ಬೆಂಗಳೂರು, ಆಗಸ್ಟ್ 07, 2024: ಬಿಸಿನೆಸ್ ಟ್ರಾನ್ಸ್ ಫಾರ್ಮೇಷನ್ ಗೆ ಇರುವ ಎಐ ಪ್ಲಾಟ್ ಫಾರ್ಮ್ ಆಗಿರುವ ಸರ್ವೀಸ್‌ನೌ ಮಾಡಿರುವ ಹೊಸ ಸಂಶೋಧನೆಯ ಪ್ರಕಾರ, ಭಾರತೀಯರು ಹೋಲ್ಡ್ ಟು ಕಸ್ಟಮರ್ ಸರ್ವೀಸ್ (ಗ್ರಾಹಕರಿಗೆ ಕಾಯಿಸುವುದು) ಕಾರಣದಿಂದ 15 ಶತಕೋಟಿ ಗಂಟೆಗಳಿಗೂ ಹೆಚ್ಚು ಸಮಯವನ್ನು ಕಳೆದಿದ್ದಾರೆ. ‘ಕಸ್ಟಮರ್ ಎಕ್ಸ್ ಪೀರಿಯನ್ಸ್ ಇಂಟೆಲಿಜೆನ್ಸ್ ರಿಪೋರ್ಟ್ 2024’ ವರದಿಯು ಒಬ್ಬ ಗ್ರಾಹಕ ಯಾವುದೇ ದೂರು ಅಥವಾ ಸಮಸ್ಯೆಯ ಪರಿಹಾರ ಕಾರಣಕ್ಕೆ ಕಾಯುವಿಕೆಯಲ್ಲಿ ಸರಾಸರಿ ಒಂದಕ್ಕಿಂತ ಹೆಚ್ಚು ದಿನವನ್ನು (30.7 ಗಂಟೆಗಳು) ಕಳೆದಿದ್ದಾರೆ ಎಂದು ತಿಳಿಸಿದೆ. ಇದು ವಾರ್ಷಿಕವಾಗಿ $55 ಬಿಲಿಯನ್* (ಯುಎಸ್‌ಡಿ)ಯಷ್ಟು ಆರ್ಥಿಕ ನಷ್ಟಕ್ಕೆ ಸಮಾನಾಗಿದೆ ಎಂದೂ ತಿಳಿಸಲಾಗಿದೆ. (ಈ ಬರಹದ ಕೊನೆಯಲ್ಲಿ ಲೆಕ್ಕಾಚಾರ ಟಿಪ್ಪಣಿಗಳನ್ನು ನೋಡಬಹುದು)

18 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ 4500ಕ್ಕೂ ಹೆಚ್ಚು ಭಾರತೀಯರು ಲೋನರ್ಗನ್ ಸಹಯೋಗದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದು, ಕಳೆದ ವರ್ಷದಲ್ಲಿ ಗ್ರಾಹಕ ಸೇವಾ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಲು ನೆರವಾಗಿದ್ದಾರೆ.

ಈ ಕುರಿತು ಸರ್ವೀಸ್‌ನೌ ಇಂಡಿಯಾ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್‌ನ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮೀತ್ ಮಾಥುರ್ ಅವರು, “ನಿಧಾನಗತಿಯ ಸೇವೆಯ ಕಾರಣದಿಂದಾಗಿ 2024ರಲ್ಲಿ ಭಾರತೀಯ ಉದ್ದಿಮೆಗಳು ತಮ್ಮ ಗ್ರಾಹಕರ ನೆಲೆಯಲ್ಲಿನ ಮೂರನೇ ಎರಡರಷ್ಟು ಭಾಗದ ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿವೆ. ತಮ್ಮ ಸಮಸ್ಯೆ ಪರಿಹರಿಸಲು ಗರಿಷ್ಠ ಮೂರು ದಿನ ಕಾಯಬಹುದು, ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ ಬೇರೆ ಕಡೆಗೆ ಹೋಗಬೇಕಾಗುತ್ತದೆ” ಎಂದು ಹೇಳಿದ್ದಾರೆ.

ನಿಮಗೆ ಎಐ ಹೇಗೆ ಸಹಾಯ ಮಾಡಬಹುದು?
ಪ್ರತಿಕ್ರಿಯಿಸಿದವರಲ್ಲಿ ಸುಮಾರು ಮೂರನೇ ಎರಡರಷ್ಟು (62%) ಮಂದಿ ಕಳೆದ ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ ಸೆಲ್ಫ್ ಸರ್ವೀಸ್ ವ್ಯವಸ್ಥೆಯ ಮೂಲಕ ತಮ್ಮ ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅರ್ಧದಷ್ಟು ಮಂದಿ ಅವರಿಗೆ ಚಾಟ್ ಬೋಟ್ ಗಳು (55%) ಮತ್ತು ಸೆಲ್ಫ್ ಹೆಲ್ಪ್ ಮಾರ್ಗದರ್ಶಿ (56%) ಮೇಲೆ ಇದ್ದ ನಂಬಿಕೆಗಳು ಈಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಈ ಅಧ್ಯಯನವು ಭಾರತೀಯರಲ್ಲಿ ಎಐ ಮೇಲೆ ನಂಬಿಕೆ ಹೆಚ್ಚಾಗಿರುವ ಗಮನಾರ್ಹ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ವಿಶೇಷವಾಗಿ ಮೂರನೇ ಎರಡು ಭಾಗದಷ್ಟು ಮಂದಿ (66%) ಜೆನ್ ಎಐ ಉತ್ತಮ ಗ್ರಾಹಕ ಸೇವೆ ಒದಗಿಸುವ ವಿಶ್ವಾಸ ಹೊಂದಿದ್ದಾರೆ. ಸಾಂಪ್ರದಾಯಿಕ ವ್ಯಕ್ತಿ ಕೇಂದ್ರಿತ ಗ್ರಾಹಕ ಸೇವೆಗಿಂತ ಎಐ ಸೇವೆಯ ಮೇಲೆ 10% ನಂಬಿಕೆ ಹೆಚ್ಚಾಗಿದೆ.

