









ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಚುನಾವಣೆ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ ತಂಡದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ :
ಯಲಹಂಕ : ಸಮರ್ಥ ಆಡಳಿತ, ಶ್ಲಾಘನೀಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಜನಮನ್ನಣೆ ಪಡೆದಿರುವ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ 2025-30ರ ಐದು ವರ್ಷಗಳ ಅವಧಿಗೆ ಫೆಬ್ರವರಿ 15ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಹಕಾರ ಸಂಘದ ಹಾಲಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ ತಂಡದ 12 ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳು ಬುಧವಾರ ಸಿಂಗನಾಯಕನಹಳ್ಳಿ ಯಲ್ಲಿನ ಸಹಕಾರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಉಳಿದ ಒಬ್ಬ ಅಭ್ಯರ್ಥಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಈ ವೇಳೆ ಸಹಕಾರ ಸಂಘದ ಹಾಲಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಅತ್ಯುತ್ತಮ ಆಡಳಿತ ವೈಖರಿ, ಪ್ರಶಂಸಾರ್ಹವಾದ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮವಾದ ಹೆಸರು ಗಳಿಸಿದ್ದು, ದೇಶದ ವಿವಿಧ ರಾಜ್ಯಗಳ ಸಹಕಾರ ಸಚಿವರು ಹಾಗೂ ಸಹಕಾರ ಕ್ಷೇತ್ರದ ದಿಗ್ಗಜ ಮಹನೀಯರು ಸಿಂಗನಾಯಕನಹಳ್ಳಿ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿ, ಇಲ್ಲಿನ ಆಡಳಿತ ವ್ಯವಸ್ಥೆಯ ವೈಖರಿ ಯನ್ನು ಗಮನಿಸಿ, ಇಲ್ಲಿನ ಆಡಳಿತ ಮಾದರಿ ಯನ್ನು ತಮ್ಮಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯ. ಇದು ನಮ್ಮ ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂದ ಗೌರವ ಎನ್ನಬಹುದು. ಕಳೆದ ಹಲವು ವರ್ಷಗಳ ನಮ್ಮ ಆಡಳಿತದಲ್ಲಿ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಹಲವು ರೀತಿಯ ಸಾಲ ಸೌಲಭ್ಯಗಳು, ನೆರವು ಕಾರ್ಯಗಳನ್ನು ಕೈಗೊಂಡಿದ್ದು ಈ ಬಗ್ಗೆ ನಮಗೆ ಹೆಮ್ಮೆಯಿದೆ. ರೈತಾಪಿ ವರ್ಗದ ಜನತೆಗೆ ಟ್ರ್ಯಾಕ್ಟರ್ ಖರೀದಿ, ಬೀಜ, ರಸಗೊಬ್ಬರ ಪೂರೈಕೆ ಸೇರಿದಂತೆ ಕೃಷಿ ತಾಂತ್ರಿಕ ಸಲಕರಣೆಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳು, ಕರಕುಶಲ ಉದ್ಯಮ, ಗುಡಿ ಕೈಗಾರಿಕೆ ಗಳಿಗೆ ಸಾಲ ಸೌಲಭ್ಯ ಮತ್ತು ನೆರವು ನೀಡುವ ಮೂಲಕ ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ವಲಯದ ಪ್ರಗತಿಗೆ ಇಂಬು ನೀಡಲಾಗಿದೆ. ನಮ್ಮ ಈ ಎಲ್ಲಾ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ನಮ್ಮ ತಂಡದ ಎಲ್ಲಾ ಅಭ್ಯರ್ಥಿ ಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್, ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ ತಂಡದ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಆವಲಹಳ್ಳಿಯ ಎ.ತಿಮ್ಮರಾಯಿ ಗೌಡ, ಕೋಗಿಲು ಗ್ರಾಮದ ಕೆ.ಆರ್.ಪುಟ್ಟರಾಜು, ಅದ್ದೆವಿಶ್ವ ನಾಥಪುರದ ಎಂ.ಮಂಜುನಾಥ್, ನಾಗೇನಹಳ್ಳಿ ಗ್ರಾಮದ ಎನ್.ಶಿವಕುಮಾರ್, ಮಾರಸಂದ್ರ ಗ್ರಾಮದ ಎಂ.ಪಿ.ಈಶ್ವರಾಚಾರ್, ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿ ದೊಡ್ಡಬೆಟ್ಟಹಳ್ಳಿಯ ಪುಷ್ಪಲತ ಚಂದ್ರಶೇಖರ್, ಹಿಂದುಳಿದ ವರ್ಗದ ಪ್ರವರ್ಗ ‘ಎ’ ಮೀಸಲು ಕ್ಷೇತ್ರದ ಅಭ್ಯರ್ಥಿ ಯಲಹಂಕದ ಎನ್.ಮುನಿಯಪ್ಪ(ಕೂರ್ಲಪ್ಪ), ಪ್ರವರ್ಗ ‘ಬಿ’ ಮೀಸಲು ಕ್ಷೇತ್ರದ ಅಭ್ಯರ್ಥಿ ಯಲಹಂಕದ ವೈ.ಕೆ.ಮುರಾರಿ ರಾಮು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿ ನಾಗದಾಸನ ಹಳ್ಳಿಯ ಎನ್.ಎ. ಚಂದ್ರು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಅಭ್ಯರ್ಥಿ ಯಲಹಂಕದ ಅಮರಾವತಿ, ಸಹಕಾರ ಸಂಘದ ಸಿಇಓ ಆರ್.ಶಶಿಧರ್ ಸೇರಿದಂತೆ ಯಲಹಂಕ ಕ್ಷೇತ್ರದ ಹಲವು ಬಿಜೆಪಿ ಮುಖಂಡರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu kogilu layout Yelahanka
9845085793
7349337989
