Month: January 2024

ಗ್ರೀನ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಿ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು

ಯಲಹಂಕ. ದಿನಾಂಕ 10/01/2024 ರಂದು ಹಸಿರೇ ಉಸಿರು ಟ್ರಸ್ಟ್ ನ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಬಿ ಎಂ ಹಾಗೂ ಡಾ ಸತ್ಯನಾರಾಯಣ್ ರವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿರುಮೇನಹಳ್ಳಿಯ ಶಾಲೆಗೆ ಆಗಮಿಸಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ 50 ರ…

ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ :

ಯಲಹಂಕದ ಸೂರಜ್ ಸ್ವೈನ್ ಗೆ ಚಿನ್ನದ ಪದಕ : ಯಲಹಂಕ : ಭಾರತೀಯ ರೋಲರ್ ಸ್ಕೇಟಿಂಗ್ ಸಂಸ್ಥೆ ವತಿಯಿಂದ ಚೆನ್ನೈ ನಲ್ಲಿ ಇತ್ತೀಚೆಗೆ ನಡೆದ 61ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಯಲಹಂಕದ ನಾರಾಯಣ ಇ-ಟೆಕ್ನೋ…

ರೇವಾ ವಿ.ವಿ. ಸಂಸ್ಥಾಪನಾ ದಿನಾಚರಣೆ :

ಇಸ್ರೋ ಹಿರಿಯ ವಿಜ್ಞಾನಿ ನಂಬಿನಾರಾಯಣನ್ ನಟ ಅನಂತ್ ನಾಗ್ ರವರಿಗೆ ಜೀವಮಾನದ ಸಾಧನೆ ಪ್ರಶಸ್ತಿ : ಯಲಹಂಕ : ರೇವಾ ವಿಶ್ವವಿದ್ಯಾ ಲಯದ ಸಂಸ್ಥಾಪಕರಾದ ಡಾ.ಪಿ.ಶಾಮರಾಜು ರವರ ಜನ್ಮದಿನದ ಪ್ರಯುಕ್ತ ರೇವಾ ವಿ.ವಿ.ಯ ಕುವೆಂಪು ರಂಗಮಂದಿರ ದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ…

ಮನೆ ಬಾಗಿಲಿಗೆ ಸರಕಾರ ಸೇವೆಗೆ ಇರಲಿ ಸಹಕಾರ : public power. R Hanumanthu. 9845085793

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಸಹ ಅನೇಕರಿಗೆ ಅರ್ಜಿ ಹಾಕಬೇಕು, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂಬುದರ ಅರಿವು ಇರುವುದಿಲ್ಲ. ಯಲಹಂಕದಲ್ಲಿಂದು ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ಇಂದು 5 ಸಾವಿರ ಅರ್ಜಿಗಳು ಬರುವ…

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.