ಕರ್ನಾಟಕ ಸ್ನೇಹಜೀವಿ ವೃದ್ಧಾಶ್ರಮಕ್ಕೆ ನೆರವು: ಸೇವಾರ್ಥ
ಕರ್ನಾಟಕ ಸ್ನೇಹಜೀವಿ ವೃದ್ಧಾಶ್ರಮಕ್ಕೆ ಸಹಾಯಧನ ಹಾಗೂ ಒಂದು ಲಾರಿ ಜಲ್ಲಿ ಕಲ್ಲು ದೇಣಿಗೆ*

ಬೆಂಗಳೂರು, ಅಕ್ಟೋಬರ್ 4: ಉತ್ತರ ಕರ್ನಾಟಕ ಯುವ ಬ್ರಿಗೇಡ್ ಹಾಗೂ ವೀರಶೈವ ಲಿಂಗಾಯತ ಸಂರಕ್ಷಣಾ ಸಮಿತಿಯ ವತಿಯಿಂದ ನಗರದ ಕರ್ನಾಟಕ ಸ್ನೇಹಜೀವಿ ವೃದ್ಧಾಶ್ರಮಕ್ಕೆ ಸಹಾಯಧನ ಹಾಗೂ ಅಗತ್ಯ ನೆರವು ನೀಡುವ ಮೂಲಕ ಮಾನವೀಯ ಸೇವಾ ಕಾರ್ಯ ಕೈಗೊಳ್ಳಲಾಯಿತು.

ಉತ್ತರ ಕರ್ನಾಟಕ ಯುವ ಬ್ರಿಗೇಡ್‌ನ ಅಧ್ಯಕ್ಷರಾದ ಶ್ರೀ ತಾನಾಜಿ ಮಾನೆ ಹಾಗೂ ವೀರಶೈವ ಲಿಂಗಾಯತ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ ಜಿ ಅವರ ನೇತೃತ್ವದಲ್ಲಿ, ಸ್ನೇಹಜೀವಿ ವೃದ್ಧಾಶ್ರಮದ ಶ್ರೀ ಹೇಮಂತ್ ಕನ್ನಡಿಗ ಅವರ ಸಮ್ಮುಖದಲ್ಲಿ ಎರಡೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ವೃದ್ಧಾಶ್ರಮಕ್ಕೆ ಸಹಾಯಧನ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಾದ ಶ್ರೀ ನಾಗಪ್ಪ ಲಕ್ಕನಗೌಡ, ಶ್ರೀ ಉಮೇಶ ಬಿರಾದಾರ, ಶ್ರೀ ಶರಣು ಹೂಗಾರ, ಶ್ರೀ ಶಂಕರ್ ಬಕಾಟಿ, ಶ್ರೀ ಈರಣ್ಣ, ಶ್ರೀ ವೆಂಕಟರೆಡ್ಡಿ, ಶ್ರೀ ಸಮೇದ್, ಶ್ರೀ ನಾಗಪ್ಪ ತಳಗಡೆ, ಶ್ರೀ ಹನುಮಂತು ಆರ್, ಶ್ರೀಮತಿ ಸಂಪೂರ್ಣ ಲಕ್ಕನಗೌಡ ಹಾಗೂ ಶ್ರೀಮತಿ ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಯಿ ಕಾಂಕ್ರೀಟ್ (Sai Concrete) ಸಂಸ್ಥೆಯ ನಿರ್ದೇಶಕರಾದ ಶ್ರೀ ನಾಗಪ್ಪ ಲಕ್ಕನಗೌಡ ಹಾಗೂ ಶ್ರೀಮತಿ ಸಂಪೂರ್ಣ ಲಕ್ಕನಗೌಡ ಅವರು ವೃದ್ಧಾಶ್ರಮದ ಕಟ್ಟಡ ಕಾಮಗಾರಿಗೆ ನೆರವಾಗುವ ಉದ್ದೇಶದಿಂದ ಒಂದು ಲಾರಿ ಲೋಡ್ ಜಲ್ಲಿ ಕಲ್ಲನ್ನು ದೇಣಿಗೆಯಾಗಿ ನೀಡಿದರು. ಅವರ ಈ ಕೊಡುಗೆ ವೃದ್ಧಾಶ್ರಮದ ನಿರ್ಮಾಣ ಕಾರ್ಯಕ್ಕೆ ಮಹತ್ವದ ನೆರವಾಗಿದೆ.

ಹಿರಿಯ ನಾಗರಿಕರ ಸೇವೆ, ಆರೈಕೆ ಹಾಗೂ ಕಲ್ಯಾಣದ ಉದ್ದೇಶದಿಂದ ಕೈಗೊಂಡ ಈ ಮಾನವೀಯ ಕಾರ್ಯಕ್ಕೆ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ದಾನಿಗಳ ಸಾಮಾಜಿಕ ಕಳಕಳಿ ಮೆಚ್ಚುಗೆಗೆ ಪಾತ್ರವಾಯಿತು. ಸಮಾಜದ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ನೀಡುವ ಮೂಲಕ ಇಂತಹ ಸೇವಾ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಸಾರಲಾಯಿತು.

ಹಾಗೂ ವಿಶೇಷ ಇವತ್ತಿನ ಕಾರ್ಯಕ್ರಮ ಯಶಸ್ವಿ ಪೂರ್ಣಗೊಳಿಸೋಕೆ ಕಾರಣಭೂತರಾದ ಶ್ರೀಯುತ ಶರಣು ಹೂಗಾರ್, ಬೆಂಗಳೂರು ನಗರದ ಉತ್ತರ ಕರ್ನಾಟಕ ಅಧ್ಯಕ್ಷರು ಇವರಿಗೆ ಉತ್ತರ ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಂದ ಹೃದಯಪೂರ್ವಕ ಕೃತಜ್ಞಗಳನ್ನು ಸಲ್ಲಿಸಲಾಗುತ್ತದೆ

ಮಾನವೀಯತೆಯೇ ಧರ್ಮ, ಸೇವೆಯೇ ಶ್ರೇಷ್ಠ ಕಾರ್ಯ.

Leave a Reply

Your email address will not be published. Required fields are marked *