ಭಾರತದ ಮಹಿಳಾ ಉದ್ಯಮಿಗಳ ಕನಸಿಗೆ ಮತ್ತಷ್ಟು ಉತ್ತೇಜನ: ಕೋಟಕ್ ಬಿಝ್ ಲ್ಯಾಬ್ಸ್ ಮತ್ತು ಎನ್ಎಸ್ಆರ್ ಸಿಇಎಲ್ ನಿಂದ ಮಹಿಳಾ ನವೋದ್ಯಮ ಯೋಜನೆಯ ಮುಂದಿನ ಆವೃತ್ತಿ ಘೋಷಣೆ

ಮಹಿಳಾ ಉದ್ಯಮಿಗಳ ಆತ್ಮವಿಶ್ವಾಸ, ಸಂಪರ್ಕ ಜಾಲ ಮತ್ತು ಮಾಪನಾರ್ಹ ವಹಿವಾಟುಗಳನ್ನು ಹೆಚ್ಚಿಸಲು ದೀರ್ಘಕಾಲೀನ ಬೆಂಬಲ ನೀಡುವ, ಎನ್ಎಸ್ಆರ್ ಸಿಇಎಲ್ ನಿಂದ ಕಾರ್ಯಗತಗೊಂಡಿರುವ ಈ ಯೋಜನೆಯು, ಸಾಮಾನ್ಯ ನಗರಗಳತ್ತ ದೃಷ್ಟಿ ಕೇಂದ್ರೀಕರಿಸುವ ಉದ್ದೇಶದೊಂದಿಗೆ ಕೋಟಕ್ ಬಿಝ್ ಲ್ಯಾಬ್ ನ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದೆ.

ಬೆಂಗಳೂರು, 15, ಜುಲೈ2026: ಎನ್ಎಸ್ಆರ್ ಸಿಇಎಲ್- ಕೋಟಕ್ ಬಿಝ್ ಲ್ಯಾಬ್ ಗಳ ಸಹಭಾಗಿತ್ವದಲ್ಲಿ ಮುಂಬರಲಿರುವ ಮಹಿಳಾ ನವೋದ್ಯಮ ಯೋಜನೆ (ಡಬ್ಲ್ಯೂ ಎಸ್ ಪಿ)ಯ ನೂತನ ಆವೃತ್ತಿಯನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (“ಕೆಎಂಬಿಎಲ್/ ಕೋಟಕ್’’) ಪ್ರಕಟಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ನ ಈ ಸಿಎಸ್ ಆರ್ ಉಪಕ್ರಮವು, ಆದರ್ಶದಿಂದ ಉನ್ನತಿವರೆಗಿನ ತಮ್ಮ ಉದ್ಯಮ ಯಾನದಲ್ಲಿ, ದ್ವಿತೀಯ ಹಾಗೂ ತೃತೀಯ ಶ್ರೇಣಿಯ ನಗರಗಳ ಮೇಲೆ ವಿಶಿಷ್ಟ ಗಮನ ಕೇಂದ್ರೀಕರಿಸಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಬಯಸುವ ಮಹಿಳಾ ಉದ್ಯಮಿಗಳಿಗೆ ನಿರ್ಣಾಯಕ, ದೀರ್ಘಕಾಲಿಕ ಬೆಂಬಲ ಒದಗಿಸಲಿದೆ.

ಇದುವರೆಗೆ ಸುಮಾರು 600ಕ್ಕೂ ಹೆಚ್ಚು ಉದ್ಯಮಾಕಾಂಕ್ಷಿಗಳು ಮತ್ತು ಸ್ಥಾಪಿತ ಮಹಿಳಾ ಉದ್ಯಮಿಗಳನ್ನು ಡಬ್ಲ್ಯೂ ಎಸ್ ಪಿಯು ತನ್ನ ವಿಸ್ತೃತ ಪರಿಸರ ವ್ಯವಸ್ಥೆ ಪ್ರವೇಶ ಮತ್ತು ಮಾರ್ಗದರ್ಶನದ ಅಡಿಯಲ್ಲಿ ಒಗ್ಗೂಡಿಸಿದೆ. ಭಾರತದ ನವೋದ್ಯಮದ ಮೂಲವು 223,000 ಕ್ಕೂ ಹೆಚ್ಚು ಮಾನ್ಯ ತೆ ಪಡೆದ ಉದ್ಯಮಗಳತ್ತ ತಲುಪಲು ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿಯೂ, ಮಹಿಳಾ ಉದ್ಯಮಿಗಳು ಸೀಮಿತ ಸಾಲ ಮತ್ತು ಕಡಿಮೆ ಮಾರ್ಗದರ್ಶನ ಅವಕಾಶಗಳು ಮುಂತಾದ ಭದ್ರವಾದ ತಡೆಗೋಡೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ನಿರೀಕ್ಷೆಗಳಾದ ಆರೈಕೆ ಜವಾಬ್ದಾರಿ ಸೇರಿದಂತೆ, ಮಹಿಳೆಯರನ್ನು ಹೂಡಿಕೆ ಮತ್ತು ಅಪಾಯ ಎದುರಿಸುವ ಅವಕಾಶಗಳಿಂದ ನಿರ್ಬಂಧಿಸುವ ಇಂಥ ಸವಾಲುಗಳು ಮಹಾನಗರಗಳಿಗಿಂತ ಸಣ್ಣ ನಗರಗಳಲ್ಲಿ ಹೆಚ್ಚು.

