








ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಹಿರಿಯ ಕೈಮಗ್ಗ ಕಾರ್ಮಿಕರಿಗೆ ಸನ್ಮಾನ :
ಚೌಡೇಶ್ವರಿ ವಾರ್ಡ್ ನ ಕೊಂಡಪ್ಪ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮ :
ಯಲಹಂಕ : ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಯಲಹಂಕ ನಗರದ ಚೌಡೇಶ್ವರಿ ವಾರ್ಡ್‌ನ ಕೊಂಡಪ್ಪ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಗ್ಗಗಳಲ್ಲಿ ಕೆಲಸ ಮಾಡುವ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹತ್ವದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಚೌಡೇಶ್ವರಿ ವಾರ್ಡ್ ನ ಹಿರಿಯ ಮುಖಂಡರು, ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಚೌಡೇಶ್ವರಿ ವಾರ್ಡ್ 2ರ ಬಿಜೆಪಿ ಅಧ್ಯಕ್ಷರಾದ ವಿ.ವಿ.ರಾಮಮೂರ್ತಿ, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ, ಹಿರಿಯ ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ರೆಡ್ಡಿ, ಆರ್.ಶ್ರೀನಿವಾಸಲು, ನಾಗೇನಹಳ್ಳಿ ಶಿವಕುಮಾರ್, ಮುನಿರಾಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಸಾಮಾಜಿಕ ಜಾಲ ತಾಣದ ದಾಮೋದರ್, ಧನಂಜಯ, ಆಂಜಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾ ವೀರೇಶ್, ವೈದ್ಯಕೀಯ ಪ್ರಕೋಷ್ಠದ ಲತಾ ಚಂದ್ರಶೇಖರ್, ಪ್ರಭಾ ಪುಟ್ಟರಾಜು, ರಮಾ ಮುನಿರಾಜು, ಚೌಡೇಶ್ವರಿ ವಾರ್ಡ್ 2 ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ, ಅನುಪಮಾ ಚಂದ್ರಶೇಖರ್ ಸೇರಿದಂತೆ ಚೌಡೇಶ್ವರಿ ವಾರ್ಡ್ ಮುಖಂಡರು, ನಾಗರೀಕರು ಹಾಗೂ ನೇಕಾರ ಬಂಧುಗಳಿದ್ದರು.
