ಶ್ರೀ ಗಜಾನನ ಗೆಳೆಯರ ಬಳಗದಿಂದ ಗಣೇಶೋತ್ಸವ ಸಂಭ್ರಮ ಆಚರಣೆ:
ಯಲಹಂಕ ಸುದ್ದಿ ದಿನಾಂಕ15. 09. 2026 ರಂದು ಶ್ರೀ ವೇಣುಗೋಪಾಲಸ್ವಾಮಿ ಟ್ರಸ್ಟ್ ಆವರಣದಲ್ಲಿ ಶ್ರೀಗಜಾನನ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭವ್ಯ ಗಣೇಶೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಜರುಗಿತು.ಸೆಪ್ಟೆಂಬರ್ 14 ರಂದು ಮುಂಜಾನೆ 8:00 ಗಂಟೆಗೆ ಗಣೇಶ ಪ್ರತಿಷ್ಠಾಪನೆ ಮತ್ತು ಗಣಹೋಮ ನೆರವೇರಿಸುವುದರೊಂದಿಗೆ ಆರಂಭವಾದ ಈ ಧಾರ್ಮಿಕ ಉತ್ಸವದಲ್ಲಿ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ವಿಶೇಷ ಪೂಜೆ ಮತ್ತು ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎರಡನೇ ದಿನವಾದ ಸೆಪ್ಟೆಂಬರ್ 15 ರಂದು ಸಂಜೆ 7:00 ಗಂಟೆಗೆ ಸಾರ್ವಜನಿಕರಿಗಾಗಿ ಭವ್ಯ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಯುವ ಪ್ರತಿಭೆಗಳು ಹಾಗೂ ಮಕ್ಕಳು ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದರು. ಈ ವೇಳೆ ಗಣ್ಯರು ಹಾಗೂ ಸಂಘಟನಾ ಸಮಿತಿಯ ಪ್ರಮುಖರು ನೃತ್ಯ ಪ್ರದರ್ಶನ ನೀಡಿದ ಕಲಾವಿದರನ್ನು ಪ್ರೋತ್ಸಾಹಿಸಿ, ವೇದಿಕೆಯ ಮೇಲೆ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ರಾಜಕೀಯ ಮುಖಂಡರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ವಿಘ್ನನಿವಾರಕನ ಕೃಪೆಗೆ ಪಾತ್ರರಾದರು. ಈ ಕಾರ್ಯಕ್ರಮಕ್ಕೆ. ಬಿ.ಜೆ.ಪಿ. ರಾಜ್ಯ ಕಾರ್ಯದರ್ಶಿಗಳಾದ
ಶ್ರೀ ತಮ್ಮೇಶ್ ಗೌಡ ಹೆಚ್.ಸಿ. ಹಾಗೂ ನರಸಿಂಹಮೂರ್ತಿ ಅಗ್ರಹಾರ ಸೇರಿದಂತೆ ಅನೇಕ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗಣ್ಯರನ್ನು ಸಂಘಟಕರ ಪರವಾಗಿ ಶಾಲು ಹೊದಿಸಿ, ಹಣ್ಣು-ಹಂಪಲಿನ ತಾಂಬೂಲ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತ್ತು

Leave a Reply

Your email address will not be published. Required fields are marked *