











ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ :
ರೈತರ ಮನವೊಲಿಸಿ ರಸ್ತೆ ಅಗಲೀಕರಣಕ್ಕೆ ಒತ್ತು :
ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ಬೈರಾಪುರ, ದಿಬ್ಬೂರು, ಲಿಂಗನಹಳ್ಳಿ, ಕಾಳೇನಹಳ್ಳಿ , ಲಿಂಗರಾಜುಪುರ, ಮಾವಳ್ಳಿಪುರ, ಕೊಂಡಶೆಟ್ಟಹಳ್ಳಿ ಕೊಡಗಿ ತಿರುಮಳಾಪುರ, ಸಾಸುವೆಘಟ್ಟ , ಸೋಲದೇವನಹಳ್ಳಿ ಹಾಗೂ ತಮ್ಮೇನಹಳ್ಳಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಬಿಡಿಎ ಅನುದಾನದ ಅಡಿಯಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ‘ಈ ಬಾರಿ ಯಲಹಂಕ ಕ್ಷೇತ್ರದ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ಸುಮಾರು ಮೂರುವರೆ ಅಡಿಗಳಂತೆ ಒಟ್ಟು ಏಳು ಅಡಿಗಳಷ್ಟು ಅಗಲೀಕರಣ ಮಾಡುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆ ಅಗಲೀಕರಣಕ್ಕೆ ಅಗತ್ಯವಿದ್ದ ಜಾಗವನ್ನು ರೈತರ ಮನವೊಲಿಸಿ ಪಡೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ.
ವಿಶೇಷವಾಗಿ ಇಂದು ಬೈರಾಪುರ ಗ್ರಾಮದಿಂದ ಹನಿಯೂರು ಮೂಲಕ ಬ್ಯಾತ ಸೇರುವ ಸಂಪರ್ಕ ರಸ್ತೆ, ದಿಬ್ಬೂರು, ಲಿಂಗನಹಳ್ಳಿ, ಕಾಳೇನಹಳ್ಳಿ, ಲಿಂಗರಾಜಪುರ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಕೊಡಗಿತಿರುಮಳಾಪುರ ಮತ್ತು ಸಾಸುವೆಘಟ್ಟ ಗ್ರಾಮಗಳ ಸಂಪರ್ಕ ರಸ್ತೆ ಮತ್ತು ಸೋಲದೇವನಹಳ್ಳಿಯಿಂದ ಆಚಾರ್ಯ ಕಾಲೇಜು ಮಾರ್ಗವಾಗಿ ಮಾದನಾಯಕನಹಳ್ಳಿ ಸೇರುವ ಸಂಪರ್ಕ ರಸ್ತೆ ಸೇರಿದಂತೆ ಹಲವು ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಇದರೊಟ್ಟಿಗೆ ಕಾಳತಮ್ಮನಹಳ್ಳಿ ಗ್ರಾಮದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಉಳಿದಂತೆ ಯಲಹಂಕ ನಗರ ವ್ಯಾಪ್ತಿಯಲ್ಲಿ ಫ್ಲೈಓವರ್ ಗಳು, ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದ್ದು ಮುಂದಿನ ಏಪ್ರಿಲ್ ವೇಳೆಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥಪುರ ಮಂಜುನಾಥ್, ಸೋಮಶೇಖರ್, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ಗ್ರಾ.ಪಂ.ಅಧ್ಯಕ್ಷರಾದ ಅಮರಾವತಮ್ಮ, ಶಾಂತಮ್ಮ, ಸಂಜೀವಯ್ಯ, ಗ್ರಾಪಂ. ಮಾಜಿ ಅಧ್ಯಕ್ಷರಾದ ಟಿ.ರಮೇಶ್, ಕೆ.ಆರ್.ತಿಮ್ಮೇಗೌಡ, ಕಿರಣ್, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾತ್ ರೆಡ್ಡಿ, ಉಪಾಧ್ಯಕ್ಷ ಇಟಗಲ್ ಪುರ ಮೋಹನ್, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಬಿಜೆಪಿ ಮುಖಂಡರಾದ ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಕೆ.ಸಿ.ಬಾಬು, ಆವಲಹಳ್ಳಿ ಕಿರಣ್, ಜಿ.ಸಿ.ಮಂಜುನಾಥ್, ಹೇಮಂತ್ ಕುಮಾರ್, ಕೊಲುವರಾಯನಹಳ್ಳಿ ಮಂಜುನಾಥ್, ಲಿಂಗನಹಳ್ಳಿ ವೆಂಕಟೇಶ್, ಮಹಿಳಾ ಮೋರ್ಚಾದ ಮಂಜುಳ ಮಹೇಂದ್ರ, ಭಾರತಿ ವೆಂಕಟೇಶ್, ಸುನಂದಮ್ಮ, ಬಿಜೆಪಿ ಯುವ ಮೋರ್ಚಾದ ಎಚ್.ಎಸ್.ಕಿರಣ್, ಲಕ್ಷ್ಮೀಪತಿಗೌಡ, ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.
