ಶ್ರೀ ವಿನಾಯಕ ತೆಲುಗು ದೇವಾಂಗ ಸಂಘದಲ್ಲಿ 18ನೇ ವರ್ಷದ ಋಗ್ ಉಪಾಕರ್ಮ ವಾರ್ಷಿಕೋತ್ಸವ
ಯಲಹಂಕ ಸುದ್ದಿ: ದಿನಾಂಕ 28 .8. 2026.ರಂದು ಅಗ್ರಹಾರ ಬಡಾವಣೆಯಲ್ಲಿರುವ ಶ್ರೀ ವಿನಾಯಕ ತೆಲುಗು ದೇವಾಂಗ ಸಂಘ (ರಿ.) ವತಿಯಿಂದ 18ನೇ ವರ್ಷದ ಋಗ್ ಉಪಾಕರ್ಮ ವಾರ್ಷಿಕೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವತಾ ಆರಾಧನೆ, ವಿಶೇಷ ಪೂಜೆ ಹಾಗೂ ಧಾರ್ಮಿಕ ಸಂಘದ ಅಧ್ಯಕ್ಷರಾದ ಮುನಿಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನೆರವೇರಿದವು. ಸಂಘದ ಸದಸ್ಯರು, ಕುಟುಂಬಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ವಿನಾಯಕ ದೇವರ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹೂವುಗಳಿಂದ ಸುಂದರವಾಗಿ ಸಿಂಗಾರಿಸಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎನ್ ನರಸಿಂಹಮೂರ್ತಿ ಅಗ್ರಹಾರ ಬಿಜೆಪಿ ಮುಖಂಡರು ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್ )ಬಿಜೆಪಿ ಮುಖಂಡರು ಆನಂದ್ ರೆಡ್ಡಿ ಚೊಕ್ಕನಹಳ್ಳಿ ಬಿಜೆಪಿ ಮುಖಂಡರು ಹಾಗೂ ಅಗ್ರಹಾರ ಬಡಾವಣೆಯ ಸಂಘದ ಸದಸ್ಯರು, ಸೇರಿದಂತೆ. ಮಹಿಳೆಯರು, ಮಕ್ಕಳು ಅನೇಕ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು
ಸ್ಥಳ: ನಂ. 854, 15ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಅಗ್ರಹಾರ ಬಡಾವಣೆ, ಯಲಹಂಕ, ಬೆಂಗಳೂರು–64.

Leave a Reply

Your email address will not be published. Required fields are marked *