







ಜನ್ಮದಿನಾಚರಣೆ ಪ್ರಯುಕ್ತ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ :
ಯಲಹಂಕ : ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ಯಲಹಂಕದ ಅಲ್ಲಾಳಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ವಿಶ್ವವಾಣಿ ಫೌಂಡೇಶನ್’ ವತಿಯಿಂದ ಉಚಿತ ನೋಟ್ ಪುಸ್ತಕ, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿ.ವಿ. ಮುಂತಾದ ಪರಿಕರಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯ ಎಂ.ಮುನಿರಾಜು, ಬಿಜೆಪಿ ಮುಖಂಡರಾದ ರಾಮಮೂರ್ತಿ, ಸೋಮಶೇಖರ್, ಚಂದ್ರೇಗೌಡ, ಬಿಜೆಪಿ ಯುವ ಮುಖಂಡರಾದ ಗೌತಮ್, ಜನಾರ್ದನ ಸಿ.ಆರ್., ವೆಂಕಟೇಶ್ ಸೇರಿದಂತೆ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿದ್ದರು.
