ಹುಬ್ಬಳ್ಳಿ :- ನಗರದ ಹೊಸುರ ಯಾವಗಲ್ ಪ್ಲಾಟ್ ನಿವಾಸಿಗಳಿಗೆ ಮನೆ ಹಕ್ಕು ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ನಿರ್ಮಾಣ ಅನುಮೋದನೆ ನೀಡಬೇಕೆಂದು ಮನವಿ ನೀಡಲಾಯಿತು ಎಂದು ಅಧ್ಯಕ್ಷ ರಾಹುಲ್ ಉಪ್ಪಲದಡ್ಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಯಾವಗಲ್ ಪ್ಲಾಟ್ ನಿವಾಸಿಗಳ ಪರವಾಗಿ ತಮ್ಮಲ್ಲಿ ವಿನಯ ಪೂರ್ವಕ ವಿನಂತಿಸಿಕೊಳ್ಳುವುದೇನೆಂದರೆ ಸುಮಾರು ನೂರು ವರ್ಷಗಳಿಂದ ಯಾವಗಲ್ ಪ್ಲಾಟಿನಲ್ಲಿ ಎಲ್ಲಾ ಜಾತಿ ಜನಾಂಗದವರು ವಾಸ ಮಾಡುತ್ತಿದ್ದು ಆದರೆ ಹಕ್ಕು ಪತ್ರ ನೀಡಿರುವುದಿಲ್ಲ 1975ರಲ್ಲಿ ಯಾವಗಲ್ ಫ್ಲಾಟ್ ಅನ್ನು ಸ್ಲಂ ಎಂದು ಘೋಷಿಸಿದ್ದಾರೆ ಹಾಗಾಗಿ ಗೌರವಾನ್ವಿತ ಸಚಿವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಯಾವಗಲ್ ಫ್ಲಾಟ್ ನಿವಾಸಿಗಳು ಎದುರಿಸುತ್ತಿರುವ ದೀರ್ಘಕಾಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು ಎಂದು ನಾವು ನಂಬುತ್ತೇವೆ ಹಕ್ಕು ಪತ್ರ ದೃಢೀಕರಣವನ್ನು ಒದಗಿಸುವ ಮೂಲಕ ನಾವು ನಮ್ಮ ಸಮುದಾಯದ
ಸದಸ್ಯರ ಜೀವನವನ್ನು ಉನ್ನತೀಕರಿಸಬಹುದು ಮತ್ತು ಹೆಚ್ಚು ಸುರಕ್ಷಿತ ಮತ್ತು ಘನತೆಯ ಜೀವನವನ್ನು ನಡೆಸಲು ಅವರಿಗೆ ಅಧಿಕಾರ ನೀಡಬೇಕೆಂದು ಮನವಿ ಸಲ್ಲಿಸಿ ಸಚಿವರಿಗೆ ಕೇಳಿಕೊಳ್ಳಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಸಿಂ ದಾಲವಾಲೆ, ಪ್ರದೀಪ್ ಉಪ್ಪಲದಡ್ಡಿ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವಗಲ್ ಸ್ಲಂ ನಿವಾಸಿಗಳ ಮನವಿ.

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.