
ಬೆಂಗಳೂರು, ನವೆಂಬರ್ 5, 2024: ನೆಸ್ಲೆ ಇಂಡಿಯಾ ಮತ್ತು ಎಸ್ಎಂ ಸೆಹಗಲ್ ಫೌಂಡೇಶನ್, ನುಹ್ ಜಿಲ್ಲೆಯಲ್ಲಿ ಪ್ರಾಜೆಕ್ಟ್ ’ವೃದ್ಧಿ’ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದರ ಪ್ರಯುಕ್ತ ಸಂಭ್ರಮಾಚರಣೆಯನ್ನು ನಡೆಸಿದವು. ಸಮುದಾಯ ನೇತೃತ್ವದ ಗ್ರಾಮೀಣ ಅಭಿವೃದ್ಧಿಗೆ ಬಲ ನೀಡಲು, 2019 ರಲ್ಲಿ ರೋಹಿರಾ ಗ್ರಾಮದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಪ್ರಾರಂಭವಾದಾಗಿನಿಂದ ಈ ಯೋಜನೆಯು, 14 ಗ್ರಾಮಗಳಾದ್ಯಂತ 18,000 ಫಲಾನುಭವಿಗಳ ಜೀವನಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ.
ಈ ಮೈಲಿಗಲ್ಲನ್ನು ತಲುಪಿದ ಸಂದರ್ಭದ ನೆನೆಪಿಗಾಗಿ ಕಲಿಯಾಕ ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಯೋಜನೆಯಿಂದ ಧನಾತ್ಮಕವಾಗಿ ಪ್ರಭಾವಿತವಾಗಿರುವ ಹಳ್ಳಿಗಳ ಶಾಲಾ ಅಧಿಕಾರಿಗಳು, ಪಂಚಾಯತ್ ಮತ್ತು ಸಮುದಾಯದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಮಹತ್ವದ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಶ್ ನಾರಾಯಣನ್, “ನೆಸ್ಲೆ ಇಂಡಿಯಾದಲ್ಲಿ ನಾವು ವ್ಯವಹಾರ ಎಂದರೆ ’ಫೋರ್ಸ್ ಫಾರ್ ಗುಡ್’ (ಒಳಿತನ್ನು ತರುವ ಶಕ್ತಿ) ಎಂದೇ ದೃಢವಾಗಿ ನಂಬಿದ್ದೇವೆ. ಉತ್ತಮ ಸಮಾಜವನ್ನು ನಿರ್ಮಿಸುವ ನಮ್ಮ ಬದ್ಧತೆಯ ಭಾಗವಾಗಿ, ಗ್ರಾಮೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಜೆಕ್ಟ್ ವೃದ್ಧಿಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಈ ಗ್ರಾಮಗಳಲ್ಲಿ ದೀರ್ಘಕಾಲಿಕ ಬದಲಾವಣೆಯನ್ನು ಸೃಷ್ಟಿಸಿದೆ. ಈ ಯೋಜನೆಯ ಅಡಿಯಲ್ಲಿ ಕೈಗೊಂಡಿರುವ ಅನೇಕ ಪರಿವರ್ತನಾ ಕಾರ್ಯಗಳಲ್ಲಿ ಇವೂ ಸೇರಿವೆ – ನೀರು ಮತ್ತು ನೈರ್ಮಲ್ಯದ ಕುರಿತಂತೆ ಮಧ್ಯಸ್ಥಿಕೆಗಳು; ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸುವುದು; ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳ ಸ್ಥಾಪನೆ. ಇದರ ಫಲವಾಗಿ ಹಲವಾರು ಅಭಿವೃದ್ಧಿ ಸೂಚಕಗಳ ಮೇಲೆ ಬಹಳಷ್ಟು ಉತ್ತಮ ಪರಿಣಾಮವಾಗಿದೆ. ಇದರಿಂದಾಗಿ ಸ್ಥಳೀಯ ಸಮುದಾಯಗಳು ಪ್ರಗತಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಉತ್ಸುಕರಾಗಿದ್ದಾರೆ.”
ಎಸ್ಎಂ ಸೆಹಗಲ್ ಫೌಂಡೇಶನ್ನ ಟ್ರಸ್ಟಿ ಮತ್ತು ಸಿಇಒ ಶ್ರೀಮತಿ ಅಂಜಲಿ ಮಖಿಜಾ: “2019 ರಿಂದ ಈ ಯೋಜನೆ ನಿರಂತರವಾಗಿ ಪ್ರಗತಿಯನ್ನು ಸಾಧಿಸಿದೆ. ಗ್ರಾಮೀಣ ಸಮುದಾಯಗಳ ಜೀವನದಲ್ಲಿ ವೃದ್ಧಿ ಯೋಜನೆ ಉಂಟುಮಾಡಿರುವ ಸ್ಪಷ್ಟ ಪರಿಣಾಮವನ್ನು ನೋಡಿ ನಮಗೆ ಬಹಳ ತೃಪ್ತಿಯಾಗಿದೆ. ಯೋಜನೆಯ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಗ್ರಾಮಾಭಿವೃದ್ಧಿ ಸಮಿತಿಗಳನ್ನು ಸ್ಥಾಪಿಸಲಾಗಿದೆ.”
ಪ್ರಾರಂಭದಿಂದಲೂ ಪ್ರಾಜೆಕ್ಟ್ ವೃದ್ಧಿ, ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 25 ಮಿಲಿಯನ್ ಲೀಟರ್ ಶೇಖರಣಾ ಸಾಮರ್ಥ್ಯವಿರುವ ಎಂಟು ಕೊಳಗಳ ಮರುಸ್ಥಾಪನೆ; ಉತ್ತಮ ಕೃಷಿ ಪದ್ಧತಿಗಳ ಮೂಲಕ 1000 ರೈತರನ್ನು ತೊಡಗಿಸಿಕೊಳ್ಳುವುದು; ಆರು ಶಾಲೆಗಳ ರೂಪಾಂತರ ಮತ್ತು ಸುಮಾರು 395 ಮಕ್ಕಳನ್ನು ಡಿಜಿಟಲ್ ಮತ್ತು ಜೀವನ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದು; ಪೌಷ್ಠಿಕಾಂಶಗಳ ಬಗ್ಗೆ ತಂಡಗಳಲ್ಲಿ 280 ಮಹಿಳೆಯರಿಗೆ ತರಬೇತಿ; 133 ಅಡಿಗೆಮನೆ ತೋಟಗಳು ಮತ್ತು ಅಭಿವೃದ್ಧಿಗಳನ್ನು ಸುಸ್ಥಿರಗೊಳಿಸಲು ಗ್ರಾಮ ಅಭಿವೃದ್ಧಿ ಸಮಿತಿಗಳ ರಚನೆ.