ಯೋಜನೆಯ ಲಾಭ ಪಡೆದುಕೊಳ್ಳಲು ರೈತಬಾಂಧವರಲ್ಲಿ ಮನವಿ

ಬೀದರ, ಜುಲೈ 20 (ಕರ್ನಾಟಕ ವಾರ್ತೆ)- 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ತಾಲ್ಲೂಕಿನ ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ತೊಗರಿ (ಮಳೆಯಾಶ್ರಿತ(ಮ.ಆ)) ಹಾಗೂ ಸೋಯಾಅವರೆ (ಮ.ಆ) ಬೆಳೆಗಳು ಮತ್ತು ಇತರೆ ಬೆಳೆಗಳಾದ ಹೆಸರು (ಮ.ಆ), ಉದ್ದು (ಮ.ಆ), ಮುಸುಕಿನ ಜೋಳ (ಮ.ಆ), ಜೋಳ (ಮ.ಆ), ಎಳ್ಳು (ಮ.ಆ), ಭತ್ತ (ನೀ & ಮ.ಆ), ಹತ್ತಿ (ಮ.ಆ) ಬೆಳೆಗಳನ್ನು ನಿಗದಿಪಡಿಸಲಾಗಿದ್ದು, “ಯೂನಿವರ್ಸಲ್ ಸೋಂಪೊ ಜನರಲ್ ಇನ್‌ಶ್ಯೂರೆನ್ಸ್ ಕಂಪನಿ ಲಿಮಿಟೆಡ್” ವಿಮಾ ಸಂಸ್ಥೆಯನ್ನು ಅನುಷ್ಠಾನ ಸಂಸ್ಥೆಯನ್ನಾಗಿ ನಿಗದಿಪಡಿಸಲಾಗಿದೆ.
ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪಾಲ್ಗೊಳ್ಳಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.
ಬೆಳೆ ವಿಮೆ ನೋಂದಣಿಗಾಗಿ ರೈತರು FRUITS ತಂತ್ರಾAಶದಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಂಡಿರಬೇಕು ಹಾಗೂ FRUITS ID ಪಡೆದುಕೊಂಡಿರಬೇಕು. FRUITS ತಂತ್ರಾAಶದಲ್ಲಿ ದಾಖಲಾದ ಸರ್ವೆ ನಂಬರಗಳಿಗೆ ಮಾತ್ರ ಬೆಳೆ ವಿಮೆ ನೊಂದಣಿ ಮಾಡಲು ಅವಕಾಶವಿರುತ್ತದೆ. ಜಂಟಿ ಖಾತೆದಾರರು FRUITS ತಂತ್ರಾAಶದಲ್ಲಿ ದಾಖಲಾದ ವಿಸ್ತೀರ್ಣಕ್ಕನುಗುಣವಾಗಿ ಬೆಳೆ ವಿಮೆ ನೊಂದಣಿ ಮಾಡಲು ಅವಕಾಶವಿರುತ್ತದೆ. FRUITS ID ದಾಖಲಿಸಲು ಅಥವಾ ಯಾವುದೇ ಮಾರ್ಪಾಡಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಕಛೇರಿಗಳಿಗೆ ಭೇಟಿ ನೀಡಬೇಕು ಮತ್ತು ಬೆಳೆವಾರು ನಿಗದಿಪಡಿಸುವ ಅಂತಿಮ ದಿನಾಂಕದೊಳಗಾಗಿ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಯೋಜನೆಯಲ್ಲಿ ಭಾಗವಹಿಸಿ ಲಾಭ ಪಡೆಯಬೇಕು. ರೈತರು ನೊಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೊಡಿಸಿದ ಬ್ಯಾಂಕ್ ಖಾತೆ ಪಾಸ್‌ಪುಕ್ ಮತ್ತು ಆಧಾರ ಸಂಖ್ಯೆಯೊAದಿಗೆ ಡಿ.ಸಿ.ಸಿ. ಇತರೆ ಬ್ಯಾಂಕ್, ಗ್ರಾಮ-ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬAಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ಸಂಪರ್ಕಿಸಬಹುದೆAದು ಬೀದರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ)

Leave a Reply

Your email address will not be published. Required fields are marked *