





ಯಲಹಂಕ : ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ದೊರೆಯುವುದರ ಜೊತೆ ಲವಲವಿಕೆಯ ಬದುಕು ನಮ್ಮದಾಗುತ್ತದೆ ಈ ದಿಸೆಯಲ್ಲಿ ಯುವ ಜನಾಂಗ ವ್ತಸನಗಳಿಂದ ದೂರವಿದ್ದು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಯುವಕರಿಗೆ ಸಲಹೆ ನೀಡಿದರು.
ಯಲಹಂಕ ಕ್ಷೇತ್ರದ ಬ್ಯಾಲಕೆರೆ ಗ್ರಾಮದ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು ‘ಹೆಚ್ಚಿನ ಯುವಕರು ಕ್ರಿಕೆಟ್ ಆಟಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಇಂತಹ ಸಮಯದಲ್ಲಿ ಬ್ಯಾಲಕೆರೆಯ ಯುವಕರು ವಾಲಿಬಾಲ್ ಟೂರ್ನಿ ಆಯೋಜಿಸುವ ಮೂಲಕ ವಿಭನ್ನ ಎನಿಸಿಕೊಂಡಿರುವುದು ಸಂತೋಷದ ಸಂಗತಿ ಎಂದು ಯುವಕರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ,, ಗ್ರಾ.ಪಂ.ಸದಸ್ಯ ಬಿ.ಎಂ.ಮಂಜುನಾಥ್, ಬಿಜೆಪಿ ಯುವ ಮುಖಂಡರಾದ ಪತಿಗೌಡ, ಕಿರಣ್, ಅರುಣ್, ರಾಕೇಶ್, ಮನು, ದರ್ಶನ್, ಯೋಗಿ, ಲಕ್ಷ್ಮೀಕಾಂತ್, ಚಂದನ್, ನವೀನ್(ತಂಬಿ), ಚೇತನ್, ಮಧು, ಸಂತೋಷ್, ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಇನ್ನಿತರರಿದ್ದರು.
ಎರಡು ದಿನಗಳ ಕಾಲ ನಡೆಯಲಿರುವ ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದು, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 15 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ತೃತೀಯ ಸ್ಥಾನ ಪಡೆಯುವ ತಂಡಕ್ಕೆ 10 ಸಾವಿರ ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು.
ಸುದ್ದಿ ಹಾಗೂ ಜಾರಿಯಾತು ಗಾಗಿ ಸಂಪರ್ಕಿಸಿ
ಆರ್ ಹನುಮಂತು
9845085793
7349337989
9035282296