ಸರ್ವೀಸ್‌ನೌ ಇದೀಗ ಭಾರತೀಯ ಉದ್ಯಮಗಳು ಮತ್ತು ಸರ್ಕಾರಿ ಏಜೆನ್ಸಿಗಳಿಗೆ ನೌ ಅಸಿಸ್ಟ್ ಮೂಲಕ ಎಐ ಸೌಲಭ್ಯವನ್ನು ಒದಗಿಸುತ್ತಿದೆ. ಉದ್ಯೋಗಿಗಳ ಮೇಲೆ ಇರುವ ಕೆಲಸದ ಹೊರೆಯನ್ನು ಎಐ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ ಮೂಲಕ ಉದ್ಯೋಗಿಗಳು ಹೆಚ್ಚು ಸಂಕೀರ್ಣವಾದ ಮತ್ತು ಮೌಲ್ಯವರ್ಧಿತ ಸಂವಹನಗಳ ಮೇಲೆ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಅದರ ಜೊತೆಗೆ ಹಳೆಯ ಗ್ರಾಹಕ ಮಾಹಿತಿಗಳನ್ನು ವಿಶ್ಲೇಷಿಸುವ ಮೂಲಕ ಎಐ, ವೈಯಕ್ತಿಕ ಆದ್ಯತೆಗಳು, ಅವಶ್ಯಕತೆಗಳು ಮತ್ತು ವರ್ತನೆಗಳನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ.

ನಿಧಾನಗತಿಯ ಸೇವೆಯೇ ಗ್ರಾಹಕ ಸೇವೆ ವಿಫಲಗೊಳ್ಳಲು ಕಾರಣ
ಈ ಅಧ್ಯಯನದ ಪ್ರಕಾರ ಹಲವು ರಚನಾತ್ಮಕ ಸಮಸ್ಯೆಗಳು ಗ್ರಾಹಕರ ಕಾಯುವ ಸಮಯ ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ. ವಿಶೇಷವಾಗಿ 48 ಪ್ರತಿಶತ ಭಾರತೀಯರು ಅಸಮರ್ಪಕ ಆಂತರಿಕ ಸಂವಹನವೇ ಗ್ರಾಹಕ ಸೇವಾ ವಿಳಂಬಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. 47 ಪ್ರತಿಶತ ಗ್ರಾಹಕರು ಸೇವಾ ಸಿಬ್ಬಂದಿಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಕೊರತೆಯಿದೆ ಎಂದು ಹೇಳಿದ್ದಾರೆ. 44 ಪ್ರತಿಶತ ಭಾರತೀಯರು ವಿವಿಧ ಇಲಾಖೆಗಳ ನಡುವೆ ಸಹಯೋಗ ಮತ್ತು ಜವಾಬ್ದಾರಿಯ ಕೊರತೆ ಇದೆ ಎಂದು ತಿಳಿಸಿದ್ದಾರೆ. 44 ಪ್ರತಿಶತದಷ್ಟು ಜನರು ಹಳೆಯ ಸಮಸ್ಯೆಗಳ ದಾಖಲೆಗಳನ್ನು ಇಟ್ಟುಕೊಳ್ಳದೇ ಇರುವುದೇ ಸಮಸ್ಯಗೆ ಕಾರಣ ಎಂದು ಹೇಳುತ್ತಾರೆ. 41 ಪ್ರತಿಶತದಷ್ಟು ಜನರು ತಮ್ಮ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಲ್ಲಿ ವಿಳಂಬವಾಗಲು ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬಹುದಾದ ಆಂತರಿಕ ವ್ಯವಸ್ಥೆಗಳಲ್ಲಿನ ಕೆಲವು ಸಮಸ್ಯೆಗಳು ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸುತ್ತಾರೆ.

ಪಾರದರ್ಶಕತೆ, ವೇಗ ಮತ್ತು ಸಹಾನುಭೂತಿ ಮುಖ್ಯ
60 ಪ್ರತಿಶತದಷ್ಟು ಭಾರತೀಯರು ಗ್ರಾಹಕ ಸೇವಾ ತಂಡಗಳು ಸಮಸ್ಯೆಗೆ ಪರಿಹಾರ ಒದಗಿಸುವ ವೇಗವನ್ನು ಹೆಚ್ಚುಗೊಳಿಸಲು ಬಯಸುತ್ತಾರೆ. ಸರಿಸುಮಾರು ಅರ್ಧದಷ್ಟು (48 ಪ್ರತಿಶತ) ಜನರು ಉತ್ತಮ ಗ್ರಾಹಕ ಸೇವಾ ಸೌಲಭ್ಯವನ್ನು ಬಯಸುತ್ತಾರೆ. ಸುಮಾರು 5ರಲ್ಲಿ 2 ಭಾರತೀಯರು (40 ಪ್ರತಿಶತ) ಪ್ರತಿಕ್ರಿಯೆ ನೀಡುವ ಸಮಯವನ್ನು ತೀವ್ರಗೊಳಿಸಬೇಕು ಅಥವಾ ಕಡಿಮೆಗೊಳಿಸಬೇಕು ಎಂದು ಬಯಸುತ್ತಾರೆ.

Leave a Reply

Your email address will not be published. Required fields are marked *