



ನಾಟ್ಯಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ:- “ನೃತ್ಯ ರೂಪಕ ಉತ್ಸವ -2025”
ನಾಟ್ಯಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ ರವರು “ನೃತ್ಯ ರೂಪಕ ಉತ್ಸವ -2025” ಎಂಬ ಕಾರ್ಯಕ್ರಮವನ್ನು 25 ಜುಲೈ 2025 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿ , ವಿಜೃಂಭಣೆಯಿಂದ ನಡೆಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹೇಂದ್ರ ಮುಣ್ಣೋತ್ ಜೈನ್, ಲಿಪಿ ಪ್ರಾಜ್ಞೆ ವೈ. ಕೆ ಸಂಧ್ಯಾ ಶರ್ಮ, ವಿದುಷಿ ಶ್ರೀಮತಿ ಉಷಾ ಬಸಪ್ಪ, ಶ್ರೀಮತಿ ರಮ. ಎಸ್, ಗುರು ವಿದುಷಿ ಸಂತಾನಲಕ್ಷ್ಮಿ, ಶ್ರೀ ಕೆ. ಸಿ. ಸಿಂಗ್, ಗುರು ವಿದುಷಿ ಶ್ರೀಮತಿ ಲಲಿತಾ ದಿಲೀಪ್ ಕುಮಾರ್, ಡಾ|| ರವೀಶ್ ಹೆಚ್. ವಿ , ಡಾ|| ಸರಸ್ವತಿ ರಜತೇಶ್ ರವರು ಆಗಮಿಸಿದ್ದರು . ಗುರು ವಿದುಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ವಿಧ್ಯಾರ್ಥಿಗಳು “ಪುಣ್ಯನದಿ ” ಎಂಬ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ಗಂಗೆಯ ಜನನ , ಭಗೀರಥ ಗಂಗೆಯನ್ನು ಭೂಮಿಗೆ ಕರಿದ ಕಾರಣ, ತುಂಗಾ ಭದ್ರೆಯರ ಸಮ್ಮಿಲನ ಹಾಗೂ ಈಗಿನ ಜಲ ಮಾಲಿನ್ಯದ ಬಗ್ಗೆ ನೃತ್ಯ ರೂಪಕದ ಮೂಲಕ ಅತ್ಯದ್ಭುತವಾಗಿ ಪ್ರದರ್ಶಿಸಿದರು . ನೃತ್ಯ ರೂಪಕವನ್ನು ಅತ್ಯುತ್ತಮವಾಗಿ ಗುರು ವಿದುಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸಂಯೋಜಿಸಿದ್ದು ಅವರ ಶಿಷ್ಯರಾದ ಮೋಹಿತ, ಕೀರ್ತನ ರವಿಶಂಕರ್, ಕೀರ್ತನ ಪ್ರಭಾಕರ್, ಎಮ್ .ಲಿಖಿತ, ಮಾನ್ಯ, ಲೇಖನ ಡಿ ಆರ್, ಕೀರ್ತನ ರವಿಕುಮಾರ್, ಸುಷ್ಮಿತಾ, ನಿಸರ್ಗ, ಪಂಚಮಿ ಜೆ, ಸೌಜನ್ಯ ರವರು ಅಷ್ಟೇ ಅಚ್ಚುಕಟ್ಟಾಗಿ ಪ್ರದರ್ಶಿಸಿ ನೋಡುಗರ ಮನ ಸೆಳೆದಿದ್ದಾರೆ. ವಿಶೇಷ ಪಾತ್ರಗಳಲ್ಲಿ ಗಂಗೆಯಾಗಿ ಡಾ|| ಶ್ವೇತ ಮೂರ್ತಿ , ಶಿವನ ಪಾತ್ರದಲ್ಲಿ ಶ್ರೀಮತಿ ಸಂಧ್ಯಾ ಮಧು , ಬಲಿಚಕ್ರವರ್ತಿ ಪಾತ್ರದಲ್ಲಿ ಹೇಮಾ ಅಶೋಕ್ ಶೆಟ್, ಭಗೀರಥನ ಪಾತ್ರದಲ್ಲಿ ಭಾನು ದೇವರಾಜ್ರವರು ಕಾಣಿಸಿಕೊಂಡಿದ್ದಾರೆ.