ಕತ್ತೆಗಳ ಮದುವೆ ಕಾರ್ಯ ನೆರವೇರಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಕ್ರಸ್ ಗ್ರಾಮಸ್ಥರು ಒಂದು ಗಂಡು ಮತ್ತು ಹೆಣ್ಣು ಕತ್ತೆಗಳನ್ನು ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದ ಬಸವೇಶ್ವರ ನಗರ ದಲ್ಲಿ ಮದುವೆ ಮಂಟಪ್ಪ ನಿರ್ಮಿಸಿ ಮನುಷ್ಯರ ಮದುವೆ ಸಮಾರಂಭಗಳಲ್ಲಿ ನಡೆಸಲಾಗುವ ಎಳ್ಳಕ್ಕಿ ಸಂತೆ, ಹಂದರ ತಪ್ಪಲ ತರುವದು, ಎದುರು ಭೇಟಿ, ಮದುಮಗಳನ್ನು ಕರೆತರುವುದು, ಭಷ್ಟಗಿ ಕಾರ್ಯಕ್ರಮ, ಸುರಿಗೆ ಸುತ್ತುವರೆಯುವದು, ಮಂಟಪ್ಪ ಅಲಂಕಾರ, ಜೊತೆಗೆ ಮಂತ್ರ ಜಪಿಸಿ ಅಕ್ಷತೆ ನೆರವೇರಿಸಿ ಸಡಗರ ಸಂಭ್ರಮದಿಂದ ಮದುವೆ ಮಾಡಿ ನಂತರ ಗ್ರಾಮದ ಪ್ರಮುಖ ರಸ್ತೆಗಳ ಮೇರವಣಿಗೆ ಮೂಲಕ ದುರ್ಗಾ ದೇವಿ ದೇವಸ್ಥಾನ ದಿಂದ ಬಸವೇಶ್ವರ ದೇವಸ್ಥಾನ, ಸೇರಿದಂತೆ ಗ್ರಾಮದ ಎಲ್ಲ ದೇವಸ್ಥಾಗಳಿಗೆ ಭೇಟ್ಟಿ ನೀಡಿ ದೇವರ ದರ್ಶನ ಮಾಡಿಸಿದರು.
ಕತ್ತೆಗಳಿಗೆ ಗ್ರಾಮದ ಮಹಿಳೆಯರು ಆರತಿ ಎತ್ತಿ ಆಶೀರ್ವದಿಸಿದರು. ಈ ಸಂಧರ್ಭದಲ್ಲಿ ಲಕ್ಷ್ಮೇಶ್ವರ ಕ್ರಸ್ ಗ್ರಾಮದ ಹಿರಿಯರು ಮಖಂಡರು ರೈತ ಸಂಘದವರು ಸಾರ್ವಜನಿಕರು ಹಾಗೂ ಮಹಿಳೆಯರು ಸುಮಾರು 500ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *