ಯಶಸ್ವಿಯಾಗಿ ಸಂಪನ್ನಗೊಂಡ ನಂದಿಗಿರಿ ಪ್ರದಕ್ಷಿಣೆ :

ಎಸ್ ಆರ್ ವಿಶ್ವನಾಥ್ ಅವರ 5 ಸಾವಿರ ಅಭಿಮಾನಿಗಳಿಂದ ಗಿರಿ ಪ್ರದಕ್ಷಣೆ :

ಯಲಹಂಕ : ಯಲಹಂಕ ಕ್ಷೇತ್ರ ಮತ್ತು ಜನತೆಗೆ ಒಳಿತಾಗಲೆಂಬ ಕೋರಿಕೆಯೊಂದಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ, ವಿ.ಎಂ.ಚಂದ್ರಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ನಂದಿಗಿರಿ ಪ್ರದಕ್ಷಿಣೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಾಸಕ ಎಸ್ ಆರ್ ವಿಶ್ವನಾಥ್ ಅವರ ಸುಮಾರು 5 ಸಾವಿರ ಅಭಿಮಾನಿಗಳು ಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡು, ಇತಿಹಾಸ ಪುಣ್ಯ ಪ್ರಸಿದ್ಧ ಶ್ರೀ ಭೋಗ ನಂದೀಶ್ವರ ಸ್ವಾಮಿ ಮತ್ತು ಶ್ರೀ ಅರುಣಾಚಲೇಶ್ವರ ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾದರು.

ಸೋಮವಾರ ಮುಂಜಾನೆ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಿಂದ ಆರಂಭವಾದ ನಂದಿಗಿರಿ ಪ್ರದಕ್ಷಣೆ 12 ಗಂಟೆ ವೇಳೆಗೆ ಸಂಪನ್ನಗೊಂಡಿತು. ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸಹಸ್ರಾರು ಸಂಖ್ಯೆಯ ತಮ್ಮ ಅಭಿಮಾನಿಗಳೊಂದಿಗೆ ನಂದಿಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದುದು ಈ ಬಾರಿಯ ನಂದಿಗಿರಿ ಪ್ರದಕ್ಷಿಣೆಯ ವಿಶೇಷತೆಯಾಗಿತ್ತು.

ಎಸ್ ಆರ್ ವಿಶ್ವನಾಥ್ ಅವರ ಅಭಿಮಾನಿಗಳಿಂದ ಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೇವೆಗಳನ್ನು ಕಲ್ಪಿಸಲಾಗಿತ್ತು. ಶಾಸಕ ಎಸ್ ಆರ್ ವಿಶ್ವನಾಥ್ ಅವರೊಂದಿಗೆ ಸುಮಾರು ಐದು ಸಾವಿರ ಅಭಿಮಾನಿಗಳು ಒಂದೇ ಬಗೆಯ ಕೇಸರಿ ಬಣ್ಣದ ಟೀ ಶರ್ಟ್ ತೊಟ್ಟು ಗಿರಿ ಪ್ರದಕ್ಷಿಣೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಆಷಾಡ ಮಾಸದ ಕೊನೆಯ ಸೋಮವಾರ ನಂದಿಗಿರಿ ಪ್ರದಕ್ಷಿಣೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುವ ಮೂಲಕ ಒಳಿತಾಗುತ್ತದೆ ಎಂಬ ಪ್ರತೀತಿಯಿದೆ. 18 ವರ್ಷಗಳ ಹಿಂದೆ ಆರಂಭವಾದ ನಂದಿಗಿರಿ ಪ್ರದಕ್ಷಿಣೆ ವರ್ಷ ಕಳೆದಂತೆ ಹೆಚ್ಚಿನ ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯಲಹಂಕ ನಗರ ಮಂಡಲ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿ.ಎಂ.ಚಂದ್ರಯ್ಯ ಅವರು ಕಳೆದ ಹತ್ತು ವರ್ಷಗಳಿಂದ ಯಲಹಂಕ ಕ್ಷೇತ್ರದ ಒಳಿತನ್ನು ಕೋರಿ ನಂದಿಗಿರಿ ಪ್ರದಕ್ಷಿಣೆ ಮಾಡುತ್ತಾ ಬಂದಿದ್ದು, ಈ ಬಾರಿ ನಂದಿಗಿರಿ ಪ್ರದಕ್ಷಿಣೆಯಲ್ಲಿ ನನ್ನನ್ನು ಪಾಲ್ಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೃತ್ಪೂರ್ವಕವಾಗಿ ಒಪ್ಪಿಕೊಂಡು ಪಾಲ್ಗೊಂಡಿದ್ದೇನೆ. ಇದು ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಯಲಹಂಕದಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಹ್ವಾನಿಸಿ ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಇಂಗಿತವಿದೆ, ಎಲ್ಲದಕ್ಕೂ ಶ್ರೀ ಭೋಗನಂದೀಶ್ವರ ಸ್ವಾಮಿಯ ಕೃಪೆ ಇರಬೇಕಷ್ಟೇ ಎಂದರು.

ನಂದಿಗಿರಿ ಪ್ರದಕ್ಷಿಣೆಯ ದೈವ ಮಹತ್ವದ ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ, ಎಸ್.ಆರ್.ವಿಶ್ವನಾಥ್ ಅಭಿಮಾನಿ ಬಳಗದ ಅಧ್ಯಕ್ಷ ವಿ.ಎಂ.ಚಂದ್ರಯ್ಯ, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿಗಳಾದ ವಿ.ಎಂ.ಈಶ್ವರ್, ವಿ.ಪವನ್ ಕುಮಾರ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ, ಸೋಮೇಶ್ವರ ನಗರ ವಾರ್ಡ್ ಅಧ್ಯಕ್ಷ ರವೀಂದ್ರ, ಕೆಂಪೇಗೌಡ ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಬಿಜೆಪಿ ಮುಖಂಡರಾದ ಮುನಿರಾಜು, ದಾಮೋದರ್, ಶರತ್, ಬ್ಯಾಲಕೆರೆ ವೆಂಕಟೇಶ್, ಮಲ್ಲಿಕಾರ್ಜುನ್, ಅಕುಲ್, ಮಹಿಳಾ ಮುಖಂಡರಾದ ಪ್ರಭಾ ಪುಟ್ಟರಾಜು, ಶ್ಯಾಮಲಾ ಬಾಬು, ಲಕ್ಷ್ಮಿ, ಭಾಗ್ಯ, ಪದ್ಮ ಸೇರಿದಂತೆ ಎಸ್.ಆರ್.ವಿಶ್ವನಾಥ್ ಅಭಿಮಾನಿ ಬಳಗದ ಸಹಸ್ರಾರು ಸದಸ್ಯರಿದ್ದರು.

Leave a Reply

Your email address will not be published. Required fields are marked *