ರಸ್ತೆಯ ಕೆರೆಯ ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆ
ರಸ್ತೆಯೋ ಇದು ಕೆರೆಯೋ… ತಿಳಿಯದಾಗಿದೆ ಅಣ್ಣಾ!
ನಮ್ಮೂರಿನ ರಸ್ತೆ ಸೂಪರ್ರು… ನೋಡೋಕೆ ಬನ್ನಣ್ಣಾ!
ಗುಂಡಿ ಒಳಗಡೆ ರಸ್ತೆ ಇದೆಯೋ… ರಸ್ತೆ ಒಳಗಡೆ ಗುಂಡಿ ಇದೆಯೋ…
ನಡೆದು ಹೋಗುವ ಮುನ್ನ ನೀನು… ಸ್ವಲ್ಪ ಯೋಚಿಸು ಚಿನ್ನಾ!
ಬಂಡಿ ಓಡಿಸೋ ಸಾಹಸ ನಮ್ದು, ಬೋಟಿಂಗ್ ಮಾಡೋ
ರಸ್ತೆ ಗುಂಡಿಗೆ ಬಿದ್ದರೆ ಸಾಕು, ಸೊಂಟ ಮೂಳೆ ಡ್ಯಾಮೇಜು!
ಅಧಿಕಾರಿಗಳ ಗಮನ ಇಲ್ಲ… ಕಂಟ್ರ್ಯಾಕ್ಟರ್ರಿಗೂ ಕೇರಿಲ್ಲ…
ಜನರ ಕಷ್ಟ ಕೇಳೋಕೆ ಇಲ್ಲಿ… ಯಾರು ಇಲ್ವಲ್ಲಾ! ||

ಮುಂಜಾನೆ ಎದ್ದು ಗಾಡಿ ತಗೆದ್ರೆ, ಸಾಹಸ ಯಾನ ಶುರು ಕಣೋ,
ಸಣ್ಣ ಮಳೆ ಬಂದರೂ ಸಾಕು, ಈಜು ಕೊಳವೇ ರೆಡಿ ಕಣೋ!
ಟೂ-ವೀಲರ್ ಸವಾರರೆಲ್ಲಾ ಜಂಪಿಂಗ್ ಜಿಪಾಂಗ್ ಆಡ್ತಾರೆ,
ಆಟೋ, ಕಾರು ಓಡಿಸೋರೆಲ್ಲಾ ಹರಕೆ ಹೊರತಾ ಸಾಗ್ತಾರೆ!
ರೋಡ್ ತುಂಬಾ ನೀರು… ಮನಸಲ್ಲಿದೆ ಬೇಸರ ನೂರು! ||

ಬಂಡವಾಳ ಹಾಕಿ ರೋಡು ಮಾಡಿದ್ರು, ಒಂದೇ ಮಳೆಗೆ ಕೊಚ್ಚಿ ಹೋಯ್ತು,
ಜನರ ಟ್ಯಾಕ್ಸು ದುಡ್ಡೆಲ್ಲಾ ಹೀಗೆ… ಗುಂಡಿ ಪಾಲಾಗಿ ಹೋಯ್ತು!
ಬೆಕ್ಕಿನ್ ತರಹ ಹಾರಬೇಕು, ಕಪ್ಪೆ ತರಹ ಜಿಗಿಯಬೇಕು,
ಮನೆಗೆ ಸೇರೋ ತನಕ ಜೀವ… ಕೈಲಿ ಹಿಡಿದು ಸಾಗಬೇಕು!
ಕಣ್ಣು ಬಿಟ್ಟು ನೋಡಿ ಸ್ವಾಮಿ… ಈ ರಸ್ತೆನಾ ರಿಪೇರಿ ಮಾಡಿ ಸ್ವಾಮಿ! ||

Leave a Reply

Your email address will not be published. Required fields are marked *