ಗಂಗೊಂಡನಹಳ್ಳಿ ಕುರುಬರ ಸಂಘದ ನೂತನ ಕಚೇರಿ ಉದ್ಘಾಟನೆ :

ಯಲಹಂಕ : ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ‘ಗಂಗೊಂಡನಹಳ್ಳಿ ಕುರುಬರ ಸಂಘದ ನೂತನ ಕಚೇರಿಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳಿಗೂ ಅಗತ್ಯ ಪ್ರಾತಿನಿಧ್ಯ ನೀಡುವ ದಿಸೆಯಲ್ಲಿ ಸಮುದಾಯ ಭವನಗಳು, ವಿದ್ಯಾರ್ಥಿ ನಿಲಯಗಳು ಸೇರಿದಂತೆ ಸೇವಾ ಭವನ, ಕಟ್ಟಡಗಳನ್ನು ನಿರ್ಮಿಸಿಕೊಡಲಾಗಿದೆ. ಅದೇ ರೀತಿಯಲ್ಲಿ ಕುರುಬ ಸಮಾಜದ ಸಾಮುದಾಯಿಕ ಏಳಿಗೆಗಾಗಿ ವಿವಿಧ ಗ್ರಾಮಗಳಲ್ಲಿ ಕನಕ ಭವನಗಳನ್ನು ನಿರ್ಮಿಸಿ ಕೊಡಲಾಗಿದ್ದು, ವಿಶೇಷವಾಗಿ ಯಲಹಂಕ ಕ್ಷೇತ್ರದ ಬ್ಯಾಲಕೆರೆ ಗ್ರಾಮದ ಸರ್ವೆ ನಂ. 130ರಲ್ಲಿ ಬೃಹತ್ ಕನಕ ಭವನ ನಿರ್ಮಾಣಕ್ಕಾಗಿ 1 ಎಕರೆ 20 ಗುಂಟೆ ಜಾಗ ನೀಡಲಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಪ್ರಾರಂಭಿಸ ಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಕೊಳ್ಳಿಗಾನಹಳ್ಳಿ ವೆಂಕಟೇಶ್, ಮುಖಂಡರಾದ ಗಂಗೊಂಡನಹಳ್ಳಿ ನಾಗರಾಜ್, ಕೇಶವಮೂರ್ತಿ, ಶಶಿಕುಮಾರ್, ಮಾದನಾಯಕ ನಹಳ್ಳಿ ಪುರಸಭೆ ಸಿಇಒ ಕಾಂತರಾಜು ಸೇರಿದಂತೆ ಕುರುಬ ಸಮುದಾಯದ ಹಲವು ಮುಖಂಡರಿದ್ದರು.

Leave a Reply

Your email address will not be published. Required fields are marked *