ಬೆಂಗಳೂರು ಯಲಹಂಕ

ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ” ಮಧುರಂ ಮನೋಹರಂ, ದ್ವಿತೀಯ ವಾರ್ಷಿಕೋತ್ಸವ ಭಾಗ -1″ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 22ರಂದು ಯಶಸ್ವಿಯಾಗಿ ಜರುಗಿತು. ಮೊದಲಿಗೆ ಪ್ರಥಮ ಪೂಜ್ಯನಾದ ವಿನಾಯಕನನ್ನು ಸ್ಮರಿಸುತ್ತಾ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಹಿರಿಯ ಪೋಷಕರಾದ ಶ್ರೀಮತಿ ಕಮಲಮ್ಮ, ಶ್ರೀಯುತ ಸತ್ಯನಾರಾಯಣ. ವಿ. ರಾಯ್ಕರ್ . ಸಮಾಜ ಸೇವಕರು ಹಾಗೂ ರಂಗ ಭೂಮಿ ಕಲಾವಿದರು ಶ್ರೀಯುತ ಕೆ. ಎನ್. ಗೋಪಾಲಯ್ಯ ಮತ್ತು ತಬಲಾ ವಾದಕರಾದ ಶ್ರೀಯುತ ಗಿರೀಶ್. ಎಸ್. ರಾಯಚೂರು ರವರು ಮುಖ್ಯ ಅತಿಥಿಗಳು. ಹಿರಿಯ ಪೋಷಕರು ಮತ್ತು ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ಸುಮಾರು ನೂರಕ್ಕೂ ಅಧಿಕ ಶ್ರೀ ಕೃಷ್ಣ ಕಲಾಲಯದ ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳಲಿ ಸಾಂಪ್ರದಾಯಿಕ, ಪೌರಾಣಿಕ ನೃತ್ಯಗಳನ್ನು ಪ್ರದರ್ಶಿಸಿ ನೋಡುಗರ ಗಮನ ಸೆಳೆದರು. ವಿಷೇಶವಾಗಿ ದಶಾವತಾರ ನೃತ್ಯ ರೂಪಕವನ್ನು ಪ್ರದರ್ಶಿಸಿದರು ಹಾಗೂ ಜಾನಪದ ಕಲೆಗಳಾದ ನಂದಿ ಕೋಲು, ಕರಗ, ಕೋಲಾಟ ಮುಂತಾದ ನೃತ್ಯಗಳನ್ನೂ ಸಹ ಪ್ರದರ್ಶಿಸಿದರು.
ಶ್ರೀ ಕೃಷ್ಣ ಕಲಾಲಯವು ಗುರು ಶ್ರೀಮತಿ ಸುನಿತಾ ಸುಕುಮಾರನ್ ರವರ ಕನಸಿನ ಕೂಸು. ಪ್ರತಿಭಾವಂತ, ಆಸಕ್ತಿಯುಳ್ಳ ವಿಧ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ಒದಗಿಸುವ ಸಲುವಾಗಿ ಸ್ಥಾಪಿತವಾದ ಸಂಸ್ಥೆಯೇ – ” ಶ್ರೀ ಕೃಷ್ಣ ಕಲಾಲಯ”. ಪ್ರಸ್ತುತ ಶ್ರೀ ಕೃಷ್ಣ ಕಲಾಲಯವು ಸುಮಾರು 200 ವಿದ್ಯಾರ್ಥಿಗಳನ್ನು ಹೊಂದಿದೆ.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *