‘ನವರತ್ನ ಪ್ರೀಮಿಯರ್ ಲೀಗ್(NPL)’ ಸೀಸನ್ 4 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ :
ಬ್ಯಾಟರಾಯನಪುರ : ಗ್ರಾಮೀಣ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ದೆಸೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರದ ‘ನವರತ್ನ ಕ್ರಿಕೆಟ್ ಅಸೋಸಿಯೇಷನ್’ ವತಿಯಿಂದ ಆಯೋಜಿಸಿರುವ ‘ನವರತ್ನ ಪ್ರೀಮಿಯರ್ ಲೀಗ್’ ಸೀಸನ್ 4 ಕ್ರಿಕೆಟ್ ಪಂದ್ಯಾವಳಿಗೆ ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಮಹೇಶ್ ಶನಿವಾರ ಗ್ರಾಮದ ಮುಖಂಡರೊಂದಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನವರತ್ನ ಅಗ್ರಹಾರ ಗ್ರಾಮದಲ್ಲಿರುವ ಯುವ ಕ್ರಿಕೆಟ್ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನವರತ್ನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದ್ದು ಇದು ನಾಲ್ಕನೆಯ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಯುವಕರಲ್ಲಿನ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಿಸುವುದರ ಜೊತೆಗೆ ಗ್ರಾಮದ ಒಗ್ಗಟ್ಟನ್ನು ಕಾಪಾಡುವುದು ಈ ಪಂದ್ಯಾವಳಿ ಆಯೋಜನೆಯ ಹಿಂದಿನ ಪ್ರಮುಖ ಧ್ಯೇಯವಾಗಿದೆ, ಈ ಪಂದ್ಯಾವಳಿ ಒಟ್ಟು ಎರಡು ದಿನಗಳವರೆಗೆ ನಡೆಯಲಿದ್ದು ಆರಂಭದ ದಿನವಾದ ಇಂದು ಲೀಗ್ ಪಂದ್ಯಗಳು ನಡೆಯಲಿವೆ ಅಂತಿಮ ದಿನವಾಗಿರುವ ಭಾನುವಾರದಂದು ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಸಂಜೆ ವಿಜೇತ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಸೇರಿದಂತೆ ಪ್ರೋತ್ಸಾಹದಾಯಕ ಹಾಗೂ ಆಕರ್ಷಕ ಉಡುಗೊರೆ ನೀಡಲಾಗುವುದು. ನಾಲ್ಕನೇ ಆವೃತ್ತಿಯ ಈ ಪಂದ್ಯಾವಳಿಯಲ್ಲಿ ನವರತ್ನ ಲೆಜೆಂಡ್ಸ್ (ರಮೇಶ್), ನವರತ್ನ ಲಯನ್ಸ್ (ಶ್ರೀನಿವಾಸ್ ಸಿ.), ನವರತ್ನ ಟೈಗರ್ಸ್ (ಶ್ರೀನಿವಾಸ್ ಎಂ.), ನವರತ್ನ ಈಗಲ್ಸ್ (ಗೋವಿಂದರಾಜು ವೆಂಕಟೇಶ್), ನವರತ್ನ ಕಿಂಗ್ ಫೈಟರ್ಸ್(ನರಸಿಂಹಯ್ಯ), ನವರತ್ನ ಡ್ರ್ಯಾಗನ್ಸ್(ಜನಾರ್ಧನ್), ಎಂಬ ನುರಿತ ಕ್ರಿಕೆಟ್ ಆಟಗಾರರನ್ನು ಒಳಗೊಂಡ 6 ತಂಡಗಳಿದ್ದು, ಎಲ್ಲಾ ತಂಡಗಳು ನವರತ್ನ ಅಗ್ರಹಾರ ಒಂದೇ ಗ್ರಾಮದ ಯುವ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡಿರುವ ತಂಡಗಳಾಗಿವೆ. ಮಾಲೀಕರು ಪ್ರತಿ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ಖರೀದಿಸಿರುತ್ತಾರೆ. ಇದೊಂದು ಗ್ರಾಮ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಗಿದ್ದರೂ ಸಹ ಪ್ರತಿ ಹಂತದಲ್ಲೂ ಐಪಿಎಲ್ ಮಾದರಿಯನ್ನು ಅನುಸರಿಸಲಾಗಿರುತ್ತದೆ. ಗ್ರಾಮ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಐಪಿಎಲ್ ಮಾದರಿಯ ಸ್ಪರ್ಶ ನೀಡಿದ ರಾಜ್ಯದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ನವರತ್ನ ಅಗ್ರಹಾರ ಭಾಜನವಾಗಿರುವುದು ಸಂತೋಷದ ಜೊತೆಗೆ ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಪ್ರಾಯೋಜಕರಾದ ಆನಂದ್, ಕ್ರಿಕೆಟ್ ತರಬೇತುದಾರರಾದ ನಾರಾಯಣಸ್ವಾಮಿ, ಪ್ರಕಾಶ್, ಚಂದ್ರಶೇಖರ್, ಪವನ್, ಎಸ್ ಎಲ್ ಆರ್, ಶುಶ್ರುತ್ ಎನ್., ತಂಡಗಳ ನಾಯಕರಾದ ಸುಬ್ರಮಣಿ, ಚೇತನ್, ಕೇಶವ, ಶರತ್, ಪ್ರದೀಪ್(ಮುತ್ತು), ಆಕಾಶ್, ಗ್ರಾಮದ ಮುಖಂಡರಾದ ಚನ್ನಕೇಶವ, ಚಂದ್ರಪ್ಪ, ರಾಜೇಶ್ ಜಿ ವಿ., ನಾರಾಯಣಸ್ವಾಮಿ (ಅಪ್ಪಿ), ರಾಜು, ಮುನಿಕೃಷ್ಣ, ಸತೀಶ್, ರಾಕಿ, ಮಂಜುನಾಥ್, ಮುನಿಯಪ್ಪ, ಸಂತೋಷ್ ಸೇರಿದಂತೆ ಗ್ರಾಮದ ಹಲವು ಮುಖಂಡರಿದ್ದರು.

Leave a Reply

Your email address will not be published. Required fields are marked *