ಧರ್ಮಸ್ಥಳ ವಿರುದ್ಧದ ಅಪಪ್ರಚಾರಕ್ಕೆ ಸಿಡಿದೆದ್ದ ಶಾಸಕ ಎಸ್ ಆರ್. ವಿಶ್ವನಾಥ್ :
500 ಕಾರುಗಳಲ್ಲಿ ‘ಧರ್ಮಸ್ಥಳ ಚಲೋ’ ಅಭಿಯಾನ :
ಯಲಹಂಕ : ಧರ್ಮಸ್ಥಳದ ವಿರುದ್ಧ   ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ನಿರಂತರ ಅಪಪ್ರಚಾರಕ್ಕೆ ಸಿಡಿದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಸ್ವಗ್ರಾಮ ಸಿಂಗನಾಯಕನಹಳ್ಳಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಶನಿವಾರ ‘ಧರ್ಮಸ್ಥಳ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದರು.
 
ಸಿಂಗನಾಯಕನಹಳ್ಳಿಯಿಂದ ನೆಲಮಂಗಲಕ್ಕೆ ತೆರಳಿ ಅಲ್ಲಿಂದ ಸುಮಾರು 500 ಕಾರುಗಳಲ್ಲಿ  ಸಹಸ್ರಾರು ಮುಖಂಡರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಶನಿವಾರ ಬೆಳಿಗ್ಗೆ ತೆರಳಿದರು.
ಧರ್ಮಸ್ಥಳ ಚಲೋ ಅಭಿಯಾನ ಕುರಿತು ಮಾತನಾಡಿದ ಎಸ್ ಆರ್ ವಿಶ್ವನಾಥ್ ‘ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಸಂಕಲ್ಪ’ ದೊಂದಿಗೆ ಧರ್ಮಸ್ಥಳ ಚಲೋ ಅಭಿಯಾನಕ್ಕೆ ಇಂದು ಚಾಲನೆ ನೀಡಿದ್ದು, ಸುಮಾರು 500‌ ಕಾರುಗಳಲ್ಲಿ ಸಾವಿರಾರು ಮುಖಂಡರು ತೆರಳುತ್ತಿದ್ದೇವೆ. ತನಿಖೆಯ ನೆಪದಲ್ಲಿ ನಮ್ಮ ಧರ್ಮ, ದೇವಾಲಯಗಳು, ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಸುವ ಅಪಪ್ರಚಾರವನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ನಮ್ಮ ಧರ್ಮ ಮತ್ತು ದೇವರಿಗೆ ಚ್ಯುತಿ ತರುವಂತಹ ಘಟನಾವಳಿಗಳು ಎಲ್ಲಿಯೇ ನಡೆದರೂ ಸಹ ಅದರ ವಿರುದ್ಧ ಪ್ರತಿಭಟಿಸಿ, ನೈತಿಕ ಶಕ್ತಿ ತುಂಬುವಲ್ಲಿ ಯಲಹಂಕ‌ ಕ್ಷೇತ್ರದ ಮುಖಂಡರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾ ಬಂದಿದ್ದಾರೆ. ಧರ್ಮಸ್ಥಳದ ವಿರುದ್ಧ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸುವ ಸಲುವಾಗಿ ಇಂದು ‘ಧರ್ಮಸ್ಥಳ ಚಲೋ’ ಅಭಿಯಾನ ಕೈಗೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ಈ ಅಭಿಯಾನ ರಾಜ್ಯ ವ್ಯಾಪಿಯಾಗಿ ನಡೆಯಲಿದೆ. ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಆಗಮಿಸಲಿದ್ದು, ಅವರೊಂದಿಗೂ ಸಹ ಭೇಟಿ ನೀಡಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಎಂ.ಜಿ.ರಾಮಮೂರ್ತಿ, ಸತೀಶ್ ಕಡತನಮಲೆ, ವಿಶ್ವನಾಥಪುರ ಮಂಜುನಾಥ್, ಮುರಾರಿರಾಮು, ಈಶ್ವರ್, ವಿ.ಪವನ್ ಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್, ಎಸ್ ಜಿ ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ಟಿ.ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಎಸ್ ಆರ್ ಜನಾರ್ಧನ್, ಎಚ್.ಸಿ.ರಾಜೇಶ್, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಇಟಗಲ್ ಪುರ ಮೋಹನ್, ಕೊಲುವರಾಯನಹಳ್ಳಿ ಮಂಜುನಾಥ್, ಮುನಿಕೃಷ್ಣ, ಕೆ.ಬಾಬು ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.

Leave a Reply

Your email address will not be published. Required fields are marked *