



















,
ಸ್ವ ಸಹಾಯ ಸಂಘದ ಮಹಿಳಾ ತರಬೇತುದಾರರಿಗೆ “ಸಖಿ ಸಾರಥಿ” ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ : ಶ್ರೀಮತಿ ಕೆ.ಎಸ್. ಲತಾ ಕುಮಾರಿ
ಇಂದು ಯಲಹಂಕ ತಾಲ್ಲೂಕು ಪಂಚಾಯತಿ, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಯಲಹಂಕ ಮತ್ತು ಬೆಂಗಳೂರು ಉತ್ತರ ತಾಲೂಕಿನಿಂದ LMV/HMV ಡ್ರೈವಿಂಗ್ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಹೆವಿ ಮೋಟಾರ್ ಡ್ರೈವಿಂಗ್ ಇನ್ಸ್ಟಿಟ್ಯೂಟ್ ತರಬೇತಿ ಸಂಸ್ಥೆ ಸಿಂಗನಾಯಕನಹಳ್ಳಿ, ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋ ಪಿಂಕ್ ಕ್ಯಾಬ್ ಮುಖ್ಯಸ್ಥರು ಶ್ರೀಮತಿ ಅನುರಾಧ ರವರು, ಜಿಲ್ಲಾ ಪಂಚಾಯತಿ ಮಾನ್ಯ ಮುಖ್ಯ ಯೋಜನಾಧಿಕಾರಿ ಶ್ರೀಮತಿ ವಿನುತಾ ರಾಣಿ ರವರು, ಮಾನ್ಯ ಯೋಜನಾ ನಿರ್ದೇಶಕರು ಶ್ರೀ ಮೋಹನ್ ಕುಮಾರ್ ಎಲ್ ರವರು, ಮಾನ್ಯ ಸಹಾಯಕ ಯೋಜನಾಧಿಕಾರಿ ಶ್ರೀ ಡಾ. ಪ್ರಮೋದ್ ರವರು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಧು ಎಲ್ ರವರು, ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಅಮರಾವತಮ್ಮ ರವರು, ಗ್ರಾಮ ಪಂಚಾಯತಿ ಅಧಿಕಾರಿ ಶ್ರೀ ದಾಮೋದರ್ ರವರು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು, ಭಾರಿ ವಾಹನ ಚಾಲಕರ ಸಂಸ್ಥೆ ಸಿಂಗನಾಯಕನಹಳ್ಳಿ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸ್ವ ಸಹಾಯ ಸಂಘದ ಮಹಿಳಾ ತರಬೇತುದಾರರು ಉಪಸ್ಥಿತರಿದ್ದರು.
