ಪಂದ್ಯಾವಳಿಯಲ್ಲಿ ಗ್ರಾಮದ ಒಗ್ಗಟ್ಟು, ಐಕ್ಯತೆ ಗೆದ್ದಿದೆ : ಎನ್.ಕೆ.ಮಹೇಶ್ ಕುಮಾರ್
ಎನ್.ಪಿ.ಎಲ್. ಸೀಸನ್-4 ಕ್ರಿಕೆಟ್ ಪಂದ್ಯಾವಳಿ : ಟ್ರೋಫಿ ಮುಡಿಗೇರಿಸಿಕೊಂಡ ನವರತ್ನ ಟೈಗರ್ಸ್ ತಂಡ :
ಬ್ಯಾಟರಾಯನಪುರ : ನವರತ್ನ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದು ತಂಡ ಗೆದ್ದಿದೆ ಎನ್ನುವುದಕ್ಕಿಂತ ನವರತ್ನ‌ ಅಗ್ರಹಾರ ಗ್ರಾಮದ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಗೆದ್ದಿದೆ ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರ ಗ್ರಾಮದಲ್ಲಿ ಗ್ರಾಮದ ಮುತ್ಸದ್ಧಿ ಮುಖಂಡರ ಸಹಕಾರದೊಂದಿಗೆ ನವರತ್ನ ಕ್ರಿಕೆಟ್ ಅಸೋಸಿಯೇಷನ್ (ಎನ್.ಸಿ.ಎಲ್.)ವತಿಯಿಂದ ಆಯೋಜಿಸಿದ್ದ ‘ನವರತ್ನ ಪ್ರಿಮಿಯರ್ ಲೀಗ್’ ಸೀಸನ್-4 ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದ ಎಂ.ಶ್ರೀನಿವಾಸ್ ಅವರ ಮಾಲೀಕತ್ವದ ನವರತ್ನ ಟೈಗರ್ಸ್ ತಂಡಕ್ಕೆ ಟ್ರೋಫಿ ಮತ್ತು 1 ಲಕ್ಷ ನಗದು ಬಹುಮಾನ ವಿತರಣೆ ಮಾಡಿದ ನಂತರ ಮಾತನಾಡಿದ ಅವರು ‘ನಾಲ್ಕು ವರ್ಷಗಳ ಹಿಂದೆ ಗ್ರಾಮದ ಮುಖಂಡರ ಸಹಕಾರದೊಂದಿಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಯನ್ನು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮಾದರಿಯಲ್ಲಿ ಎನ್.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಹೊಸದೊಂದು ಕ್ರೀಡಾ ಪರಂಪರೆಗೆ ನವರತ್ನ ಅಗ್ರಹಾರ ಗ್ರಾಮ ಸಾಕ್ಷಿಯಾಗಿತ್ತು. ಅಂದಿನಿಂದ ಇಂದಿನವರೆಗೆ ವರ್ಷ ಕಳೆದಂತೆ ಹೆಚ್ಚಿನ ಯಶಸ್ಸು ಗಳಿಸಿಕೊಳ್ಳುತ್ತಿರುವ ಎನ್.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿ, ಗ್ರಾಮದ ಯುವ ಕ್ರಿಕೆಟ್‌ ಆಟಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಗ್ರಾಮದಲ್ಲಿ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಹೆಚ್ಚಿಸುವಲ್ಲಿ ಸಹ ಯಶಸ್ವಿಯಾಗಿದೆ. ಈ ಪಂದ್ಯಾವಳಿಯಲ್ಲಿ ನವರತ್ನ ಟೈಗರ್ಸ್ ತಂಡ ಸಾಂಕೇತಿಕವಾಗಿ ಗೆದ್ದು ಟ್ರೋಫಿ ಮುಡಿಗೇರಿಸಿ ಕೊಂಡಿದೆಯಾದರೂ, ವಾಸ್ತವಿಕವಾಗಿ ನವರತ್ನ ಅಗ್ರಹಾರ ಗ್ರಾಮದ ಒಗ್ಗಟ್ಟು, ಐಕ್ಯತೆ, ಸಾಮರಸ್ಯ ಗೆದ್ದಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸ್ವಾಸ್ತ್ಯ ಕಾಪಾಡುವುದರ ಜೊತೆಗೆ ಯುವಕರಲ್ಲಿ ಸಾಮಸ್ಯದ ಸ್ವಾಸ್ತವನ್ನು ಸಹ ಕಾಪಾಡುವಂತಾಗಬೇಕು. ಕ್ರೀಡೆಯ ಗೆಲುವಿನೊಂದಿಗೆ ನಮ್ಮ ಸ್ನೇಹ,ಸಂಬಂಧ, ಒಗ್ಗಟ್ಟು ಸಹ ಗಟ್ಟಿಯಾಗಬೇಕು, ಇದು ನಿಜವಾದ ಗೆಲುವು. ಈ ದಿಸೆಯಲ್ಲಿ ನವರತ್ಮ ಅಗ್ರಹಾರ ಗ್ರಾಮ ಮುಂಚೂಣಿಯಲ್ಲಿದೆ ಎಂಬುದು ಹೆಮ್ಮೆಯ ಸಂಗತಿ. ಕ್ರಿಕೆಟ್ ಕ್ರೀಡೆಯಲ್ಲಿ ಸಹಜವಾಗಿ ಒಂದು ತಂಡಕ್ಕೆ ಮಾತ್ರ ಗೆಲುವು ಸಿಗುತ್ತದೆ ಆದರೆ ಆ ಗೆಲುವು ಕೇವಲ ಅದೊಂದು ತಂಡದ ಗೆಲುವಾಗಬಾರದು ಅದು ಕ್ರಿಕೆಟ್ ನ ಗೆಲುವಾಗಬೇಕು, ಗ್ರಾಮದ ಯುವಕರ ಕ್ರೀಡಾಸ್ಪೂರ್ತಿಯ ಗೆಲುವಾಗಬೇಕು, ಪರಸ್ಪರ ಸ್ನೇಹ, ಒಗ್ಗಟ್ಟು, ಸಾಮರಸ್ಯದ ಗೆಲುವಾಗಬೇಕು ಹಾಗಾದಗ ಪಂದ್ಯಾವಳಿ ಆಯೋಜನೆ ಸಾರ್ಥಕವಾಗುತ್ತದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂ.ಶ್ರೀನಿವಾಸ್ ಮಾಲೀಕತ್ವದ ನವರತ್ನ ಟೈಗರ್ಸ್ ತಂಡ ವಿಜೇತ ತಂಡವಾಗಿ ಹೊರಹೊಮ್ಮಿ 1 ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ಮುಡಿಗೇರಿಸಿಕೊಂಡಿತು. ಸಿ.ಶ್ರೀನಿವಾಸ್ ಮಾಲೀಕತ್ವದ ನವರತ್ನ ಲಯನ್ಸ್ ತಂಡ ರನ್ನರ್ ಅಪ್ ಸ್ಥಾನ ಗಳಿಸಿ 50 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು.
ಇದೇ ಸಂದರ್ಭದಲ್ಲಿ ತಂಡಗಳ ಮಾಲೀಕರಾದ ಎಂ.ಶ್ರೀನಿವಾಸ್ (ನವರತ್ನ ಟೈಗರ್ಸ್), ಸಿ.ಶ್ರೀನಿವಾಸ್(ನವರತ್ನ ಲಯನ್ಸ್), ರಮೇಶ್(ನವರತ್ನ ಲೆಜೆಂಡ್ಸ್), ಗೋವಿಂದರಾಜು,ವೆಂಕಟೇಶ್ (ನವರತ್ನ ಈಗಲ್ಸ್), ನರಸಿಂಹಯ್ಯ(ಕಿಂಗ್ ಫೈಟರ್ಸ್), ಜನಾರ್ದನ್(ನವರತ್ನ ಡ್ರ್ಯಾಗನ್ಸ್), ಆಯೋಜಕರಾದ ಎ.ಸಿ.ಎಲ್.ಆನಂದ್, ತರಬೇತುದಾರರಾದ ಚಂದ್ರಶೇಖರ್, ಪ್ರಕಾಶ್, ನಾರಾಯಣಸ್ವಾಮಿ, ಎಸ್ ಎಲ್ ಆರ್, ಪವನ್, ಶುಶ್ರುತ್ ಎನ್., ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ(ಅಪ್ಪಿ), ಚನ್ನಕೇಶವ, ರಾಜೇಶ್ ಜಿ.ವಿ., ಚಂದ್ರಪ್ಪ, ರಾಜು, ಮುನಿಕೃಷ್ಣ, ಸತೀಶ್(ರಾಕಿ), ಮಂಜುನಾಥ್, ಮುನಿಯಪ್ಪ, ಸಂತೋಷ್, ತಂಡಗಳ ನಾಯಕರಾದ ಕೇಶವ, ಸುಬ್ರಮಣಿ, ಚೇತನ್, ಶರತ್, ಪ್ರದೀಪ್(ಮುತ್ತು), ಆಕಾಶ್ ಸೇರಿದಂತೆ ಗ್ರಾಮಸ್ಥರಿದ್ದರು.
ಕಾರ್ಯಕ್ರಮದಲ್ಲಿ ತಂಡಗಳ ಮಾಲೀಕರು, ತರಬೇತುದಾರರು, ನಾಯಕರು ಸೇರಿದಂತೆ ಗ್ರಾಮದ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *