ಬಿಜೆಪಿ ಮುಖಂಡ ಶಿವಾನಂದ ಸಿ. ಅವರ ಜನ್ಮದಿನ :
ಎಸ್ ಆರ್ ವಿಶ್ವನಾಥ್, ಹಲವು ಮುಖಂಡರಿಂದ ಶುಭ ಹಾರೈಕೆ :
ಯಲಹಂಕ :‌ ಕ್ಷೇತ್ರದ ಬಿಜೆಪಿ ಮುಖಂಡರು, ಸಿಂಗನಾಯಕನ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಶಿವನಂದ ಸಿ. ಅವರ ಜನ್ಮದಿನದ ಪ್ರಯುಕ್ತ ಅವರ ಸ್ವಗ್ರಾಮ ಸಿಂಗನಾಯಕನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಶಿವಾನಂದ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ವಿಶ್ವನಾಥಪುರ ಮಂಜುನಾಥ್, ಸತೀಶ್ ಕಡತನಮಲೆ, ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ಇಟಗಲ್ ಪುರ ಮೋಹನ್, ಎಸ್ ಜಿ ಪ್ರಶಾಂತ್ ರೆಡ್ಡಿ, ಎಸ್ ಆರ್ ಜನಾರ್ದನ್, ಮುರಾರಿರಾಮು, ಡಿ.ಹೇಮಂತ್ ಕುಮಾರ್, ಮುನಿದಾಸಪ್ಪ, ವಿ.ಪವನ್ ಕುಮಾರ್, ಕಾಕೋಳು ಮುನೇಶ್, ಡಾ.ಶಶಿಕುಮಾರ್, ಆವಲಹಳ್ಳಿ ಕೇಶವಮೂರ್ತಿ, ತಿಮ್ಮರಾಯಿ ಗೌಡ, ಮುನೇಗೌಡ, ಕೊಲುವರಾಯನಹಳ್ಳಿ ಮಂಜುನಾಥ್, ವಸಂತ್ ಅರಕೆರೆ, ಗೋವಿಂದರಾಜು, ನವೀನ್(ತಂಬಿ), ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಶಿವಾನಂದ ಅವರ ಕುಟುಂಬ ವರ್ಗದವರಿದ್ದು, ಜನ್ಮದಿನದ ಶುಭ ಹಾರೈಸಿದರು.

Leave a Reply

Your email address will not be published. Required fields are marked *