ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶೋಭಾ B S, ನಿರ್ದೇಶಕರಾಗಿ ಆರ್. ಅನಿತಾ, ಅಶ್ವಿನಿ, ಪವಿತ್ರ, ಎನ್., ಯಶೋದಮ್ಮ, ಆರ್.ಗಾಯತ್ರಿ, ಸಹನಶ್ರಿ, ಎಂ. ಲಕ್ಷ್ಮಮ್ಮ, ನಾಗರತ್ನ, ಆರ್ಶಿಯಾ ಸೌಲ್ತಾನ್, ಪರ್ವೀನ್ ತಾಜ್, ಶೃತಿ ಎಸ್., ಮುಂದಿನ 5 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಂಘದ ಚುನಾವಣೆಯಲ್ಲಿ ನಾಗೇಶ್ ಶೆಟ್ಟಿ ಸಹಕಾರ ಇಲಾಖೆಯಿಂದ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜೆ.ಮುನೇಗೌಡ,ಬಾಗಲೂರು ಗ್ರಾಮದ ಮುಖಂಡರಾದ ನಾಗಣ್ಣ, ಪ್ರಕಾಶ್, ಅನಿಲ್, ಕವೀಶ್, ನವೀನ್ ಸೇರಿದಂತೆ ಇನ್ನಿತರರಿದ್ದು, ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.