ಬಾಗೇಪಲ್ಲಿ (ಭಾಗ್ಯನಗರ):-

KDSS ನ ಜಿಲ್ಲಾ ಅಧ್ಯಕ್ಷ ಎಂ ಜಿ ಕಿರಣ್ ಕುಮಾರ್ ನೇತೃತ್ವದಲ್ಲಿ SCSP-TSP 2013ರ ಕಾಯ್ದೆ ಯ ಸಮರ್ಪಕ ಜಾರಿಗೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಧರಣಿ…..

ಮುದ್ದಲಪಲ್ಲಿ ಕಿರಣ್ ಕುಮಾರ್ ಮಾತನಾಡುತ್ತಾ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಭಾಗ್ಯನಗರ) ಯಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ SCSP -TSP ಹಣ ವನ್ನು ಬೇರೆ ಬೇರೆ ಯೋಜನೆ ಗಳಿಗೆ ಬಳಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ದ ವಿರುದ್ಧ ” ಪರಿಶಿಷ್ಟ ಹಣ ಪರಿಶಿಷ್ಟರಿಗೆ ಸೇರಬೇಕು”……..

ಎಸ್.ಸಿ ಎಸ್.ಪಿ-ಟಿ.ಎಸ್.ಪಿ. ಕಾಯ್ದೆ 2013ನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನ ಬದ್ಧವಾಗಿ ಹೊಂದಲು ರಾಜ್ಯ ಸರ್ಕಾರವು ರೂಪಿಸಿದೆ. ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗದಿ ಪಡಿಸಿದ ಅನುದಾನವನ್ನ ಅನ್ಯ ಉದ್ದೇಶಗಳಿಗೆ ಬಳಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸರ್ಕಾರಗಳು ಅವಕಾಶ ನೀಡಿರುತ್ತವೆ. ಆದ್ದರಿಂದ ಸದರಿ 7ಡಿ ಮತ್ತು 7ಸಿ ಕಾಲಂಗಳನ್ನು ರದ್ದು ಪಡಿಸುವಂತೆ ದಲಿತರ ಹಲವಾರು ಹೋರಾಟಗಳ ಫಲದಿಂದ ಕೇವಲ 7ಡಿ ರದ್ದು ಮಾಡಿ 7ಸಿ ಅನ್ನು ಉಳಿಕೊಂಡಿರುವುದು ಮತ್ತೆ 2024-25 ಹಾಗೂ 2025-26ನೇ ಸಾಲಿನಲ್ಲಿ ಕೂಡ ಗ್ಯಾರಂಟಿ ಯೋಜನೆಗಳನ್ನೊಳಗೊಂಡಂತೆ ಅನ್ಯ ಯೋಜನೆಗಳಿಗೆ ಎಸ್.ಸಿ ಎಸ್ಪಿ-ಟಿ.ಎಸ್.ಪಿ. ಹಣ ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರ ತಪ್ಪಿಸುತ್ತಿರುವುದನ್ನು ಕ.ದ.ಸಂ.ಸ ಖಂಡಿಸುತ್ತದೆ. ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಹೆಸರಲ್ಲಿ ಸುಮಾರು 4 ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ನೀಡಿದ್ದು, ಈ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ನೇರವಾಗಿ ಪರಿಶಿಷ್ಟರ ಕುಟುಂಬಗಳಿಗೆ ಹಂಚಿಕೆ ಮಾಡಿದ್ದರೆ ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೂ ತಲಾ 20 ಲಕ್ಷಗಳು ತಲುಪ ಬೇಕಾಗಿತ್ತು. ಸರ್ಕಾರವಾಗಲೀ ವಿರೋಧ ಪಕ್ಷವಾಗಲೀ ಈ ಬಗ್ಗೆ ಗಮನ ಕೊಡದೇ ನಿರ್ಲಕ್ಷ ವಹಿಸುತ್ತಿವೆ. ಅಲ್ಲದೇ 38 ಇಲಾಖೆಗಳಲ್ಲಿರುವ ಬ್ಯಾಕ್‌ಲಾಗ್ ಹುದ್ದೆಗಳ ಕುರಿತು ಈವರೆಗೂ ಸರಿಯಾದ ಅಂಕಿ ಅಂಶಗಳನ್ನು ನೀಡದೇ ಎಲ್ಲಾ ಇಲಾಖೆಗಳು ಪರಿಶಿಷ್ಟರ ಹಿತಾಸಕ್ತಿ ವಿರುದ್ಧ ಕೆಲಸ ಮಾಡುತ್ತಿದೆ ಹಾಗೂ ಇಂಥಹ ಇಲಾಖೆ ಮುಖ್ಯಸ್ಥರ ಮೇಲೆ ಕ್ರಮ ಜರುಗಿಸುತ್ತಿಲ್ಲದಿರುವುದು ಕೂಡ ಅಕ್ಷಮ್ಯ ಅಪರಾಧವಾಗಿದೆ.

ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಸುವುದೇನಂದರೆ ಕಳೆದ 2023ರ ಚುನಾವಣೆಯಲ್ಲಿ ಹಿಂದಿನ ಬಿ.ಜೆ.ಪಿ ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದರಿಂದ ಬಹುತೇಕ ಎಲ್ಲಾ ಒಳಮೀಸಲಾತಿ ಹೋರಾಟಗಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಜಿಲ್ಲಾ ಸಂಚಾಲಕ ಎಂ ಜಿ ಕಿರಣ್ ಕುಮಾರ್ ಮುದ್ದಲಪಲ್ಲಿ, ತಾಲ್ಲೂಕು ಸಂಚಾಲಕ ಎಸ್ ಎನ್ ನರಸಿಂಹಪ್ಪ,ರಾಮೋಸಪಲ್ಲಿ ಶ್ರೀನಿವಾಸ್, ಕೊತ್ತೂರು ಪಲ್ಲಿ ಶ್ರೀನಿವಾಸ್, ಬಾಬು ಮುದ್ದಲಪಲ್ಲಿ, ಪಾಳ್ಯ ಕೆರೆ ಈಶ್ವರ, ಗಂಗಾಧರ , ಪ್ರಕಾಶ್, ಪ್ರವೀಣ್, ಬಾವನ್ನ, ಗಡ್ಡಂ ನಾರಾಯಣ, ಅನಿಲ್, ರಾಮಾಂಜಿ, ಆದಿ ಹಿಮಾಲಯ ಐಸ್ಕ್ರೀಂ, ಬಾಬು ಹಲವು ಮುಖಂಡರುಗಳು ಭಾಗವಹಿಸಿದರು.

ವರದಿ
ರಮೇಶ್ ಬಾಬು ಎನ್
ಬಾಗೇಪಲ್ಲಿ ತಾಲ್ಲೂಕು

Leave a Reply

Your email address will not be published. Required fields are marked *