ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದಿಂದ ವಿಜ್ಞಾನ ಮಿನಿ ಟೆಕ್ ಮೇಳ – 2025

ಸ್ಥಳ: ಜಿಎಂಪಿಎಸ್, ಗೃಹಲಕ್ಷ್ಮಿ ಬಡಾವಣೆ, ಬೆಂಗಳೂರು
ದಿನಾಂಕ: 25-07-2025
ಆಯೋಜಕರು: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ – ಡಿಜಿ ಕ್ಷೇತ್ರ

ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಡಿಜಿ ಕ್ಷೇತ್ರದ ವತಿಯಿಂದ ದಿನಾಂಕ 25 ಜುಲೈ 2025 ರಂದು ಜಿಎಂಪಿಎಸ್ ಗೃಹಲಕ್ಷ್ಮಿ ಬಡಾವಣೆ ಶಾಲೆಯಲ್ಲಿ ವಿಜ್ಞಾನಾಧಾರಿತ ಮಿನಿ ಟೆಕ್ ಮೇಳವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಈ ಮೇಳದ ಉದ್ಘಾಟನೆಯನ್ನು ಬೆಂಗಳೂರು ಉತ್ತರ ವಲಯ – 1ರ
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಚ್.ಕೆ. ತಾರಾನಾಥ್ ಸರ್ ಇವರು ವೈಜ್ಞಾನಿಕ ಚಟುವಟಿಕೆ ಮಾಡುವುದರ ಮೂಲಕ ಉದ್ಘಾಟಿಸಿದರು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಭವಿಷ್ಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣವು ಹೇಗೆ ನೆರವಾಗುತ್ತದೆ ಎಂಬ ಕುರಿತು ಪ್ರೇರಣಾದಾಯಕವಾದ ಭಾಷಣದ ಮೂಲಕ ನೆರವೇರಿಸಿದರು.

ಈ ವಿಜ್ಞಾನ ಮೇಳವು ವಿದ್ಯಾರ್ಥಿಗಳ ಸೃಜನಶೀಲತೆಯ ಅನಾವರಣ ವೇದಿಕೆಯಾಗಿದ್ದು, ಅವರ ವೈಜ್ಞಾನಿಕ ನುರಿತತೆ ಮತ್ತು ಅನ್ವೇಷಣಾ ಕೌಶಲ್ಯಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಒದಗಿಸಿತು. ಕಾರ್ಯಕ್ರಮದಲ್ಲಿ ಜಿಎಂಪಿಎಸ್ ಗೃಹಲಕ್ಷ್ಮಿ ಬಡಾವಣೆ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಕೃಷ್ಣಮೂರ್ತಿ ಸರ್ ಮತ್ತು ಪಿಎಮ್ ಶ್ರೀ ಶಾಲೆಯ ಮುಖ್ಯಶಿಕ್ಷಕಿ ರಾಧಾ ಮ್ಯಾಡಂ ಅವರು ಉಪಸ್ಥಿತರಿದ್ದು, ಮಕ್ಕಳ ಪ್ರತಿಭೆಯನ್ನು ಮೆಚ್ಚುಗೆ ಸಲ್ಲಿಸಿದರು. ಇವುಗಳೊಂದಿಗೆ ಇಬ್ಬರೂ ಶಾಲೆಗಳ ಹಲವಾರು ಶಿಕ್ಷಕರು ಸಹ ಸಂಪೂರ್ಣ ಒಕ್ಕುಟದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತಮ್ಮ ಸಹಕಾರ ನೀಡಿದರು.

ಈ ವಿಶಿಷ್ಟ ಮೇಳದಲ್ಲಿ ಒಟ್ಟು 421 ವಿದ್ಯಾರ್ಥಿಗಳು (232 ವಿದ್ಯಾರ್ಥಿನಿಯರು ಮತ್ತು 189 ವಿದ್ಯಾರ್ಥಿಗಳು) ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನ, ಪರಿಸರ, ತಂತ್ರಜ್ಞಾನ ಹಾಗೂ ನವೀನ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ 30ಕ್ಕಿಂತ ಹೆಚ್ಚು ನೂತನ ಮಾದರಿಗಳನ್ನು ಅವರು ತಯಾರಿಸಿದ್ದರು. ಈ ಮಾದರಿಗಳ ತಯಾರಿ ಮತ್ತು ಪ್ರದರ್ಶನದಲ್ಲಿ 30 ಯಂಗ್ ಇನ್ಸ್‌ಪೆಕ್ಟರ್ ಲೀಡರ್‌ಗಳು ತಮ್ಮ ಪಾಠಪದ್ಧತಿಗಳಿಗೆ ಅನುಗುಣವಾಗಿ ನೈಪುನ್ಯತೆ ಮತ್ತು ನಾಯಕತ್ವವನ್ನು ಮೆರೆದರು.

ಕಾರ್ಯಕ್ರಮದ ಕೊನೆಗೆ, ಬ್ಲಾಕ್ ಶಿಕ್ಷಣಾಧಿಕಾರಿ ತಾರಾನಾಥ್ ಸರ್ ಅವರು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಶಿಕ್ಷಣ ಶೈಲಿ, ಮಕ್ಕಳಲ್ಲಿ ಪಾರದರ್ಶಕ ಶೋಧನಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ವಿಶಿಷ್ಟ ಶ್ಲಾಘನೆ ವ್ಯಕ್ತಪಡಿಸಿದರು. ಮೇಳದ ಯಶಸ್ಸಿಗೆ ಕಾರಣರಾದ ಶಿಕ್ಷಕರು, ಇನ್‌ಸ್ಪೆಕ್ಟರ್‌ಗಳು, ವಿದ್ಯಾರ್ಥಿಗಳು ಮತ್ತು ಅಗಸ್ತ್ಯ ತಂಡದ ಎಲ್ಲ ಸದಸ್ಯರಿಗೂ ಅವರು ಅಭಿನಂದನೆ ಸಲ್ಲಿಸಿದರು.

ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ ಪ್ರೀತಿಯನ್ನು ಹೆಚ್ಚಿಸುವಲ್ಲಿ ಮತ್ತು ಕಲಿಕೆಯನ್ನು ಅನುಭವಾತ್ಮಕ ಹಾಗೂ ರಂಜಕಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ನಂಬಿಕೆಯನ್ನು ಈ ಮೇಳ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ಅಗಸ್ತ್ಯ ಮಾರ್ಗದರ್ಶಿಕರಾದ
ಗೋಪಿ ಆರ್ ಮತ್ತು ಲಾವಣ್ಯ ಈ ಮೇಳವನ್ನು ಆಯೋಜಿಸಿದ್ದರು ಇದೆ ರೀತಿ ಕೃಷ್ಣಾನಂದ ನಗರ ವಿಜ್ಞಾನ ಕೇಂದ್ರ ಮಾರ್ಗದರ್ಶಕ ರಾದ ವಿಜಯಲಕ್ಷ್ಮಿ ಬಿ.ಎಸ್ ಇವರು ಸಹಾ ಜಿ.ಹೆಚ್.ಪಿ.ಎಸ್ ಮುಳಿಗಲ್ ವ್ಯಾಲಿ ಶಾಲೆಯಲ್ಲಿ ಮಿನಿ ವಿಜ್ಞಾನ ಮೇಳವನ್ನು ಆಯೋಜಿಸಿದ್ದರು

Leave a Reply

Your email address will not be published. Required fields are marked *