ಶ್ರೀ ಅಣ್ಣಮ್ಮ ದೇವಿಯ 16ನೇ ವಾರ್ಷಿಕೋತ್ಸವ
ಕೋಗಿಲು ಬಡಾವಣೆ
ಬೆಂಗಳೂರು ಯಲಹಂಕ ಸುದ್ದಿ ಶ್ರೀ ಅಣ್ಣಮ್ಮ ದೇವಿ, ಶ್ರೀ ಮುತ್ತು ಮಾರಿಯಮ್ಮ ದೇವಿ ಹಾಗೂ ಶ್ರೀ ಪೂಜಮ್ಮ ಮಹಾಲಕ್ಷ್ಮಿ ದೇವಿ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ
ವಿಳಾಸ: 1ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ, ಬಂಡೆ ರೋಡ್, ಕೋಗಿಲು ಬಡಾವಣೆ, ಯಲಹಂಕ, ಬೆಂಗಳೂರು- 560 064.
ದಿನಾಂಕ: 05-06-2026 ಶುಕ್ರವಾರದಿಂದ 08-06-2026ರ ಸೋಮವಾರದ ವರೆಗೆ.
ಆತ್ಮೀಯ ಆಮಂತ್ರಣ
ಕಾರ್ಯಕ್ರಮಗಳ ವಿವರ
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷಂಗಳು 1948ಕ್ಕೆ ಸರಿಯಾಗಿ ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣೇ, ಗ್ರೀಷ್ಮಋತು ಅಧಿಕ ಜ್ಯೇಷ್ಠಮಾಸ ಕೃಷ್ಣಪಕ್ಷ.
ದಿನಾಂಕ: 05/06/2026, ಶುಕ್ರವಾರ
ಮಧ್ಯಾಹ್ನ 12:00 ಗಂಟೆಗೆ: ಕಳಸಗನ್ನಡಿಯೊಂದಿಗೆ ಕೋಗಿಲು ಬಡಾವಣೆ ಹಾಗೂ ಅಗ್ರಹಾರ ಬಡಾವಣೆ ಮಕ್ಕಳ ಕುಣಿತದೊಂದಿಗೆ ಶ್ರೀ ಅಣ್ಣಮ್ಮ ದೇವಿ, ಶ್ರೀ ಮುತ್ತು ಮಾರಿಯಮ್ಮ ದೇವಿ, ಶ್ರೀ ಪೂಜಮ್ಮಮಹಾಲಕ್ಷ್ಮಿದೇವಿ ಆಗಮನದೊಂದಿಗೆ ಪ್ರತಿಷ್ಠಾಪನ ಪೂಜೆ.
ಸಂಜೆ 6 ಗಂಟೆಗೆ: ಶ್ರೀ ವೆಂಕಟೇಶ್ವರ ಸ್ವಾಮಿ ಭಜನೆ ಮಂಡಳಿ ಕೋಗಿಲು ಬಡಾವಣೆ ಹಾಗೂ ಶ್ರೀ ವೇಣುಗೋಪಾಲ ಸ್ವಾಮಿ ಭಜನೆ ಮಂಡಳಿ ಕೋಗಿಲು ರವರ ವತಿಯಿಂದ ಭಜನಾ ಕಾರ್ಯಕ್ರಮ.
ರಾತ್ರಿ 8:00 ಗಂಟೆಗೆ: ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ.
ದಿನಾಂಕ: 06/06/2026, ಶನಿವಾರ
ಬೆಳಗ್ಗೆ 9 ಗಂಟೆಗೆ: ಅಮ್ಮನವರ ಸನ್ನಿಧಿಯಲ್ಲಿ ದುರ್ಗಾಹೋಮ.
ಸಂಜೆ 05:00 ಗಂಟೆಗೆ: ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮೆರವಣಿಗೆಯೊಂದಿಗೆ ಬೆಲ್ಲದಾರತಿ ಸೇವೆಗಳು.
ಸಂಜೆ 6:00 ಗಂಟೆಗೆ: ‘ ಶ್ರೀಕೃಷ್ಣ ಕಲಾಲಯ ಸುನಿತಾ ಸುಕುಮಾರನ್ ತಂಡ ಇವರ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮ ಮತ್ತು ಜಾನಪದ ಕಾರ್ಯಕ್ರಮಗಳು.
ರಾತ್ರಿ 8:00 ಗಂಟೆಗೆ: ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ.
ದಿನಾಂಕ: 07/06/2026, ಭಾನುವಾರ
ಬೆಳಗ್ಗೆ 07:00 ಗಂಟೆಗೆ: ಅಣ್ಣಮ್ಮ, ಮುತ್ತು ಮಾರಿಯಮ್ಮ ಮತ್ತು ಪೂಜಮ್ಮದೇವಿಗಳಿಗೆ ತಂಬಿಟ್ಟಿನ ಆರತಿ.
ಬೆಳಗ್ಗೆ 08:00 ಗಂಟೆಗೆ: ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ.
ದಿನಾಂಕ: 08/06/2026, ಸೋಮವಾರ
ಮಧ್ಯಾಹ್ನ 12:00 ಗಂಟೆಗೆ: ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗದೊಂದಿಗೆ ಕೋಗಿಲು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಶ್ರೀ ಅಣ್ಣಮ್ಮ, ಮುತ್ತು ಮಾರಿಯಮ್ಮ ಮತ್ತು ಪೂಜಮ್ಮದೇವಿಗಳಿಗೆ ತಮಟೆ-ವಾದ್ಯಗಳೊಂದಿಗೆ ಬೆಳ್ಳಿ ರಥದ ಅದ್ದೂರಿ ಮೆರವಣಿಗೆ ನಂತರ ಬೀಳ್ಕೊಡಲಾಗುವುದು.
ಸರ್ವರಿಗೂ ಭಕ್ತಿಪೂರ್ವಕ ಸುಸ್ವಾಗತ ದಯವಿಟ್ಟು ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀ ಅಣ್ಣಮ್ಮ ದೇವಿಯ ಭಕ್ತಾದಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಆ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅಣ್ಣಮ್ಮ ದೇವಿಯ ಭಕ್ತಾದಿಗಳು ವಿನಂತಿ ಪ್ರಕಟಣೆ .ಬಯಲು ಸಿಂಹ ದಿನಪತ್ರಿಕೆ ಹಾಗು ಪಬ್ಲಿಕ್ ಪವರ್ ಪತ್ರಿಕೆಯ ಸಂಪಾದಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು

Leave a Reply

Your email address will not be published. Required fields are marked *