ಮಾಜಿ ಸಚಿವ ದಿ. ಚೆನ್ನಿಗಪ್ಪನವರ ಪುತ್ರ ಡಿ.ಸಿ ವೇಣುಗೋಪಾಲ್ ರವರ ಸಂಭ್ರಮದ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ
*
ದಿನಾಂಕ 19-11-.2025 ಬುಧವಾರದಂದು
ಬೈರನಾಯಕನಹಳ್ಳಿಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿ ಇಂಜಿನಿಯರಿಂಗ್ ಕಾಲೇಜ್ ಅಧ್ಯಕ್ಷರು ಮತ್ತು ದಿವಂಗತ ಚೆನ್ನಿಗಪ್ಪನವರ ಪುತ್ರರಾದ ಡಿ.ಸಿ ವೇಣುಗೋಪಾಲ್ ರವರ ಹುಟ್ಟುಹಬ್ಬ ಮತ್ತು ಕಾಲೇಜ್ ಕನ್ನಡ ರಾಜ್ಯೋತ್ಸವ ಸಡಗರ ಸಂಭ್ರಮದಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ಯಲಹಂಕ ನಗರಸಭಾ ಮಾಜಿ ಅಧ್ಯಕ್ಷ ಡಾ. ಪಿ. ನಾಗಪ್ಪ, ನೆಲಮಂಗಲ ಶಾಸಕರಾದ ಶ್ರೀನಿವಾಸ್, ಹೋಟೆಲ್ ಕ್ಲಾರಿಯನ್ ಮಾಲೀಕರಾದ ಲೋಕೇಶ್ ರವರು ಮುಖ್ಯ ಅತಿಥಿಗಳಾಗಿ, ಬೈರನಾಯಕನಹಳ್ಳಿಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿ ಇಂಜಿನಿಯರಿಂಗ್ ಕಾಲೇಜ್ ಅಧ್ಯಕ್ಷರಾದ ಡಿ.ಸಿ ವೇಣುಗೋಪಾಲ್ ರವರು ಅಧ್ಯಕ್ಷರಾಗಿ, ಕಾಲೇಜ್ ಪ್ರಾಂಶುಪಾಲರಾದ ಜಗದೀಶ್ ಗೌಡ, ಮಾಜಿ ಪ್ರಾಂಶುಪಾಲರಾದ ರಮೇಶ್, ಖ್ಯಾತ ಚಿತ್ರನಟ ರಾಜೇಶ್ ಅವರ ಪುತ್ರಿ ಮತ್ತು ಇತರ ಗಣ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿ, ವೇದಿಕೆ ಅಲಂಕರಿಸಿದ್ದರು.

ನಾಡಗೀತೆಯೊಂದಿಗೆ ಪ್ರಾರಂಭವಾದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಸಿ ವೇಣು ಗೋಪಾಲ್ ಹಾಗೂ ವೇದಿಕೆ ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಗಣ್ಯರೆಲ್ಲಾ ಮಾಜಿ ಸಚಿವರಾದ ದಿ.ಚೆನ್ನಿಗಪ್ಪ ನವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಿ ಅವರನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯೆ ಜೊತೆಗೆ ಕನ್ನಡವನ್ನು ಬೆಳೆಸಿಕೊಂಡು ಪ್ರತಿಭೆಗಳಾಗಿ ಹೊರಬನ್ನಿ ದೇಶ ವಿದೇಶಗಳಲ್ಲಿ ಹುದ್ದೆಗಳನ್ನು ಅಲಂಕರಿಸಿ ಕಾಲೇಜ್ ಹೆಸರೇಳುವಂತೆ ಮಾಡಿ ಎಂಬ ಹಿತನುಡಿಯ ಅಮೂಲ್ಯ ಮಾರ್ಗದರ್ಶನಗಳನ್ನು ನೀಡಿದರು. ಎಲ್ಲಾದರೂ ಇರಿ, ಎಂತಾದರು ಇರಿ, ಎಂದೆಂದಿಗೂ ನೀವು ಕನ್ನಡಿಗರಾಗಿರಿ ಎಂದರು. ಇತರ ಗಣ್ಯರು ಮಾತನಾಡಿ ಕನ್ನಡಮ್ಮನನ್ನು ನೆನೆದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿ ದರು. ಅಧ್ಯಕ್ಷತೆ ವಹಿಸಿದ್ದ ಡಿಸಿ ವೇಣುಗೋಪಾಲ್ ಅವರು ಮಾತನಾಡಿ ಪ್ರತಿಭಾ ವಿದ್ಯಾರ್ಥಿಗಳನ್ನು ಪ್ರಸಂಶಿಸಿ, ಅವರ ಗಳು ಕಾಲೇಜಿಗೆ ತಂದುಕೊಟ್ಟ ಕೀರ್ತಿ ಶ್ಲಾಘನೀಯವಾದದು ಎಂದರು. ಬಡ ವಿದ್ಯಾರ್ಥಿಗಳಿಗೆ ಕಾಲೇಜು ಒಂದನ್ನು ತೆರೆಯಬೇಕು ಎಂಬುದು ತಂದೆಯವರ ಕನಸಾಗಿತ್ತು ಅದು ಡಾ.ಶ್ರೀ.ಶ್ರೀ.ಶ್ರೀ ಶಿವ ಕುಮಾರಸ್ವಾಮಿ ಇಂಜಿನಿಯರಿಂಗ್ ಕಾಲೇಜ್ ಆಗಿದೆ ಅವರ ಸಂಕಲ್ಪದಂತೆ ಗುರು ಹಿರಿಯರ ಆಶೀರ್ವಾದದಂತೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಡ ವಿದ್ಯಾರ್ಥಿಗಳ ಸೇವೆ ಮಾಡಬೇಕೆಂಬ ಮನಸ್ಸಿದೆ ಎಂದರು. ಈ ಸಂದರ್ಭದಲ್ಲಿ ಉನ್ನತ ವ್ಯಾಸಂಗ ಮಾಡಿ ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿ ಹಾಗೂ 100ಗ್ರಾಂ ಚಿನ್ನವನ್ನು ಬಹುಮಾನವಾಗಿ ಘೋಷಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ಶ್ರೀಯುತ ಡಿ.ಸಿ ವೇಣುಗೋಪಾಲ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿ ಆಚರಿಸಲಾಯಿತು. ವೇದಿಕೆ ಗಣ್ಯರು, ವಿವಿದೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು, ಸ್ನೇಹಿತರು ಬಂಧು ಮಿತ್ರರು ಶ್ರೀಯುತರನ್ನು ಸನ್ಮಾನಿಸಿ, ಶುಭಕೋರಿದರು. ಕಾರ್ಯಕ್ರಮದ ಆಯೋಜಕರು ವೇದಿಕೆ ಗಣ್ಯರನ್ನು ಸನ್ಮಾನಿಸಿ, ಗೌರವಿಸಿದರು. ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಿ ಕಾಲೇಜಿನ ಸಮಸ್ತ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿವಿದ ಕಡೆಯಿಂದ ಆಗಮಿಸಿದ್ದ ಗಣ್ಯರು, ಸ್ನೇಹಿತರು, ಅಭಿಮಾನಿಗಳು, ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಸಮಾರಂಭವನ್ನು ಯಶಸ್ವಿಗೊಳಿಸಿದರು.

ಉಮೇಶ್ ಯಲಹಂಕ

Leave a Reply

Your email address will not be published. Required fields are marked *