‘ಮಿಸ್ ಟೀನ್ ಇಂಡಿಯಾ ಫಿನಾಲೆ’ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ‌ ಕೊಡಿಗೇಹಳ್ಳಿಯ ಬೆಡಗಿ ಕೃತಿಕಾ :

ಬ್ಯಾಟರಾಯನಪುರ : ‘ಮಿಸ್ ಟೀನ್ ಯೂನಿವರ್ಸ್ ಕರ್ನಾಟಕ 2025’ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಗರದ ಕೊಡಿಗೇಹಳ್ಳಿಯ ಹೀರಾನಂದಾನಿ ಅಪಾರ್ಟ್ಮೆಂಟ್ ನಿವಾಸಿ ಕೃತ್ತಿಕಾ, ಇತ್ತೀಚೆಗೆ ‘ಮಿಸ್ ಟೀನ್ ಇಂಡಿಯಾ’ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದು, ಅವರು ರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಸಂಘಟಕರು ನೀಡಿದ ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕೃತ್ತಿಕಾ ‘ಮಿಸ್ ಟೀನ್ ಇಂಡಿಯಾ’ ಫಿನಾಲೆಗೆ ಆಯ್ಕೆಯಾಗಿದ್ದು, ಫೈನಲ್ ಸುತ್ತು ನವೆಂಬರ್ 16 ರಿಂದ ಪ್ರಾರಂಭವಾಗಲಿದೆ. ಗ್ರ್ಯಾಂಡ್ ಫಿನಾಲೆ ಜೈಪುರದ ಜೀ ಸ್ಟುಡಿಯೋದಲ್ಲಿ ದೇಶದ ಹೆಸರಾಂತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿದೆ.

‘ಮಿಸ್ ಟೀನ್ ಯೂನಿವರ್ಸ್ ಕರ್ನಾಟಕ’ ಕಿರೀಟವನ್ನು ಈಗಾಗಲೇ ಮುಡಿಗೇರಿಸಿ ಕೊಂಡಿರುವ ಕೃತ್ತಿಕಾ ಅವರು ಬಿ.ಟೆಕ್ ವಿದ್ಯಾರ್ಥಿನಿ, ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು. ಅವರ ತಂದೆ ಓಂ ಪ್ರಕಾಶ್ ತಿವಾರಿ ಮತ್ತು ತಾಯಿ ರಾಣಿ ತಿವಾರಿ ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಹಿರಿಯ ಸಹೋದರಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ್ದಾರೆ, ಕಿರಿಯ ಸಹೋದರ ಪಿಯುಸಿ ಓದುತ್ತಿದ್ದಾರೆ.

2025ರಲ್ಲಿ ‘ಮಿಸ್ ಟೀನ್ ಯೂನಿವರ್ಸ್ ಕರ್ನಾಟಕ’ ಕಿರೀಟ ಗೆದ್ದ ನಂತರ ಕೃತ್ತಿಕಾ ಈಗ ಬೆಂಗಳೂರು ಮೂಲದ ಟಿಶ್ಯೂ ಕಂಪನಿಯಾಗಿರುವ ಬ್ರ್ಯಾಂಡ್ ಎಕ್ಸೆಲ್ ಟಿಶ್ಯೂನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ತಮ್ಮ ಆಯ್ಕೆ ಕುರಿತು ಅನಿಸಿಕೆ ವ್ಯಕ್ತಪಡಿಸಿರುವ ಕೃತ್ತಿಕಾ “ನಮ್ಮ ಕರ್ನಾಟಕಕ್ಕೆ ‘ಮಿಸ್ ಟೀನ್ ಇಂಡಿಯಾ’ ಕಿರೀಟ ತಂದು ಕೊಡುವ ಮೂಲಕ ನಮ್ಮ ರಾಜ್ಯಕ್ಕೆ ಹೆಮ್ಮೆ ತರಲು ಬಯಸುತ್ತೇನೆ’ ಎಂದಿದ್ದಾರೆ.

ರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ತೆರಳುತ್ತಿರುವ ಕೃತಿಕಾ ಅವರಿಗೆ ಭವ್ಯ ಯಶಸ್ಸು ದೊರೆಯಲೆಂದು
ಕರ್ನಾಟಕದ ಜನತೆ ಶುಭ ಹಾರೈಸಿದ್ದು, ಪೂರ್ಣ ವಿಶ್ವಾಸದಿಂದ ‘ಈ ಸಲ ಕ್ರೌನ್ ನಮ್ದೇ’ ಎಂದು ಎಲ್ಲರೂ ಒಂದೇ ದನಿಯಲ್ಲಿ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *