ಬೆಂಗಳೂರಿನ ಪ್ರಯೋಗಾಲಯಗಳಿಂದ ಭಾರತದ ರಸ್ತೆ, ಮನೆ, ಆಸ್ಪತ್ರೆ ಮತ್ತು ಹೊಲಗಳವರೆಗೆ: ಸಾಬಿಕ್‌ನ 44 ಎಕರೆ ಇನ್ನೋವೇಷನ್ ಹಬ್ ನ ಒಳನೋಟ

ಐಟಿ ವಲಯವನ್ನೂ ಮೀರಿ ಡೀಪ್ ಸೈನ್ಸ್ ಹಾಗೂ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಬೆಂಗಳೂರು ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿರುವ ಬೆನ್ನಲ್ಲೇ, ನಗರದಲ್ಲಿರುವ ಸಾಬಿಕ್ ಟೆಕ್ನಾಲಜಿ ಸೆಂಟರ್ (ಎಸ್‌ಟಿಸಿ-ಬಿ) ಭಾರತೀಯ ಪರಿಸ್ಥಿತಿಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಳಸಲಾಗುವ ಮುಂದಿನ ಪೀಳಿಗೆಯ ವಸ್ತುಗಳು ಹಾಗೂ ಕೃಷಿ-ಪೋಷಕಾಂಶಗಳ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಬೆಂಗಳೂರು, ನ. 26, 2026: ಬರೋಬ್ಬರಿ 100 ಮಿಲಿಯನ್ ಅಮೆರಿಕನ್ ಡಾಲರ್ ಆರಂಭಿಕ ಹೂಡಿಕೆಯೊಂದಿಗೆ 2013ರ ನವೆಂಬರ್‌ನಲ್ಲಿ ಕಾರ್ಯಾರಂಭ ಮಾಡಿದ ಬೆಂಗಳೂರಿನ ಸಾಬಿಕ್ ಟೆಕ್ನಾಲಜಿ ಸೆಂಟರ್ (ಎಸ್‌ಟಿಸಿ-ಬಿ), ಜಾಗತಿಕ ವೈವಿಧ್ಯಮಯ ರಾಸಾಯನಿಕ ಕಂಪನಿಯಾದ ಸಾಬಿಕ್‌ನ ಏಷ್ಯಾ ವಲಯದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. 44 ಎಕರೆ ವಿಶಾಲ ಕ್ಯಾಂಪಸ್‌ನಲ್ಲಿ 250ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಒಳಗೊಂಡಿರುವ ಈ ಕೇಂದ್ರವು, ಸಾಬಿಕ್‌ನ ಜಾಗತಿಕ ಜಾಲದ 20 ತಂತ್ರಜ್ಞಾನ ಮತ್ತು ನಾವೀನ್ಯತಾ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಳೆದ 13 ವರ್ಷಗಳಲ್ಲಿ ಎಸ್‌ಟಿಸಿ-ಬಿ ವಿಶ್ಲೇಷಣಾತ್ಮಕ ಪ್ರಯೋಗಾಲಯಗಳು, ಹವಾಮಾನ ಪರೀಕ್ಷಾ ಪ್ರಯೋಗಾಲಯ (ವೆದರಿಂಗ್ ಲ್ಯಾಬ್), ಹಸಿರುಮನೆ (ಗ್ರೀನ್‌ಹೌಸ್) ಮತ್ತು ಕೃಷಿ ವ್ಯವಹಾರಕ್ಕಾಗಿ ಮೀಸಲಾದ ತೆರೆದ ಪ್ರಾಯೋಗಿಕ ಹೊಲಗಳಲ್ಲಿ ನಡೆದ ಸಂಶೋಧನೆಗಳನ್ನು ಐದು ಪ್ರಮುಖ ವಲಯಗಳ ನೈಜ-ಪ್ರಪಂಚದ ಬಳಕೆಗೆ ಯಶಸ್ವಿಯಾಗಿ ತಲುಪಿಸಿದೆ.

ಈ ಮಹತ್ವದ ಕಾರ್ಯವು ಭಾರತದ ಉತ್ಪಾದನಾ ವಲಯದ ವೇಗಕ್ಕೆ ಪೂರಕವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ತನ್ನ ಅಕ್ಟೋಬರ್ 2026ರ ವಿಶ್ವ ಆರ್ಥಿಕ ಮುನ್ನೋಟದಲ್ಲಿ 2026-27ನೇ ಆರ್ಥಿಕ ವರ್ಷಕ್ಕೆ ಶೇ. 7ರಷ್ಟು ಆರ್ಥಿಕ ಬೆಳವಣಿಗೆಯನ್ನು ಅಂದಾಜಿಸಿದೆ. ಅಲ್ಲದೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆರ್ಥಿ ವರ್ಷ 26ರಲ್ಲಿ 860.09 ಬಿಲಿಯನ್ ಡಾಲರ್ ರಫ್ತು ಗುರಿ ತಲುಪಿದ ನಂತರ, ಆರ್ಥಿಕ ವರ್ಷ 27ಕ್ಕೆ ಬರೋಬ್ಬರಿ 1 ಟ್ರಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.

ಆಟೋಮೋಟಿವ್: ಎಲೆಕ್ಟ್ರಿಕ್ ವಾಹನಗಳಿಗಾಗಿ ಹಗುರವಾದ, ಸುರಕ್ಷಿತ ವಸ್ತುಗಳು
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಚಿಲ್ಲರೆ ಮಾರಾಟದ ಅಂಕಿಅಂಶಗಳ ಪ್ರಕಾರ, ಭಾರತವು ಆರ್ಥಿ ವರ್ಷ 26ರಲ್ಲಿ 2.45 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಮಾರಾಟ ಮಾಡಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 24.6ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಮುಂಚೂಣಿಯಲ್ಲಿವೆ. ಸಾಬಿಕ್‌ನ ಥರ್ಮೋಪ್ಲಾಸ್ಟಿಕ್‌ಗಳು ಬ್ಯಾಟರಿ ಹೌಸಿಂಗ್‌ಗಳು ಮತ್ತು ವಾಹನದ ರಚನಾತ್ಮಕ ಭಾಗಗಳಲ್ಲಿ ಭಾರವಾದ ಲೋಹಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿವೆ. ಇದರಲ್ಲಿ ಜ್ವಾಲೆ ನಿರೋಧಕ (ಫ್ಲೇಮ್ ರಿಟಾರ್ಡೆಂಟ್) ಪಾಲಿಪ್ರೊಪಿಲೀನ್ ಕವರ್ ಪ್ಲಗ್-ಇನ್ ಹೈಬ್ರಿಡ್ ವಾಹನದ ಉತ್ಪಾದನೆಯಲ್ಲಿ ಶೇ. 40ರಷ್ಟು ತೂಕವನ್ನು ಉಳಿಸುತ್ತದೆ. ಅಲ್ಲದೆ, ಲೋಹಕ್ಕಿಂತ ಸರಿಸುಮಾರು ಶೇ. 40ರಷ್ಟು ಹಗುರವಾದ ರೆಸಿನ್-ಮೆಟಲ್ ಹೈಬ್ರಿಡ್ ಬ್ಯಾಟರಿ ರಕ್ಷಣಾ ಪರಿಹಾರವನ್ನು ಎಸ್‌ಟಿಸಿ-ಬಿ ಅಭಿವೃದ್ಧಿಪಡಿಸುತ್ತಿದೆ. ಬ್ಲೂಹೀರೋ ಯೋಜನೆ ಅಡಿಯಲ್ಲಿ, ಎಸ್‌ಟಿಸಿ-ಬಿ ವಿಜ್ಞಾನಿಗಳು ಉಷ್ಣ ನಿರ್ವಹಣೆ ಮತ್ತು ಅಪಘಾತದ ಸುರಕ್ಷತೆಗಾಗಿ ಜ್ವಾಲೆ ನಿರೋಧಕ ಸ್ಟಾಮ್ಯಾಕ್ಸ್ ಮತ್ತು ಲೆಕ್ಸನ್ ರೆಸಿನ್‌ ಗಳನ್ನು ಬಳಸಿಕೊಂಡು ನೂತನ ಬ್ಯಾಟರಿ ಪ್ಯಾಕ್ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ನೆರವಾಗಿದ್ದಾರೆ. ಭಾರತದ ತೀವ್ರ ಬಿಸಿಲು ಮತ್ತು ತೇವಾಂಶಕ್ಕೆ ತಕ್ಕಂತೆ ಎಸ್‌ಟಿಸಿ-ಬಿಯ ವೆದರಿಂಗ್ ಲ್ಯಾಬ್‌ನಲ್ಲಿ ಈ ವಸ್ತುಗಳನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಎಂಜಿನ್ ಒಳಭಾಗದ (ಅಂಡರ್-ದಿ-ಹುಡ್) ಪರಿಹಾರಗಳನ್ನು ಈಗಾಗಲೇ ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು ಬಳಸುತ್ತಿವೆ.

ಫ್ಲೆಕ್ಸಿಬಲ್ ಪ್ಯಾಕೇಜಿಂಗ್: ತಾಜಾತನದ ರಕ್ಷಣೆ ಮತ್ತು ಮರುಬಳಕೆಗೆ ಪೂರಕ
ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಮಾಹಿತಿಯಂತೆ, ಆರ್ಥಿಕ ವರ್ಷ 25ರಲ್ಲಿ 247.87 ಮಿಲಿಯನ್ ಟನ್ ಹಾಲು ಉತ್ಪಾದನೆಯೊಂದಿಗೆ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಹೀಗಾಗಿ ಬೇಗನೆ ಹಾಳಾಗುವ ಆಹಾರ ಪದಾರ್ಥಗಳ ಪೂರೈಕೆ ಸರಪಳಿಯಲ್ಲಿ ಸುರಕ್ಷಿತ ಪ್ಯಾಕೇಜಿಂಗ್ ಅತ್ಯಗತ್ಯವಾಗಿದೆ. ಸಾಬಿಕ್‌ನ ಎಫ್‌ಡಿಎ ಮತ್ತು ಐರೋಪ್ಯ ಒಕ್ಕೂಟದ (ಇಯು) ಮಾನದಂಡಗಳಿಗೆ ಅನುಗುಣವಾಗಿರುವ ಆಹಾರ ಸಂಪರ್ಕ ಪಾಲಿಮರ್‌ಗಳನ್ನು ಬಹು-ಪದರದ ಫ್ಲೆಕ್ಸಿಬಲ್ ಫಿಲ್ಮ್‌ಗಳಲ್ಲಿ ಬಳಸಲಾಗುತ್ತದೆ. ಇವು ಡೈರಿ ಉತ್ಪನ್ನಗಳು, ಧಾನ್ಯಗಳು, ತಿಂಡಿಗಳು ಮತ್ತು ತಾಜಾ ಕೃಷಿ ಉತ್ಪನ್ನಗಳನ್ನು ಆಮ್ಲಜನಕ, ತೇವಾಂಶ ಮತ್ತು ಬೆಳಕಿನಿಂದ ಸುರಕ್ಷಿತವಾಗಿ ರಕ್ಷಿಸುತ್ತವೆ. ಭಾರತದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು ಆರ್ಥಿಕ ವರ್ಷ 26ರಲ್ಲಿ ಕಠಿಣ ಪ್ಯಾಕೇಜಿಂಗ್‌ನಲ್ಲಿ ಶೇ. 30ರಷ್ಟು ಮತ್ತು ಆರ್ಥಿ ವರ್ಷ 29ರಿಂದ ಶೇ. 60ರಷ್ಟು ಮರುಬಳಕೆಯ (ರೀಸೈಕಲ್ಡ್) ಅಂಶವನ್ನು ಕಡ್ಡಾಯಗೊಳಿಸಿರುವುದರಿಂದ, ಸಾಬಿಕ್‌ನ ಪಿಪಿ ಮತ್ತು ಪಿಇ ವಸ್ತುಗಳು ಕಂಪನಿಯ ಟ್ರೂಸರ್ಕಲ್ ಪೋರ್ಟ್‌ಫೋಲಿಯೋದ ಬೆಂಬಲದೊಂದಿಗೆ ಏಕ-ಹಂತದಲ್ಲಿ ಮರುಬಳಕೆ ಮಾಡಬಹುದಾದ ಮೊನೊ-ಪಿಇ ಸ್ಟ್ಯಾಂಡ್-ಅಪ್ ಪೌಚ್‌ ನಂತಹ ವೃತ್ತಾಕಾರದ (ಸರ್ಕ್ಯುಲರ್) ವಿನ್ಯಾಸಗಳಿಗೆ ಪೂರಕವಾಗಿವೆ.