ಮಹಿಳಾ ಉದ್ಯಮಿಗಳ ಉದ್ಯಮ ಯಾನವು ರೇಖಾತ್ಮಕವಲ್ಲ ಎಂಬುದನ್ನು ಪರಿಗಣಿಸಿ, ಮಹಿಳಾ ನವೋದ್ಯಮ ಕಾರ್ಯಕ್ರಮವು, ಮೂಲ ವ್ಯವಸ್ಥಾ ಹಂತವನ್ನು ಮೀರಿ ಬೆಳೆಯುತ್ತಿದೆ. ಈ ಕಾರ್ಯಕ್ರಮದ ವಿನ್ಯಾಸ ಘಟ್ಟವು ನಾಲ್ಕು ನಿರ್ಣಾಯಕ ಹಂತಗಳನ್ನು ಒಳಗೊಂಡಿದೆ: ಎ. ಉದ್ಯಮಶೀಲತೆಯನ್ನು ಅನ್ವೇಷಿಸುವ ಬುನಾದಿ ಹಂತ; ಒತ್ತಡ-ಪರೀಕ್ಷಾ ವಿಚಾರಗಳಿಗಾಗಿ ಮೂಲ ವ್ಯವಸ್ಥಾ ಪೂರ್ವ ಹಂತ; ವಿಕಸನ ಮತ್ತು ಸ್ಥಾಪಿತ ಉದ್ಯಮಗಳಿಗೆ ಮೂಲ ವ್ಯವಸ್ಥಾ ಹಂತ: ಮತ್ತು ಬೆಳವಣಗೆ, ವಿಶ್ವಾಸಾರ್ಹತೆ ಮತ್ತು ಮಾರುಕಟ್ಟೆ ಪ್ರವೇಶಾವಕಾಶಗಳನ್ನು ಅನ್ವೇಷಿಸುತ್ತಿರುವ ಸಂಸ್ಥಾಪಕರಿಗೆ ಪೂರಕ ವ್ಯವಸ್ಥೆ.

ಈ ಬಗ್ಗೆ ಮಾತನಾಡಿದ ಸಿಎಸ್ ಆರ್ ಮತ್ತು ಇಎಸ್ ಜಿ , ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಮುಖ್ಯಸ್ಥ ಹಿಮಾಂಶು ನಿವ್ಸಾರ್ಕರ್ , “ ಬಂಡವಾಳ ಎಂಬುದು ಕೇವಲ ಸಮಸ್ಯೆಯ ಒಂದು ಭಾಗ ಮತ್ತು ಅದು ಯಾವಾಗಲೂ ಮೊದಲ ಸಮಸ್ಯೆಯಲ್ಲ. ಹೆಚ್ಚಿನ ಮಹಿಳೆಯರು ಎದುರಿಸುವ ದೊಡ್ಡ ಸವಾಲು ಎಂದರೆ ದೀರ್ಘಕಾಲಿಕ ನಿರ್ಣಯ ಕೈಗೊಳ್ಳಲು ನೆರವು ನೀಡುವ ಪ್ರಮುಖ ಪರಿಸರ ವ್ಯವಸ್ಥೆಯ ಕೊರತೆ. ಕೋಟಕ್ ಬಿಝ್ ಲ್ಯಾಬ್ ನ ಅಡಿಯಲ್ಲಿ ನಡೆಸಲಾಗುವ ಮಹಿಳಾ ನವೋದ್ಯಮ ಕಾರ್ಯಕ್ರಮವು, ಸ್ವಯಂ ಬಲವರ್ಧನೆಯ ಜಾಲವನ್ನು ನಿರ್ಮಿಸಲು, ಉದ್ಯಮಶೀಲತಾ ಮಾರ್ಗದಿಂದ ದೂರ ಸರಿಯದಂತೆ ನೋಡಿಕೊಳ್ಳಲು ಅಗತ್ಯವಾದ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ನಿರಂತರತೆಯನ್ನು ಮಹಿಳಾ ಉದ್ಯಮಿಗಳಿಗೆ ಒದಗಿಸಲು ಬದ್ಧವಾಗಿದೆ” ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಎನ್ಎಸ್ಆರ್ ಸಿಇಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಸಿಕಾ ಪ್ರಶಾಂತ್, “ಭಾರತದಲ್ಲಿ ಮುಂದಿನ ಉದ್ಯಮಶೀಲತೆಯ ಅಲೆಗಳು ವಿವಿಧ ಭೌಗೋಳಿಕ, ವಲಯಗಳು ಮತ್ತು ಸ್ಥಾಪಕ ಹಿನ್ನೆಲೆಗಳಿಂದ ಬರಲಿವೆ. ಮಹಿಳಾ ಉದ್ಯಮಿಗಳು ಅದರಲ್ಲೂ ಮುಖ್ಯವಾಗಿ ದ್ವಿತೀಯ ಶ್ರೇಣಿ ಮತ್ತು ತೃತೀಯ ಶ್ರೇಣಿ ನಗರಗಳಲ್ಲಿರುವ ಮಹಿಳೆಯರು ತಮ್ಮ ಸಮುದಾಯಗಳಲ್ಲಿರುವ ನಿರ್ಣಾಯಕ ಸವಾಲುಗಳನ್ನು ಇತ್ಯರ್ಥಗೊಳಿಸುತ್ತಾ ಬರುತ್ತಿದ್ದಾರೆ. ಆದರೂ ವ್ಯವಹಾರ ವೃದ್ಧಿಸಲು ಅಗತ್ಯವಾಗಿರುವ ಸಂಪರ್ಕ ಜಾಲ ಮತ್ತು ಪೂರಕ ವ್ಯವಸ್ಥೆ ಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಾರ್ಗದರ್ಶನ, ಮಾರುಕಟ್ಟೆ ಪ್ರವೇಶ, ಸದೃಢ ಅಧ್ಯಯನ ಮತ್ತಯ ಪರಿಸರ ವ್ಯವಸ್ಥೆಗಳನ್ನು ಸಂಯೋಜಿಸಿ, ರಚನಾತ್ಮಕ, ದೀರ್ಘಕಾಲಿಕ ಬೆಂಬಲ ನೀಡಿ ಈ ಅಂತರವನ್ನು ಜೋಡಿಸುವುದು, ಈ ಮಹಿಳಾ ನವೋದ್ಯಮ ಕಾರ್ಯಕ್ರಮದ ಮುಖ್ಯ ಉದ್ದೇಶ . ಕೋಟಕ್ ಮಹೀಂದ್ರಾ ಬ್ಯಾಂಕ್ ನ ನಿರಂತರ ಸಹಭಾಗಿತ್ವದೊಂದಿಗೆ , ತಮ್ಮ ಕನಸುಗಳನ್ನು ಸ್ಥಿರ ಮತ್ತು ಮಾಪನಯೋಗ್ಯ ಉದ್ಯಮಗಳಾಗಿ ಸಾಕಾರಗೊಳಿಸಲು ಮಹಿಳಾ ಉದ್ಯಮಿಗಳಿಗೆ ನಾವು ದಾರಿ ಕಲ್ಪಿಸುತ್ತಿದ್ದೇವೆ ‘ ಎಂದು ತಿಳಿಸಿದರು.

