ರಾಜ್ಯದ ವಿಜಯನಗರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 27.2 ಮೆಗಾವ್ಯಾಟ್ನ ಗ್ರೂಪ್ ಕ್ಯಾಪ್ಟಿವ್ ಸೋಲಾರ್ ಹಾಗೂ ವಿಂಡ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ರಿನ್ಯೂ ಎನರ್ಜಿ ಗ್ಲೋಬಲ್ ಪಿಎಲ್ ಸಿ ಜಂಟಿಯಗಿ ಉದ್ಘಾಟಿಸಿದೆ.
(ಈ ದೂರದೃಷ್ಟಿಯ ಕಾರ್ಯಕ್ರಮದ ಹಂತ 1 ಸೌರ ಮತ್ತು ಪವನ ಶಕ್ತಿ ಸಾಮರ್ಥ್ಯ ಹೆಚ್ಚಳವನ್ನು ಒಳಗೊಂಡಿದೆ. ಒಟ್ಟು 20.6 ಮೆಗಾವ್ಯಾಟ್ ಮತ್ತು ಹಂತ 2 ಇನ್ನೂ 6.6 ಮೆಗಾವ್ಯಾಟ್ ಪವನ ಶಕ್ತಿ ಉತ್ಪಾದನೆ ಮಾಡಲಿದೆ)
ಬೆಂಗಳೂರು, ಜೂನ್ 29, 2023: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು 27.2 ಮೆಗಾವ್ಯಾಟ್ ಗ್ರೂಪ್ ಕ್ಯಾಪ್ಟಿವ್ ಸೋಲಾರ್ ಮತ್ತು ವಿಂಡ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಉದ್ಘಾಟಿಸುವ ಮೂಲಕ ಜಾಗತಿಕ ಪರಿಸರ ಸವಾಲುಗಳು 2050′ ಗುರಿಯೊಂದಿಗೆ ತನ್ನ ಬದ್ಧತೆಯನ್ನು ಮುಂದುವರೆಸಿದೆ. ಇದನ್ನು ರಾಜ್ಯದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿರುವ ರೆನ್ಯೂ ಎನರ್ಜಿ ಗ್ಲೋಬಲ್ ಪಿಎಲ್ ಸಿ ಯೊಂದಿಗೆ ಜಂಟಿ ಉದ್ಯಮದ ಭಾಗವಾವಗಿ ನಿರ್ಮಿಸಲಾಗಿದೆ.
ಇಂದಿನಿಂದ ಯೋಜನೆಯ ಮೂಲಕ ಉತ್ಪತ್ತಿಯಾಗುವ ಹಸಿರು ಶಕ್ತಿಯನ್ನು ಪ್ರತ್ಯೇಕವಾಗಿ ಟಿಕೆಎಂಗೆ ಹರಿಸಲಾಗುತ್ತದೆ. ಇದು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ವರ್ಷಕ್ಕೆ 51 ಕಿಲೋ ಟನ್ ನಷ್ಟು ಕಡಿಮೆ ಮಾಡಲಿದೆ. ಈ ಸಂದರ್ಭದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಪ್ರತಿನಿಧಿಗಳಾದ ಹಿರಿಯ ಉಪಾಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಸಂವಹನ ಅಧಿಕಾರಿ ಶ್ರೀ ಸುದೀಪ್ ಎಸ್. ದಾಲ್ವಿ, ಮತ್ತು ರಿನ್ಯೂನ ಬಿಸಿನೆಸ್ ಡೆವಲಪ್ ಮೆಂಟ್ – ಬಿ 2 ಬಿ ಬಿಸಿನೆಸ್ ನ ಉಪಾಧ್ಯಕ್ಷ ಶ್ರೀ ರಾಹುಲ ಕಶ್ಯಪ್ ಮತ್ತು ಎರಡೂ ಕಂಪನಿಗಳ ಇತರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.
ಜೂನ್ 2021 ರಿಂದ ಗ್ರಿಡ್ ವಿದ್ಯುಚ್ಛಕ್ತಿಯಲ್ಲಿ 100% ನವೀಕರಿಸಬಹುದಾದ ಇಂಧನದಲ್ಲಿ ಟಿಕೆಎಂನ ನಿರಂತರ ಸಾಧನೆಯನ್ನು ಮುದುವರೆಸಿರುವುದರಲ್ಲಿ ಇದು ಗಮನಾರ್ಹವಾಗಿದೆ. ಏಪ್ರಿಲ್ 2021 ಮತ್ತು ಮಾರ್ಚ್ 2023 ರ ನಡುವೆ 117 ಕಿಲೋ ಟನ್ ಕ್ಯುಮುಲೇಟೀವ್ ಕಾರ್ಬನ್ ಫೂಟ್ ಪ್ರಿಂಟ್ ಅನ್ನು ಸರಿದೂಗಿಸುವ ಮೂಲಕ, ಟಿಕೆಎಂ ತನ್ನ ಉತ್ಪನ್ನಗಳು, ಉತ್ಪಾದನಾ ಕಾರ್ಯಾಚರಣೆಗಳು ಮತ್ತು ಸೇವೆಗಳ ಸಂಪೂರ್ಣ ಲೈಫ್ ಸೈಕಲ್ ನುದ್ದಕ್ಕೂ ಪರಿಸರ ಸಂರಕ್ಷಣೆ ಬದ್ಧತೆಯನ್ನು ಪ್ರದರ್ಶಿಸಿದೆ.
ಇಂದಿನ ಮಹತ್ವದ ಮೈಲಿಗಲ್ಲು ಟೊಯೋಟಾ ತನ್ನ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಸೂಚಿಸುತ್ತದೆ, ಇದು ‘ಇಂಗಾಲದ ಶೂನ್ಯತೆಯನ್ನು’ ಸಾಕಾರಗೊಳಿಸುವ ಗುರಿಯನ್ನು ಹೊಂದಿದೆ.
ಟೊಯೊಟಾದ ವ್ಯಾಪಾರ ಬೆಳವಣಿಗೆಯನ್ನು ಗಮನಿಸುವುದಾದರೆ, ಅದರ ಉತ್ಪಾದನಾ ಕಾರ್ಯಾಚರಣೆಗಳಿಗೆ ಇಂಧನ ಅಗತ್ಯವು ಕಳೆದ ವರ್ಷಗಳಲ್ಲಿ ಹೆಚ್ಚಾಗಿದೆ. ಈ ಹೊಸ ನವೀಕರಿಸಬಹುದಾದ ಇಂಧನ ವ್ಯವಸ್ಥೆಯು ಟಿಕೆಎಂನ ಅಂತಹ ಹೆಚ್ಚುವರಿ ಹಸಿರು ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತದೆ. ಇದಲ್ಲದೆ, ಈ ಸಹಯೋಗದ ಪ್ರಯತ್ನವು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಶೂನ್ಯ ಸಮಾಜವನ್ನು ನಿರ್ಮಿಸುವ ಕಡೆಗೆ ಪರಿಸರವನ್ನು ರಕ್ಷಿಸಲು ಟಿಕೆಎಂನ ನಿರಂತರ ಅನ್ವೇಷಣೆಗೆ ಒಂದು ಉದಾಹರಣೆಯಾಗಿದೆ.
ರಿನ್ಯೂ ಬಿಸಿನೆಸ್ ಡೆವಲಪ್ಮೆಂಟ್ ಬಿ2ಬಿ ಬಿಸಿನೆಸ್ ಉಪಾಧ್ಯಕ್ಷ ಶ್ರೀ ರಾಹುಲ್ ಕಶ್ಯಪ್ ಅವರು ಈ ಕುರಿತು ಮಾತನಾಡಿ, “ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನೊಂದಿಗೆ ಪಾಲುದಾರರಾಗಲು ಮತ್ತು ಸುಸ್ಥಿರ ಇಂಧನ ಮೂಲಗಳನ್ನು ಅಳವಡಿಸಿಕೊಳ್ಳುವ ಅವರ ಪ್ರಯತ್ನಕ್ಕೆ ಬೆಂಬಲ ನೀಡಲು ನಾವು ಉತ್ಸುಕರಾಗಿದ್ದೇವೆ. ನಿವ್ವಳ ಶೂನ್ಯದತ್ತ ಜಾಗತಿಕ ಇಂಧನ ಪರಿವರ್ತನೆಗೆ ವೇಗವರ್ಧಕವಾಗಲು ರಿನ್ಯೂ ಬದ್ಧವಾಗಿದೆ ಮತ್ತು ಕಂಪನಿಗಳಿಗೆ ತಮ್ಮ ಕಾರ್ಯಾಚರಣೆಗಳನ್ನು ಡಿಕಾರ್ಬನೈಸ್ ಮಾಡಲು ಮತ್ತು ಅವರ ಹವಾಮಾನ ಗುರಿಗಳನ್ನು ಬೆಂಬಲಿಸಲು ಇನ್ನೊವೆಟೀವ್ ಪರಿಹಾರಗಳನ್ನು ನೀಡುತ್ತದೆ ಎಂದರು.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಹಿರಿಯ ಉಪಾಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಸಂವಹನ ಅಧಿಕಾರಿ ಎಸ್. ದಾಲ್ವಿ ಅವರು ಮಾತನಾಡಿ, “27.2 ಮೆಗಾವ್ಯಾಟ್ ಗ್ರೂಪ್ ಕ್ಯಾಪ್ಟಿವ್ ಸೋಲಾರ್ ಮತ್ತು ವಿಂಡ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಉದ್ಘಾಟಿಸಲು ನಾವು ಹೆಮ್ಮೆ ಪಡುತ್ತೇವೆ. ಇದು ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಅಳವಡಿಸಿಕೊಳ್ಳಲು ಮತ್ತು ಹಸಿರು ಉತ್ಪಾದನಾ ಕಾರ್ಯಾಚರಣೆಗಳನ್ನು ಹೆಚ್ಚಿಸಲು ನಮ್ಮ ಅಚಲ ಪ್ರಯತ್ನವನ್ನು ಸೂಚಿಸುತ್ತದೆ. ನಮ್ಮ ಎಲ್ಲಾ ವಾಹನಗಳನ್ನು ಹಸಿರು ಇಂಧನ ಮೂಲವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಈ ಸಹಯೋಗವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆ ಮೂಲಕ ನೆಟ್ ಜೀರೊ (ನಿವ್ವಳ ಶೂನ್ಯ) ಇಂಗಾಲ ಹೊರಸೂಸುವಿಕೆಯ ಗುರಿಗಳನ್ನು ಸಾಧಿಸಲು ರಾಷ್ಟ್ರಕ್ಕೆ ಬೆಂಬಲ ನೀಡುತ್ತದೆ.