ಆರೋಗ್ಯ ಸೇವೆ: ಕ್ಲಿನಿಕಲ್ ಮತ್ತು ನೈರ್ಮಲ್ಯದ ಅಗತ್ಯಗಳಿಗಾಗಿ ಉನ್ನತ ಕಾರ್ಯಕ್ಷಮತೆಯ ವಸ್ತುಗಳು
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಆಗಸ್ಟ್ 2026ರ ವೇಳೆಗೆ ದೇಶದಲ್ಲಿ 45.5 ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಔಷಧೀಯ ಇಲಾಖೆಯು 2030ರ ವೇಳೆಗೆ 30 ಬಿಲಿಯನ್ ಡಾಲರ್ ವೈದ್ಯಕೀಯ ಸಾಧನಗಳ ಮಾರುಕಟ್ಟೆ ನಿರ್ಮಿಸುವ ಗುರಿ ಹೊಂದಿದೆ. ಇದರಿಂದ ಕ್ಲಿನಿಕಲ್ ದರ್ಜೆಯ ಪಾಲಿಮರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಸಾಬಿಕ್‌ನ ಅಲ್ಟೆಮ್ ಮತ್ತು ಲೆಕ್ಸನ್ ರೆಸಿನ್‌ ಗಳು ಪದೇ ಪದೇ ಆಟೋಕ್ಲೇವಿಂಗ್, ಗಾಮಾ ವಿಕಿರಣ ಮತ್ತು ಎಥಿಲೀನ್ ಆಕ್ಸೈಡ್ ಕ್ರಿಮಿನಾಶಕ ಪ್ರಕ್ರಿಯೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವು ಪಾರದರ್ಶಕ ರೋಗನಿರ್ಣಯ ಸಾಧನಗಳು, ಕ್ರಿಮಿನಾಶಕಗೊಳಿಸಬಹುದಾದ ಶಸ್ತ್ರಚಿಕಿತ್ಸಾ ಉಪಕರಣಗಳು, ಧರಿಸಬಹುದಾದ ವೈದ್ಯಕೀಯ ಸಾಧನಗಳು ಮತ್ತು ಔಷಧ ವಿತರಣಾ ಸಾಧನಗಳ ತಯಾರಿಕೆಗೆ ಅತ್ಯಂತ ಸೂಕ್ತವಾಗಿವೆ. ಇದರೊಂದಿಗೆ ಎಸ್‌ಟಿಸಿ-ಬಿ ಡಯಾಪರ್‌ಗಳು, ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ಗಳ ತಯಾರಿಕೆಗಾಗಿ ಸಾಬಿಕ್‌ ಪ್ಯೂರ್ ಕೇರ್ಸ್ ವಸ್ತುಗಳನ್ನು ಸಹ ಅಭಿವೃದ್ಧಿಪಡಿಸುತ್ತದೆ.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್: ಜ್ವಾಲೆ ನಿರೋಧಕ ಮತ್ತು ಸುಸ್ಥಿರ ಪರಿಹಾರಗಳು
ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಇವಿ ಚಾರ್ಜಿಂಗ್ ಜಾಲವನ್ನು ಬೆಂಬಲಿಸಲು, ಎಸ್‌ಟಿಸಿ-ಬಿ ಎಂಜಿನಿಯರ್‌ಗಳು ಜ್ವಾಲೆ ನಿರೋಧಕ ಥರ್ಮೋಪ್ಲಾಸ್ಟಿಕ್‌ಗಳನ್ನು ಬಳಸಿಕೊಂಡು ನೂತನ ಮಾದರಿಯ (ಕಾನ್ಸೆಪ್ಟ್) ಇವಿ ಚಾರ್ಜರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸಾಂಪ್ರದಾಯಿಕ ಲೋಹದ ವಿನ್ಯಾಸಗಳಿಗಿಂತ ಕಡಿಮೆ ತೂಕ, ಹೆಚ್ಚಿನ ವಿನ್ಯಾಸ ಸ್ವಾತಂತ್ರ್ಯ ಮತ್ತು ವೆಚ್ಚ ಉಳಿತಾಯದ ಸಾಮರ್ಥ್ಯವನ್ನು ಹೊಂದಿದೆ. ಸಮುದ್ರ ಸೇರುವ ಪಿಇಟಿ ಬಾಟಲಿಗಳನ್ನು ರಾಸಾಯನಿಕವಾಗಿ ಮೇಲ್ದರ್ಜೆಗೇರಿಸಿ (ಅಪ್‌ಸೈಕಲ್ ಮಾಡಿ), ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೋಟಿವ್ ಭಾಗಗಳಿಗಾಗಿ ಉನ್ನತ ಕಾರ್ಯಕ್ಷಮತೆಯ ಪಿಬಿಟಿ ಆಗಿ ಪರಿವರ್ತಿಸುವ LNP™ ELCRIN™ WF0061BiQ ರೆಸಿನ್ ಕುರಿತ ಜಾಗತಿಕ ಸಂಶೋಧನೆಗೂ ಈ ಕೇಂದ್ರವು ಬೆಂಬಲ ನೀಡುತ್ತಿದೆ. ಇದು ಹೊಸ ವಸ್ತುಗಳಿಗೆ ಹೋಲಿಸಿದರೆ ಶೇ. 14ರಷ್ಟು ಕಡಿಮೆ ಇಂಗಾಲದ ಹೆಜ್ಜೆಗುರುತು ಮತ್ತು ಶೇ. 25ರಷ್ಟು ಕಡಿಮೆ ಸಂಚಿತ ಶಕ್ತಿಯ ಬೇಡಿಕೆಯನ್ನು ಹೊಂದಿದೆ.

