[
ರಾಜ್ಯದಲ್ಲಿ ಬರುವ ಆಗಷ್ಟ್ 1 ರಿಂದ ಹಾಲಿನ‌ ಮಾರಾಟ ಧರವನ್ನು ಕೆಎಂಎಪ್ ಪ್ರತಿ‌ಲೀಟರ್ ಗೆ 3 ರೂ ಹೆಚ್ಚಿಸಲಿದ್ದು. ಆ ಹಣವನ್ನು ನೇರವಾಗಿ ಹಾಲು ಉತ್ಪಾದನೆಯ ರೈತರಿಗೆ ನೀಡಲಿದೆ ಎಂದು ಕೆಎಂಎಫ್ ರಾಜ್ಯ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.
ನಗರದ ರಾಬವಿಕೋ ಹಾಲು ಉತ್ಪಾದನಾ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ದಿನೇ ದಿನೇ ಹಾಲಿನ ಉತ್ಪಾದನೆ ಕುಸಿಯುತ್ತಿದೆ. ಒಕ್ಕೂಟಕ್ಕೆ ಬರುವ ಹಾಲು 12 ಲಕ್ಷ ಲೀಟರ್ ಕಡಿಮೆ ಆಗಿದೆ.
ಹಸುಗಳ ಆಹಾರದ ವೆಚ್ಚ ಹೆಚ್ಚಳ ಮೊದಲಾದ ಕಾರಣದಿಂದ ಎಂದ ಅವರು, ಅಲ್ಲದೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರೈತರಿಗೆ ನೀಡುವ ಹಣ ಕಡಿಮೆ ಇದೆ. ಅದಕ್ಕಾಗಿ ರೈತರಿಗೆ ಹಾಲು ಉತ್ಪಾದನೆ ಲಾಭದಾಯಕವಲ್ಲದಾಗಿದೆ.
ನೆರೆಯ ಆಂದ್ರ, ಕೇರಳ, ತಮಿಳುನಾಡು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ಧರದಲ್ಲಿ ಮಾರಾಟ ಮಾಡುತ್ತಿದೆ. ಹಾಗಾಗಿ ಐದು ರೂ ಹೆಚ್ಚಿಸಲು ಕೋರಿತ್ತು. ಆದರೆ ಸಿಎಂ ಅವರು ಮೂರು ರೂ ಗ್ರಾಹಕರಿಗೆ ಹೆಚ್ಚಿಸಲು ಒಪ್ಪಿದ್ದಾರೆ. ಆ ಹಣವನ್ನು ರೈತರಿಗೆ ನೀಡಲಿದೆಂದರು.
ವಾಸ್ತವದಲ್ಲಿ ಒಕ್ಕೂಟಕ್ಕೆ 1.20 ಕೋಟಿ ಲೀಟರ್ ಹಾಲಿನ ಬೇಡಿಕೆ ಇದೆ. ಬೆಲೆ ಹೆಚ್ಚಳದಿಂದ ಹಾಲಿನ ಉತ್ಪಾದನೆ ಹೆಚ್ಚುವ ಸಾಧ್ಯತೆ ಇದೆಂದರು.
ಸರ್ಕಾರ ಐದು ರೂ ಪ್ರೋತ್ಸಾಹ ಧನ ನೀಡುತ್ತಿದೆ ಎಂದ ಅವರು ನಮ್ಮ ಕೆಎಂಎಫ್ ಹಾಲಿಗೆ ಇತರ ರಾಜ್ಯಗಳಲ್ಲೂ ಬೇಡಿಕೆ ಇದೆ. ರಸಾಯನಿಕ‌ ರಹಿತ ಉತ್ಪಾದನೆಯಾಗಿದೆ. ದುಬೈನಲ್ಲಿಯೂ ನಂದಿನಿ ಉತ್ಪನ್ನಗಳು ಮಾರಾಟ ಮಾಡುತ್ತಿದೆ.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪತೆಪ್ಪ, ನಿರ್ದೇಶಕರುಗಳಾದ ಎಂ. ಸತ್ಯನಾರಾಯಣ, ಶಿವಪ್ಪ ವಾದಿ, ಯಂಕನಗೌಡ, ಹೆಚ್.ಮರುಳ ಸಿದ್ದಪ್ಪ, ಭೀಮನಗೌಡ, ನಾಗಮಣಿ, ಜಿಂಕಾಲ್, ಶ್ರೀಕಾಂತಪ್ಪ ಮೊದಲಾದವರು ಇದ್ದರು,

Leave a Reply

Your email address will not be published. Required fields are marked *

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.