2014 ರಲ್ಲಿ ಕೇವಲ 6.0% ದೊಂದಿಗೆ ಪ್ರಾರಂಭವಾದ ಟಿಕೆಎಂನ ಹಸಿರು ಇಂಧನ ಸೋರ್ಸಿಂಗ್ ಈಗ 100% ಸಾಧನೆ ಮಾಡಿದೆ. ಹಲವು ವರ್ಷಗಳಿಂದ ಈ ಗಮನಾರ್ಹ ಹಸಿರು ಶಕ್ತಿ ಮಧ್ಯಸ್ಥಿಕೆಗಳೊಂದಿಗೆ, ನಮ್ಮ ಉತ್ಪಾದನಾ ಘಟಕ ಕಾರ್ಯಾಚರಣೆಗಳಲ್ಲಿ ನಮ್ಮ ಇಂಗಾಲದ ಹೆಜ್ಜೆಗುರುತುಗಳನ್ನು ಗಣನೀಯವಾಗಿ ಕಡಿಮೆ ಮಾಡಲು ನಮಗೆ ಸಾಧ್ಯವಾಗಿದೆ ಎಂದರು.
2017-18ರಲ್ಲಿ ಟಿಕೆಎಂ ತನ್ನ ಬಿಡದಿ ಆವರಣದಲ್ಲಿ ಒಟ್ಟು 8.2 ಮೆಗಾವ್ಯಾಟ್ ಸಾಮರ್ಥ್ಯದ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರ ಮತ್ತು ಗ್ರೌಂಡ್ ಮೌಂಟ್ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ನವೀಕರಿಸಬಹುದಾದ ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಹೆಚ್ಚುವರಿಯಾಗಿ ಟಿಕೆಎಂ ತನ್ನ ಕಾರ್ಖಾನೆ ಆವರಣದ ಹೊರಗೆ ಮೀಸಲಾದ ಸೌರ ಉದ್ಯಾನದಲ್ಲಿ 18 ಮೆಗಾವ್ಯಾಟ್ ಓಪನ್ ಆಕ್ಸೆಸ್ ಸ್ಥಾಪನೆಯನ್ನು ರೀನ್ಯೂ ಮೂಲಕ ಸ್ಥಾಪಿಸಿತು. ಈ ಕಾರ್ಯಕ್ರಮಗಳು ಟಿಕೆಎಂಗೆ ಆರ್ಥಿಕ ವರ್ಷ 2014 ರಿಂದ ತನ್ನ ನವೀಕರಿಸಬಹುದಾದ ಇಂಧನ ಸಂಗ್ರಹವನ್ನು ಕ್ರಮೇಣ ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ, ತನ್ನ ಉತ್ಪಾದನಾ ಘಟಕದ ಕಾರ್ಯಾಚರಣೆಗಳಿಗೆ ನವೀಕರಿಸಬಹುದಾದ ಇಂಧನ ಪೂರೈಕೆಯನ್ನು ಖಚಿತ ಪಡಿಸಿದೆ.
27.2 ಮೆಗಾವ್ಯಾಟ್ ಗ್ರೂಪ್ ಕ್ಯಾಪ್ಟಿವ್ ಸೋಲಾರ್ ಮತ್ತು ವಿಂಡ್ ನವೀಕರಿಸಬಹುದಾದ ಇಂಧನ ಯೋಜನೆಯ ಉದ್ಘಾಟನೆಯೊಂದಿಗೆ, ಟಿಕೆಎಂನ ಒಟ್ಟು ಕ್ಯುಮುಲೇಟೋವ್ ಗ್ರೀನ್ ಎನರ್ಜಿ ಅಳವಡಿಕೆ 53.4 ಮೆಗಾವ್ಯಾಟ್ ಆಗಿದೆ. ಅಂತಹ ಹಸಿರು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ಟಿಕೆಎಂ ತನ್ನ 2035 ರ ಜಾಗತಿಕ ಗುರಿ ಸಮಯಕ್ಕಿಂತ ಮುಂಚಿತವಾಗಿ ‘ಉತ್ಪಾದನೆಯಲ್ಲಿ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ’ ಸಾಧಿಸಲು ಸಾಧ್ಯವಾಗಲಿದೆ. ಇದು ಸುಸ್ಥಿರ ವ್ಯವಹಾರ ವಿಧಾನಗಳಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.