








ಬೆಂಗಳೂರು : ಶ್ರೀ ರಾಮನವಮಿ ಪ್ರಯುಕ್ತ ನಗರದ ಕುಮಾರ ಕೃಪ ಬಳಿ ಇರುವ ಸಿಂಧಿ ಸೇವಾ ಸಮಿತಿಯ. ಮಕ್ಕಳಿಂದ ಬಹಳ ಶಾಂತಿಯಿಂದ. ವಿಶ್ವಶಾಂತಿಗಾಗಿ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಕುರಿತು ಹಿಂದಿ ಸೇವಾ ಸಮಿತಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್ ದೀಪಕ್ ನಾರಾಯಣ್ ಮತ್ತು ಅಧ್ಯಕ್ಷರು ಪ್ರಕಾಶ್ ಮಾದ್ವಾನಿ ಮಾತನಾಡಿ ‘ ಯುದ್ಧದ ವಾತಾವರಣ ದೃಷ್ಟಿ ಯಾಗಿರುವ ಇಂದಿನ ದಿನಗಳಲ್ಲಿ ವಿಶ್ವಶಾಂತಿ, ಸಹನೆ, ಸಹಬಾಳ್ವೆ ಅತ್ಯಗತ್ಯವಾಗಿದ್ದು, ಹನುಮಾನ್ ಚಾಲೀಸಾ ಪಠಣದಿಂದ ಮನುಷ್ಯನಿಗೆ ನಿಶ್ಚಿತವಾಗಿಯೂ ಮಾನಸಿಕ ನೆಮ್ಮದಿ ಶಾಂತಿ ನೆಲೆಸುತ್ತದೆ, ಈ ದೆಸೆಯಲ್ಲಿ ಸಿಂಧಿ ಸೇವಾ ಸಮಿತಿ ವತಿಯಿಂದ ಶ್ರೀ ರಾಮನವಮಿ ಪ್ರಯುಕ್ತ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಮಕ್ಕಳಿಂದ ಹಾಗೂ ಹಿರಿಯರಿಂದ ಏರ್ಪಡಿಸಲಾಗಿದ್ದು, ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಹೊಕ್ಕೊರಲಿನಿಂದ ಹನುಮಾನ್ ಚಾಲೀಸಾ ಪಠಣ ಶಾಂತಿಯಿಂದ ಶ್ರದ್ದೆಯಿಂದ ಪಾಲ್ಗೊಂಡರು ಇದರಿಂದ ವಿಶ್ವಶಾಂತಿ, ಸಂಘರ್ಷ ರಹಿತ ಸಮಾಜ ನಿರ್ಮಾಣವಾಗುತ್ತದೆ ಎಂಬ ಪ್ರಬಲವಾದ ನಂಬಿಕೆ ಇದೆ ಎಂದರು.
ಹನುಮಾನ್ ಚಾಲೀಸಾ ಭಕ್ತ ಶಿರೋಮಣಿ ಹನುಮಂತನನ್ನು ಸ್ತುತಿಸುವ 40 ಚೌಪದಿಗಳ ಸ್ತೋತ್ರವಾಗಿದೆ. ಇದನ್ನು 16ನೇ ಶತಮಾನದಲ್ಲಿ ಮಹಾಕವಿ ತುಳಸೀದಾಸರು ಅವಧಿ ಭಾಷೆಯಲ್ಲಿ ರಚಿಸಿದ್ದಾರೆ.
ಚಾಲೀಸ್ ಮಹತ್ವ: ಇದನ್ನು ಪಠಿಸುವುದರಿಂದ ಭಯ ದೂರವಾಗಿ, ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ ಎಂಬುದು ಭಕ್ತರ ನಂಬಿಕೆ.
ವಿಶೇಷತೆ: ಇದರಲ್ಲಿ ಹನುಮಂತನ ಶಕ್ತಿ, ಬುದ್ಧಿವಂತಿಕೆ ಮತ್ತು ರಾಮನ ಮೇಲಿರುವ ಭಕ್ತಿಯನ್ನು ಮನೋಜ್ಞವಾಗಿ ವರ್ಣಿಸಲಾಗಿದೆ. ದೇಶದ ಜನರಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು
ಕಾರ್ಯಕ್ರಮದಲ್ಲಿ ಸಿಂಧಿ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಮಾಧ್ವಾನಿ, ದೀಪಕ್ ನಾರಾಯಣ್ ಸತ್ಯನ್ ಎಂ. ಛಾಬ್ರಿಯ ಸೇರಿದಂತೆ ಹಲವಾರು ಸಂಖ್ಯಾತ ರಾಮಭಕ್ತರಿದ್ದರು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು
