ಆರ್.ಕೆ. ಗಾರ್ಡನ್ ನಿವಾಸಿಗಳ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಂಗಳೂರು: ನಗರದ ಆರ್.ಕೆ. ಗಾರ್ಡನ್ ನಿವಾಸಿಗಳ ಸಂಘದ ವತಿಯಿಂದ ಶನಿವಾರ (ನವೆಂಬರ್ 21, 2026) ಸಂಜೆ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. 
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿಗಳು.  ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್. ಆರ್.ಕೆ. ಗಾರ್ಡನ್ ನಿವಾಸಿಗಳ ಸಂಘದ ಅಧ್ಯಕ್ಷರಾದ ಶಾಲಿನಿ ಮೇಡಂ ಸೇರಿದಂತೆ ಇನ್ನೂ ಅನೇಕ ಗಣ್ಯರು  ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಿವಾಸಿಗಳ ಸಂಘಗಳ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. 
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಕಾರ್ಪೊರೇಟರ್‌ಗಳಾದ ಶ್ರೀ ಎಂ.ಸಿ. ಜಯಪ್ರಕಾಶ್ ಹಾಗೂ ಶ್ರೀ ಮುನಿಸ್ವಾಮಿ ಗೌಡ    ಹಾಗೂ ಇನ್ನು ಅನೇಕ ಗಣ್ಯರು. ಮತ್ತು  ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಫ್ ಮಾಧ್ವಾನಿಯವರು,  ಅವರು ಪಾಲ್ಗೊಂಡಿದ್ದರು. ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಹಾಸ್ಯ ಸಾಹಿತಿಗಳು ಹಾಗೂ ಬರಹಗಾರರಾದ ಶ್ರೀ ಎಂ.ಎಸ್. ನರಸಿಂಹಮೂರ್ತಿ ಮತ್ತು ಶ್ರೀ ವೈ.ವಿ. ಗುಂಡೂರಾವ್ ಅವರು ತಮ್ಮ ಹಾಸ್ಯ ಚಟಾಕಿಗಳ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಆರ್.ಕೆ. ಗಾರ್ಡನ್ ನಿವಾಸಿಗಳ ಸಂಘದ ಪದಾಧಿಕಾರಿಗಳು, ಮಹಿಳಾ ಸದಸ್ಯರು ಹಾಗೂ ಬಡಾವಣೆಯ ನಾಗರಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ.  ಭಾಗವಹಿಸಿ ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು

Leave a Reply

Your email address will not be published. Required fields are marked *

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.