ಕರ್ನಾಟಕ ಕಬ್ಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿ :

ಹೊಯ್ಸಳ ಎಂಪೈರ್ ತಂಡದ ಲೋಗೋ ಅನಾವರಣ :

ಯಲಹಂಕ : ‘ಫೈವ್ ಎನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್’ ಮತ್ತು :ಕರ್ನಾಟಕ ರಾಜ್ಯ ಅಮೆಜೂರ್ ಕಬಡ್ಡಿ ಸಂಸ್ಥೆ’ ಸಯೋಗದಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ‘ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿ’ಯ ‘ಹೊಯ್ಸಳ ಎಂಪೈರ್ ಹಾಸನ’ ತಂಡದ ಅಧಿಕೃತ ಲೋಗೋ ವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಗುರುವಾರ ಸಿಂಗನಾಯಕನಹಳ್ಳಿ ಅವರ ಗೃಹಪ್ರಚೇರಿಯ ಬಳಿ ಅನಾವರಣ ಗೊಳಿಸಿದರು.

ಇದೇ ವೇಳೆ ಅವರು ಮಾತನಾಡಿ ‘ಕಬಡ್ಡಿ ಭಾರತದ ದೇಸಿ ಕ್ರೀಡೆ ಯಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಆಟವಾಗಿದೆ. ಬಾಲ್ಯದಲ್ಲಿ ನಾನು ಸಹ ಕಬಡ್ಡಿ ಆಟಗಾರನಾಗಿ ಹಲವಾರು ಪಂದ್ಯಗಳನ್ನು ಆಡಿದ್ದೇನೆ. ಕ್ರೀಡೆಯಲ್ಲಿ ಒಂದು ತಂಡಕ್ಕೆ ಮಾತ್ರ ಗೆಲುವಿನ ಅವಕಾಶವಿರುತ್ತದೆ, ಎಲ್ಲರೂ ಗೆಲುವಿಗಾಗಿ ಪಣತೊಟ್ಟು ಆಡುವುದು ಎಷ್ಟು ಮುಖ್ಯವೋ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದು ಸಹ ಅಷ್ಟೇ ಮುಖ್ಯ, ಯುವಕರು ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುವ ಮೂಲಕ ಕ್ರೀಡೋತ್ಸಾಹವನ್ನು ಪ್ರದರ್ಶಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿಶ್ವವಾಣಿ ಫೌಂಡೇಶನ್ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಹೊಯ್ಸಳ ಎಂಪೈರ್ ತಂಡದ ಮಾಲೀಕರಾದ ಜನಾರ್ದನ ರೆಡ್ಡಿ, ಕಾವೇರಪ್ಪ, ಹಾಸನ ಜಿಲ್ಲಾ ಕಬಡ್ಡಿ ಸಂಸ್ಥೆಯ ಗೌರವಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಮಧು, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಮಾಜಿ ಉಪಾಧ್ಯಕ್ಷ ತಾತೇಗೌಡ, ಬೆಂಗಳೂರು ನಗರ ಜಿಲ್ಲಾ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ನಾರಾಯಣಸ್ವಾಮಿ, ರಾಷ್ಟ್ರೀಯ ಕಬಡ್ಡಿ ಆಟಗಾರ ಆನಂದ್(ಆರ್ ಡಬ್ಲ್ಯೂ ಎಫ್), ತರಬೇತು ದಾರರಾದ ತ್ಯಾಗರಾಜ್, 5 ಎನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಶೇಖರ್ ಮೂರ್ತಿ, ಅದರ್ವ ಡೆವಲಪರ್ಸ್ ನ ಸುನಿಲ್ ಕುಮಾರ್, ಗಿವ ಡೆವಲಪರ್ಸ್ ನ ಪಾಂಡ್ಯನ್, ಜ್ಯೋತಿ ಎಂಟರ್ಪ್ರೈಸಸ್‌ನ ಮಾಲೀಕ ತ್ರಿಲೋಕ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರಿದ್ದರು.

Leave a Reply

Your email address will not be published. Required fields are marked *