ಯಲಹಂಕ : ಯಲಹಂಕ ಕ್ಷೇತ್ರದ ಹೆಸರುಘಟ್ಟ ಹೋಬಳಿಯ ಶಿವಕೋಟೆ, ದಾಸನಪುರ ಹೋಬಳಿಯ ಆಲೂರು, ಹುಸ್ಕೂರು, ಬೆತ್ತನಗೆರೆ, ಅವೇರಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ ‘ಯಲಹಂಕ ಕ್ಷೇತ್ರದ ಹೆಸರುಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನೂತನ ಬಸ್ ತಂಗೂದಾಣ ಉದ್ಘಾಟನೆ, ದಾಸನಪುರ ಹೋಬಳಿಯ ಆಲೂರು ಗ್ರಾಮದಲ್ಲಿ ಸೇತುವೆ ಉದ್ಘಾಟನೆ, ನರಸೀಪುರ- ಆಲೂರು ರಸ್ತೆ ಅಭಿವೃದ್ಧಿ, ಮರಾಠಿಪಾಳ್ಯ-ಹುಸ್ಕೂರು ರಸ್ತೆ ಅಭಿವೃದ್ಧಿ, ಬೆತ್ತನಗೆರೆ- ಹುಸ್ಕೂರು-ದೊಡ್ಡಿಪಾಳ್ಯ ರಸ್ತೆ ಅಭಿವೃದ್ಧಿ, ಅವೇರಹಳ್ಳಿ- ಲಕ್ಕೇನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿ ಸೇರಿದಂತೆ 6.58 ಕೋಟಿ ರು. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಚಾಲನೆ ನೀಡಲಾಗಿದ್ದು, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಪ್ರಸಕ್ತ ರಾಜ್ಯ ಸರ್ಕಾರದಲ್ಲಿ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳಿಗೆ ಸರಿಯಾಗಿ ಅನುದಾನ ದೊರೆಯುತ್ತಿಲ್ಲ ಆದರೂ ಸಹ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಬಾರದು ಎಂಬ ದಿಸೆಯಲ್ಲಿ ಪ್ರಯಾಸದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡದಿದ್ದರೆ ಅಸಮತೋಲನ ತಲೆದೋರುವುದರ ಜೊತೆಗೆ ಜನತೆಯ ಅಭಿವೃದ್ಧಿಯ ಆಶಯಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತದೆ, ಜನತೆಗೆ ಉತ್ತರ ನೀಡಲಾಗದ ಪರಿಸ್ಥಿತಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಮೂಲಕ ಸ್ಪಂದಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಮಾಜಿ ಸದಸ್ಯ ರಾಜಗೋಪಾಲ್, ಶಿವಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಾವಳಿಪುರ ಟಿ ರಮೇಶ್, ಮೀನಾಕ್ಷಮ್ಮ, ಗೌರಮ್ಮ, ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ಮತ್ಕೂರು ರವಿಕುಮಾರ್, ಲಿಂಗನಹಳ್ಳಿ ಅಪ್ಪಯ್ಯಣ್ಣ , ಉಮೇಶ್, ಅಶೋಕ್, ಮುನೆಲ್ಲಪ್ಪ, ಕಿರಣ್, ತಿಮ್ಮರಾಯಪ್ಪ, ವಾಸು, ಕಿರಣ್ ಕುಮಾರ್, ಲಕ್ಷ್ಮೀನಾರಾಯಣ್ ಸೇರಿದಂತೆ ಇನ್ನಿತರರಿದ್ದರು.

6.58 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಎಸ್ ಆರ್ ವಿಶ್ವನಾಥ್ ಚಾಲನೆ :

Leave a Reply

Your email address will not be published. Required fields are marked *