತು ಪಾಲುದಾರಿಕೆ ಮುಖ್ಯಸ್ಥರು
ಮೊಬೈಲ್ : 96119 11966