ಕೃಷಿ ಪೋಷಕಾಂಶಗಳು: ಭಾರತೀಯ ರೈತರಿಗಾಗಿ ಪ್ರಯೋಗಾಲಯದಿಂದ ಹೊಲದವರೆಗೆ
2025ರ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (ಪಿಎಲ್‌ಎಫ್‌ಎಸ್) ಪ್ರಕಾರ ಭಾರತದ ಒಟ್ಟು ಉದ್ಯೋಗಿಗಳಲ್ಲಿ ಶೇ. 43.0ರಷ್ಟು ಮಂದಿಗೆ ಕೃಷಿಯೇ ಜೀವನಾಧಾರವಾಗಿದೆ. ಮತ್ತೊಂದೆಡೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಆರ್ಥಿ ವರ್ಷ 26ರಲ್ಲಿ ಯೂರಿಯಾ ಆಮದು ಶೇ. 83ರಷ್ಟು ಏರಿಕೆಯಾಗಿ 10.35 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಕಡಿಮೆ ಇಂಗಾಲದ ಬ್ಲೂ ಯೂರಿಯಾ ಆವಿಷ್ಕಾರಕ್ಕಾಗಿ ಸಾಬಿಕ್‌ನ 2023ರ ಗೋಲ್ಡ್ ಎಡಿಸನ್ ಪ್ರಶಸ್ತಿಯಲ್ಲಿ ಪಾಲುದಾರರಾಗಿದ್ದ ಎಸ್‌ಟಿಸಿ-ಬಿಯ ಕೃಷಿ ಪೋಷಕಾಂಶಗಳ ತಂಡವು, ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಯೂರಿಯಾ ಪ್ಲಸ್, ಜೈವಿಕ-ವರ್ಧಿತ ರಸಗೊಬ್ಬರಗಳು ಮತ್ತು ಮೈಕ್ರೋಪ್ಲಾಸ್ಟಿಕ್ ಅವಶೇಷಗಳನ್ನು ತಡೆಯುವ ಜೈವಿಕ ವಿಘಟನೀಯ ನಿಯಂತ್ರಿತ-ಬಿಡುಗಡೆ ರಸಗೊಬ್ಬರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ನೂತನ ಸೂತ್ರೀಕರಣಗಳನ್ನು ಪ್ರಯೋಗಾಲಯದಿಂದ ಹಸಿರುಮನೆಗೆ ಮತ್ತು ಅಲ್ಲಿಂದ ಬೆಂಗಳೂರಿನ ಒಂದು ಎಕರೆ ಪ್ರಾಯೋಗಿಕ ಹೊಲದಲ್ಲಿ ಟೊಮೆಟೊ, ಮೆಕ್ಕೆಜೋಳ ಮತ್ತು ಎಲೆಕೋಸು ಮುಂತಾದ ಬೆಳೆಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾಗುತ್ತಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾಹಿತಿಯಂತೆ ಮಾರ್ಚ್ 2026ರ ವೇಳೆಗೆ ವಿತರಿಸಲಾದ 25.89 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳ (ಸಾಯಿಲ್ ಹೆಲ್ತ್ ಕಾರ್ಡ್) ಆಧಾರದ ಮೇಲೆ, ಎಸ್‌ಟಿಸಿ-ಬಿ ತನ್ನ ಪಾಲುದಾರರೊಂದಿಗೆ ನೈಜ-ಸಮಯದ ಮಣ್ಣು, ನೀರಾವರಿ ಮತ್ತು ಹವಾಮಾನ ಸಂವೇದನಾ (ಸೆನ್ಸಿಂಗ್) ಸಾಧನಗಳ ಮೇಲೂ ಕಾರ್ಯನಿರ್ವಹಿಸುತ್ತಿದೆ.

ತಾನು ಅಭಿವೃದ್ಧಿಪಡಿಸುವ ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಅನುಗುಣವಾಗಿ, ಮೇಲ್ಛಾವಣಿ ಸೌರವಿದ್ಯುತ್ (ರೂಫ್‌ಟಾಪ್ ಸೋಲಾರ್) ಮತ್ತು ಕ್ಯಾಂಪಸ್‌ನಲ್ಲಿಯೇ ನೀರು ಹಾಗೂ ತ್ಯಾಜ್ಯ ಮರುಬಳಕೆಯ ವ್ಯವಸ್ಥೆಯ ಬೆಂಬಲದೊಂದಿಗೆ, ಎಸ್‌ಟಿಸಿ-ಬಿ ಶೇ. 100ರಷ್ಟು ಇಂಗಾಲ-ತಟಸ್ಥ (ಕಾರ್ಬನ್ ನ್ಯೂಟ್ರಲ್) ಕಾರ್ಯಾಚರಣೆಯ ಗುರಿಯತ್ತ ದಾಪುಗಾಲಿಡುತ್ತಿದೆ.

Leave a Reply

Your email address will not be published. Required fields are marked *