ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಸಿಂಗಾಪುರ ಜಿಬಿಎ ವಾರ್ಡ್ 8ರ ವ್ಯಾಪ್ತಿಯ ಸಿಂಗಾಪುರ-ಅಬ್ಬಿಗೆರೆ ಮುಖ್ಯರಸ್ತೆ, ಲಕ್ಕಪ್ಪ ಬಡಾವಣೆ, ಬಾಲಾಜಿ ಬಡಾವಣೆ, ಎಸ್‌.ವಿ.ಲೇಔಟ್, ಕಮಾಂಡರ್ಸ್ ಗ್ಲೋರಿ ಅಪಾರ್ಟ್ಮೆಂಟ್ ರಸ್ತೆ ಸೇರಿದಂತೆ ಸುಮಾರು 3.5 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿಗಳಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಶನಿವಾರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ ‘ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಸಮಾನ ರೀತಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ನಾಗರೀಕರ ಅಭಿವೃದ್ಧಿಯ ಆಶಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುತ್ತಿದೆ.

ಸಿಂಗಾಪುರ ಜಿಬಿಎ ವಾರ್ಡ್ 8ರ ವ್ಯಾಪ್ತಿಯ ಸಿಂಗಾಪುರ-ಅಬ್ಬಿಗೆರೆ ಮುಖ್ಯರಸ್ತೆ, ಲಕ್ಕಪ್ಪ ಬಡಾವಣೆ, ಬಾಲಾಜಿ ಬಡಾವಣೆ, ಎಸ್ ವಿ ಲೇಔಟ್, ಕಮಾಂಡರ್ಸ್ ಗ್ಲೋರಿ ಅಪಾರ್ಟ್ಮೆಂಟ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು 3.5 ಕೋಟಿ ರು.ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಸಿಂಗಾಪುರ ವಾರ್ಡ್ ಮತ್ತು ಕುವೆಂಪು ನಗರ ವಾರ್ಡ್ ವ್ಯಾಪ್ತಿಯ ಯುವಕರ ಕ್ರೀಡಾಸಕ್ತಿಗೆ ಇಂಬು ನೀಡಲು ಅವರ ಬೇಡಿಕೆಯ ಮೇರೆಗೆ ಸಿಂಗಾಪುರ ಕೆರೆಯ ಬಳಿ ಕ್ರೀಡಾಂಗಣ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಮೂರು ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸಿಂಗಾಪುರ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಲೋಕಾರ್ಪಣೆ ಮಾಡಲಾಗುವುದು‌ ಎಂದರು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಲಕ್ಷ್ಮಿ ವಿ.ಹರಿ, ಪಾರ್ಥಿಬರಾಜನ್, ಕಾಂಗ್ರೆಸ್ ಮುಖಂಡರಾದ ವಿ.ಹರಿ, ಮಹಾಂತೇಶ್ ಸ್ವಾಮಿ, ರಾಜಣ್ಣ, ಮುನೇಗೌಡ, ಮುನಿಯಪ್ಪ, ಗುರುಪ್ರಸಾದ್ , ಚಿಕ್ಕರಾಜು, ಸೈಯದ್ ಅಜ್ಜು, ಸೈಯದ್ ಅಡ್ಡು, ಗಂಗಾಧರ್, ಮಹಿಳಾ ಮುಖಂಡರಾದ ರತ್ನಮ್ಮ, ಅನುರಾಧ, ಅಶ್ವಿನಿ, ಅನಿತಾ ಸೇರಿದಂತೆ ಇನ್ನಿತರರಿದ್ದರು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಲಕ್ಷ್ಮಿ ವಿ.ಹರಿ, ಪಾರ್ಥಿಬರಾಜನ್, ಕಾಂಗ್ರೆಸ್ ಮುಖಂಡರಾದ ವಿ.ಹರಿ, ಮಹಾಂತೇಶ್ ಸ್ವಾಮಿ, ರಾಜಣ್ಣ, ಮುನೇಗೌಡ, ಮುನಿಯಪ್ಪ, ಗುರುಪ್ರಸಾದ್ , ಚಿಕ್ಕರಾಜು, ಸೈಯದ್ ಅಜ್ಜು, ಸೈಯದ್ ಅಡ್ಡು, ಗಂಗಾಧರ್, ಮಹಿಳಾ ಮುಖಂಡರಾದ ರತ್ನಮ್ಮ, ಅನುರಾಧ, ಅಶ್ವಿನಿ, ಅನಿತಾ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *