



ವಿವಿಧ ಸೇವಾ ಕಾರ್ಯಗಳ ಮೂಲಕ ಗಿರಿಜಮ್ಮ ಬಸವರಾಜ್ ಅವರ ಜನ್ಮದಿನಾಚರಣೆ :
ಬ್ಯಾಟರಾಯನಪುರ : ಬೆಟ್ಟಹಲಸೂರು ವೀರಶೈವ ಲಿಂಗಾಯತರ ಸಂಘದ ಉಪಾಧ್ಯಕ್ಷರು ಹಾಗೂ ಬಸವಣ್ಣ ದೇವಸ್ಥಾನದ ಖಜಾಂಚಿ ಬಸವರಾಜ್ ಅವರ ಧರ್ಮಪತ್ನಿ ಗಿರಿಜಮ್ಮ ಬಸವರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೆಟ್ಟಹಲಸೂರು ಗ್ರಾಮದಲ್ಲಿನ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಆಗಮಿಸಿದ್ದ ಎಲ್ಲಾ ಅತಿಥಿಗಳಿಗೆ ಸಸಿಗಳ ವಿತರಣೆ, ಚಿಕ್ಕಜಾಲದ ರಂಗಸ್ವಾಮಿ ಕ್ಯಾಂಪ್ ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳು ಮತ್ತು ಸಿಹಿ ವಿತರಣೆ ಶಿಕ್ಷಕರಿಗೆ ಸನ್ಮಾನ, ಉತ್ತನಹಳ್ಳಿಯಲ್ಲಿರುವ ಲಿಟಲ್ ಡ್ರಾಪ್ಸ್ ವೃದ್ಧಾಶ್ರಮದ ವೃದ್ಧರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳ ಮೂಲಕ ಗಿರಿಜಮ್ಮ ಬಸವರಾಜ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಜನ್ಮದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಗಿರಿಜಮ್ಮ ಅವರ ಪತಿ ಬಸವರಾಜ್, ತಾ.ಪಂ.ಮಾಜಿ ಸದಸ್ಯರಾದ ಬಿ.ನಾಗರಾಜ್ ಬಾಬು, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತಗೌಡ, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಬಿ.ಸಿ.ಶಿವರಾಜ್(ಶಿವು), ಮುಖಂಡರಾದ ಬಿ.ಬಿ.ಉಮೇಶ್, ಎಸ್ ಎಂ ಎಲ್ ಪಿ ಉಮೇಶ್, ಸಂಗೀತ ರಾಘವೇಂದ್ರ ಪಾಟೀಲ್, ಜಿತಿನ್ ಪಾಟೀಲ್, ಅನಿಷ್ಕಾ ಪಾಟೀಲ್, ರೋಹಿಣಿ ರೋಹಿತ್, ಸುವರ್ಣಮ್ಮ, ಗ್ರಾ.ಪಂ.ಸದಸ್ಯ ಮಮತಾ ಪ್ರಶಾಂತ್, ಮುನಿರಾಜು, ಹಸಿರೇ ಉಸಿರು ಟ್ರಸ್ಟ್ ಬೆಟ್ಟಹಲಸೂರು ಸಂಸ್ಥಾಪಕ ಅಧ್ಯಕ್ಷ ಬೆಟ್ಟಹಲಸೂರು ಡಾ.ಶ್ರೀನಿವಾಸಮೂರ್ತಿ, ಸದಸ್ಯರಾದ ಎಚ್.ಎನ್.ರಮೇಶ್ ಭಾಗವಹಿಸಿದ್ದರು.
ಹಸಿರೇ ಉಸಿರು ಟ್ರಸ್ಟ್ ಬೆಟ್ಟಹಲಸೂರು ಸಂಸ್ಥಾಪಕ ಅಧ್ಯಕ್ಷ ಬೆಟ್ಟಹಲಸೂರು ಡಾ.ಶ್ರೀನಿವಾಸಮೂರ್ತಿ ಅವರು ಕಾರ್ಯಕ್ರಮ ಆಯೋಜಿಸಿದ್ದರು.
