





ಮೌಂಟ್ ಎವರೆಸ್ಟ್ ಶಿಖರಾರೋಹಿಗಳಿಗೆ ‘ವೀರಶೈವ ಲಿಂಗಾಯತ ಮಹಾಸಭಾ’ ದಿಂದ ಅಭಿನಂದನೆ :
ಬ್ಯಾಟರಾಯನಪುರ ಯಲಹಂಕ. : ಕೆ.ಎಂ.ಎ.(ಕರ್ನಾಟಕ ಶಿಖರಾರೋಹಿಗಳ ಸಂಘ) ವತಿಯಿಂದ ಮೌಂಟ್ ಎವರೆಸ್ಟ್ ಶಿಖರಾರೋಹಣಕ್ಕೆ ತೆರಳಿದ ಸಹಕಾರನಗರದ ಸಂತೋಷ್ ದೇವರಾಜಪ್ಪ ಮತ್ತು ಡಾ.ಚಿನ್ಮಯ್ ಅವರನ್ನು ವೀರಶೈವ ಲಿಂಗಾಯತ ಮಹಾಸಭಾ ಬ್ಯಾಟರಾಯನಪುರ ಕ್ಷೇತ್ರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಉದ್ಯಮಿ ದೇವರಾಜಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬ್ಯಾಟರಾಯನಪುರ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಬಿ.ಎಸ್., ಪ್ರಧಾನ ಕಾರ್ಯದರ್ಶಿ ನಾಗಪ್ಪ, ಬಿಬಿಎಂಪಿ ಘಟಕದ ಉಪಾಧ್ಯಕ್ಷೆ ಸ್ವರ್ಣಗೌರಿ, ವೀರಶೈವ ಸಮುದಾಯದ ಮುಖಂಡರಾದ ಲಕ್ಕನಗೌಡ, ನಂಜೇಗೌಡ, ಶಿವಕುಮಾರ್, ಶರಣು ಹೂಗಾರ್, ಶಿವಶಂಕರ್, ಮನೋಹರ್ ಸೇರಿದಂತೆ ಇನ್ನಿತರರಿದ್ದರು.
