ಪಾವಗಡ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಅಹಮದ್ ಹಾಗೂ ತಂಡದವರು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆ ಪಕ್ಕದಲ್ಲಿರುವ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರಿಗೆ ಹಾಗೂ ವಸತಿ ಶಾಲೆಯ ಸಿಬ್ಬಂದಿಗೆ ಪ್ರಶ್ನಿಸಿದಾಗ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ತರಾಟೆಗೆ ತೆಗೆದುಕೊಂಡರು.
ಈ ವಸತಿ ಶಾಲೆಯಲ್ಲಿ ಸುಮಾರು 250 ಹೆಣ್ಣು ಮಕ್ಕಳಿಗೆ ಮೂಲಭೂತ ಸೌಯರ್ಕ ನೀಡದೆ ವಂಚಿಸಲಾಗಿದೆ.
ಸ್ವಚ್ಛತೆ ಇಲ್ಲದೆ ಇರೋದನ್ನ ಕಂಡು ಸ್ವತಃ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ವಚ್ಛತೆ ಮಾಡಲು ಮುಂದಾಗಿದ್ದು ವಿಶೇಷವಾಗಿತ್ತು.
ವಸತಿ ನಿಲಯದಲ್ಲಿ ಉತ್ತಮ ಶೌಚಾಲಯ ಇಲ್ಲ ಬಾಲಕಿಯರು ಮಲಗುವ ಬೆಡ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.
ವಸತಿ ಶಾಲೆಯಲ್ಲಿ ಉತ್ತಮ ಬೆಳಕು, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ನೇರವಾಗಿ ಕಂಡ ಇನ್ಸ್ಪೆಕ್ಟರ್ ಕೊಠಡಿ ಸ್ವಚ್ಛತೆ ಮಾಡಿ ಎಷ್ಟು ವರ್ಷಗಳು ಕಳೆದಿದೆ ಎಂಬುದಾಗಿ ಹೇಳಿ ಟಿ.ವಿ, ಸಿ.ಸಿ.ಕ್ಯಾಮರಾಗಳ ಮೇಲಿದ್ದ ಧೂಳನ್ನು ಸ್ವತಃ ಕ್ಲೀನ್ ಮಾಡುವ ಮೂಲಕ ಮಾದರಿಯಾದರು.
ವಸತಿ ನಿಲಯದ ಅವ್ಯವಸ್ಥೆ ಕಂಡು ಇನ್ಸ್ಪೆಕ್ಟರ್ ಸಲೀಂ ಅಹಮದ್ ಬೇಸರ ವ್ಯಕ್ತಪಡಿಸಿದರು.
ಮಕ್ಕಳಿಗಾಗಿ ಬಳಕೆಯಾಗಬೇಕಾದ ಮೇಜು, ಕುರ್ಚಿಗಳು, ಹಾಸಿಗೆಗಳು ಗುಜರಿಯಲ್ಲಿ ಕೊಳೆಯುವ ಸ್ಥಿತಿಯಲ್ಲಿ ಬಿದ್ದಿದ್ದವು.
ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಅಹಮದ್ ಅವರು ವಸತಿ ನಿಲಯದಿಂದ ನಿರ್ಗಮಿಸುವ ವೇಳೆ ಮುಖ್ಯ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಸ್ವಚ್ಛತೆ ಕಾಪಾಡಿ ಮಕ್ಕಳ ಆರೋಗ್ಯ ಕಾಪಾಡಿ ಇಲ್ಲದಿದ್ದರೆ ಮತ್ತೆ ನಾನೇ ಬಂದು ಸ್ವಚ್ಛತೆ ಮಾಡುತ್ತೇನೆ ಎಂದು ಹೇಳಿ ಹಿಂತಿರುಗಿದ್ದು ವಿಶೇಷವಾಗಿತ್ತು.
ವರದಿ:- ಕನ್ನಡದ ಕುಮಾರ್

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.