









ಎಸ್ ಆರ್ ವಿಶ್ವನಾಥ್ ಅಭಿಮಾನಿಗಳಿಂದ ನಂದಿಗಿರಿ ಪ್ರದಕ್ಷಿಣೆ :
ವಿ.ಎಂ.ಚಂದ್ರಯ್ಯ ನೇತೃತ್ವದಲ್ಲಿ 5 ಸಾವಿರ ಅಭಿಮಾನಿಗಳಿಂದ ಭೋಗ ನಂದೀಶ್ವರ ಕ್ಷೇತ್ರಕ್ಕೆ ಯಾತ್ರೆ :
ಯಲಹಂಕ : ಯಲಹಂಕ ಕ್ಷೇತ್ರ ಮತ್ತು ಜನತೆಗೆ ಒಳಿತಾಗಲೆಂಬ ಕೋರಿಕೆಯೊಂದಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸುಮಾರು 5 ಸಾವಿರ ಅಭಿಮಾನಿಗಳು ಇತಿಹಾಸ ಪುಣ್ಯ ಪ್ರಸಿದ್ಧ ಕ್ಷೇತ್ರ ಎನಿಸಿರುವ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಸೋಮವಾರ ಮುಂಜಾನೆ ಯಾತ್ರೆ ಹಮ್ಮಿಕೊಂಡಿದ್ದು, ಯಾತ್ರೆಯ ಭಾಗವಾಗಿ ನಂದಿಗಿರಿ ಪ್ರದಕ್ಷಣೆ ಮಾಡಲಿದ್ದಾರೆ ಎಂದು ಯಲಹಂಕ ನಗರ ಮಂಡಲ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರು, ಶಾಸಕ ಎಸ್ ಆರ್ ವಿಶ್ವನಾಥ್ ಅವರ ಕಟ್ಟಾ ಅಭಿಮಾನಿ ವಿ.ಎಂ.ಚಂದ್ರಯ್ಯ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ ಅವರು ‘ಕಳೆದ ಹತ್ತು ವರ್ಷಗಳಿಂದ ಶ್ರಾವಣ ಮಾಸದ ಮೊದಲ ಸೋಮವಾರ ದಂದು ನಂದಿಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳುತ್ತಾ ಬಂದಿದ್ದು, ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಹಸ್ರಾರು ಅಭಿಮಾನಿ ಗಳು ಶ್ರೀ ಭೋಗ ನಂದೀಶ್ವರ ಸ್ವಾಮಿ ಆಲಯಕ್ಕೆ ಯಾತ್ರೆ ಕೈಗೊಂಡು, ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮತ್ತು ಕ್ಷೇತ್ರದ ಜನತೆಗೆ ಒಳಿತಾಗಲೆಂದು ಶ್ರೀ ಭೋಗ ನಂದೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ಸುಮಾರು 14 ಕಿಲೋ ಮೀಟರ್ ವಿಸ್ತೀರ್ಣದ ನಂದಿಗಿರಿ ಪ್ರದಕ್ಷಿಣೆ ಮಾಡಿಕೊಂಡು ಬಂದಿದ್ದಾರೆ.
ಆದರೆ ಈ ವರ್ಷ ನಂದಿಗಿರಿ ಪ್ರದಕ್ಷಿಣೆ ಕಾರ್ಯಕ್ರಮವನ್ನು ಕೊಂಚ ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿದ್ದು, ನಂದಿಗಿರಿ ಪ್ರದಕ್ಷಿಣೆಯಲ್ಲಿ ಈ ಬಾರಿ ಶಾಸಕ ಎಸ್.ಆರ್.ವಿಶ್ವನಾಥ್, ಆರ್.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನಿರ್ದೇಶಕರಾದ ಅಲೋಕ್ ವಿಶ್ವನಾಥ್ ನಮ್ಮೊಂದಿಗೆ ಪಾಲ್ಗೊಳ್ಳುತ್ತಿ ರುವುದು ಪ್ರಮುಖ ಆಕರ್ಷಣೆ ಮತ್ತು ವಿಶೇಷತೆಯಾಗಿದೆ.
ಎಸ್ ಆರ್ ವಿಶ್ವನಾಥ್ ಅವರ ಹೆಸರು ರಾಜ್ಯದಲ್ಲೇ ಅಭಿವೃದ್ಧಿಗೆ ಒಂದು ಬ್ರಾಂಡ್ ನೇಮ್ ಆಗಿದ್ದು, ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ, ಹಿಂದೂ ಧರ್ಮ, ದೇವರು, ರಾಷ್ಟ್ರೀಯತೆ, ಸನಾತನ ಆಚಾರ ವಿಚಾರಗಳಿಗೆ ದಕ್ಕೆ ಉಂಟಾದಾಗ ಮೊದಲಿಗರಾಗಿ ಧ್ವನಿ ಎತ್ತುವ, ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಶಾಸಕ ಎಸ್.ಆರ್.ವಿಶ್ವನಾಥ್ ಅವರ ನಡೆಯೇ ವಿಭಿನ್ನ, ಅವರ ಈ ಗುಣಕ್ಕೆ ಮಾರುಹೋಗಿ ನಾನು ಅವರ ಅಭಿಮಾನಿಯಾದೆ, ಕಳೆದ ಹತ್ತು ವರ್ಷಗಳಿಂದ ಅವರ ಹೆಸರಲ್ಲಿ ನಂದಿಗಿರಿ ಪ್ರದಕ್ಷಣೆ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದು, ಅವರ ಶ್ರೇಯಸ್ಸಿನಲ್ಲಿ ನಮ್ಮ ಹಾಗೂ ಕ್ಷೇತ್ರದ ಜನತೆಯ ಶ್ರೇಯಸ್ಸನ್ನು ಕಾಣುವುದು ಅಭಿಮಾನಿಗಳಾದ ನಮ್ಮ ಆಶಯವಾಗಿದೆ. ನಂದಿಗಿರಿ ಪ್ರದಕ್ಷಣೆ ವರ್ಷ ಕಳೆದಂತೆ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯ ಪರಾಕಾಷ್ಠೆ ತಲುಪುತ್ತದೆಯೇ ಹೊರತು ಕಡಿಮೆ ಎಂಬ ಮಾತೆ ಇಲ್ಲ ಎಂದು ವಿ.ಎಂ.ಚಂದ್ರಯ್ಯ ತಮ್ಮ ಅನಿಸಿಕೆ ಹಂಚಿಕೊಂಡರು.