ಪ್ರಮುಖ ಮಹಾನಗರಗಳನ್ನು ಮೀರಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸದೃಢಗೊಳಿಸಲು, ಮಹಿಳಾ ನವೋದ್ಯಮ ಕಾರ್ಯಕ್ರಮವು ಮಹಾನಗರೇತರ ಪ್ರದೇಶಗಳಿಗೂ ತಲುಪುವ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ಕಾರ್ಯಕ್ರಮವು ಪುನರುತ್ಪಾಕ ಕೃಷಿ, ಸಮೂಹ ನೇತೃತ್ವದ ಶಿಕ್ಷಣ, ತ್ಯಾಜ್ಯ ಮರುಬಳಕೆ ಮತ್ತು ಅನ್ವಯಿತ ತಂತ್ರಜ್ಞಾನಗಳ ಕುರಿತ ಉದ್ಯಮಗಳನ್ನು ಒಳಗೊಂಡಿದೆ. 3 ಕೋಟಿ ರೂ. ಗಳ 30 ನವೋದ್ಯಮಗಳನ್ನು ಬೆಂಬಲಿಸಿದ, 2025ರ ಕಾರ್ಯಕ್ರಮವು ಯಶಸ್ವಿಯಾದ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮವು ಪ್ರಾದೇಶಿಕ ಸಂಸ್ಥೆ ಮತ್ತು ಉದ್ಯಮಶೀಲತಾ ಪರಿಸರ ವ್ಯವಸ್ಥೆಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಆಶಿಸಲಾಗಿದೆ.

ಕೋಟಕ್ ಬಿಝ್ ಲ್ಯಾಬ್ ಹೆಸರಿನ ಅಡಿಯಲ್ಲಿ ಸಂಯೋಜನೆಗೊಂಡಿರುವ ಮಹಿಳಾ ನವೋದ್ಯಮ ಕಾರ್ಯಕ್ರಮವು, ಕೋಟಕ್ ನೇತೃತ್ವದಡಿಯಲ್ಲಿ ಉದ್ಯಮಶೀಲತೆ ಮತ್ತು ವಿನೂತನ ಪರಿಸರ ವ್ಯವಸ್ಥೆಯ ವಿಕಸನ ಎಂದು ಬಿಂಬಿತವಾಗಲಿದ್ದು, ಎಲ್ಲ ಮಾದರಿಯ ಉದ್ಯಮಿಗಳಿಗೆ ಸಮಗ್ರ ರೀತಿಯಲ್ಲಿ ಸೇವೆ ಸಲ್ಲಿಸಲಿದೆ.

Leave a Reply

Your email address will not be published. Required fields are marked *