
ಕಮಲಾಪುರ
ತಾಲೂಕಿನ ಕುರಿಕೋಟಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ದಿ.08.09.2025 ರಂದು ಸೋಮವಾರ ಬೆಳಗ್ಗೆ 10; 30 ಗಂಟೆಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆ ಬಳಿ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಕುರಿಕೋಟಾ ಪಿಕೆಪಿಎಸ್ ಅಧ್ಯಕ್ಷ ಗಣೇಶ ಚಿಕ್ಕನಾಗಾಂವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಳಿಯ ಹೋಟೆಲ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎರಡು ತಿಂಗಳಾಗಿದೆ, ಹೆದ್ದಾರಿ ಪ್ರಾಧಿಕಾರ ಹಾಗೂ ಜೆಸ್ಕಾಂ ಅಧಿಕಾರಿಗಳು ಟ್ರಾಫಿಕ್ ಜಾಮ್ ಕಾರಣ ನೀಡುತ್ತಿರುವುದು ಖಂಡನೀಯವಾಗಿದೆ.
ಕುರಿಕೋಟಾ ಗ್ರಾಮದ ಪಕ್ಕದಲ್ಲಿರುವ ಸಿರಗಾಪುರ ಕ್ರಾಸ್, ಮಹಾಗಾಂವ ಕ್ರಾಸ್ ಹೆದ್ದಾರಿ ಬಳಿಯಿರುವ ಹೋಟೆಲ್ ಗಳಿಗೆ ವಿದ್ಯುತ್ ಕಡಿತಗೊಳಿಸದೆ ನಮ್ಮ ಗ್ರಾಮದ ಬಳಿಯ ಹೋಟೆಲ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅನ್ಯಾಯ ಎಸಗಿದ ಹೆದ್ದಾರಿ ಪ್ರಾಧಿಕಾರ ಹಾಗೂ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಈ ಕುರಿತು ಮಹಾಗಾಂವ ಪೊಲೀಸರ ಅವರ ಗಮನಕ್ಕೆ ತಂದು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾಗ 15 ದಿನಗಳ ಕಾಲಾವಕಾಶ ನೀಡಿ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು, 20 ದಿನ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಕಾರಣದಿಂದಲೇ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಿದ್ದೇವೆ ಎಂದರು
