ಭಾವೈಕ್ಯದ ನೆಲೆವೀಡು
ನಮ್ಮೂರು
ಸಾಮರಸ್ಯದ ತವರೂರು…
ಧರ್ಮಗಳ ಸಂಘರ್ಷವಿಲ್ಲ..
ಸೋದರತ್ವವೇ ಇಲ್ಲಿ ಎಲ್ಲ...
ಹಬ್ಬ ಹರಿದಿನಗಳಿಗಿಲ್ಲ
ಧರ್ಮಗಳ ಸಂಕೋಲೆ
ಹಿಂದುಗಳು ಮಾಡುವರು
ಮೋಹರಂ ಮಾದೋಲಿ
ಮುಸ್ಲೀಮರು ಮಾಡುವರು
ಪಂಚಮಿಯ ಉಂಡಿ…
ಹಂಚಿ ತಿನ್ನುವರು
ಹಬ್ಬಗಳಲಿ ಅವರಿವರು
ಮುಸುಲರ ಜೈತುನಬಿ
ನಮ್ಮವ್ಚನ ಹಿರಿಮಗಳು
ಮದುವೆ ಮುಂಜಿಗೆಲ್ಲ
ಬಾಗೀನ ಕೇಳುವಳು…
ಎಲ್ಲರೂ ಅಣ್ಣ ತಮ್ಮಂದಿರು
ಮಾವ ಅಳಿಯಂದಿರು…
ಬಂಧು ಬಾಂಧವರು
ಇವರಿಗವರು ಅವರಿಗಿವರು
ಕಷ್ಟ ಸುಖದಲಿ ಬೆರೆವರು…
ದ್ವೇಷವಿಲ್ಲದ ನಮ್ಮೂರು
ಸಾಮರಸ್ಯದ ತವರೂರು
ಶಂಕರ ಪಾಗೋಜಿ
ಭಾವೈಕ್ಯದ ನೆಲೆವೀಡು
ಭಾವೈಕ್ಯದ ನೆಲೆವೀಡು
ನಮ್ಮೂರು
ಸಾಮರಸ್ಯದ ತವರೂರು…
ಧರ್ಮಗಳ ಸಂಘರ್ಷವಿಲ್ಲ..
ಸೋದರತ್ವವೇ ಇಲ್ಲಿ ಎಲ್ಲ...
ಹಬ್ಬ ಹರಿದಿನಗಳಿಗಿಲ್ಲ
ಧರ್ಮಗಳ ಸಂಕೋಲೆ
ಹಿಂದುಗಳು ಮಾಡುವರು
ಮೋಹರಂ ಮಾದೋಲಿ
ಮುಸ್ಲೀಮರು ಮಾಡುವರು
ಪಂಚಮಿಯ ಉಂಡಿ…
ಹಂಚಿ ತಿನ್ನುವರು
ಹಬ್ಬಗಳಲಿ ಅವರಿವರು
ಮುಸುಲರ ಜೈತುನಬಿ
ನಮ್ಮವ್ಚನ ಹಿರಿಮಗಳು
ಮದುವೆ ಮುಂಜಿಗೆಲ್ಲ
ಬಾಗೀನ ಕೇಳುವಳು…
ಎಲ್ಲರೂ ಅಣ್ಣ ತಮ್ಮಂದಿರು
ಮಾವ ಅಳಿಯಂದಿರು…
ಬಂಧು ಬಾಂಧವರು
ಇವರಿಗವರು ಅವರಿಗಿವರು
ಕಷ್ಟ ಸುಖದಲಿ ಬೆರೆವರು…
ದ್ವೇಷವಿಲ್ಲದ ನಮ್ಮೂರು
ಸಾಮರಸ್ಯದ ತವರೂರು
ಶಂಕರ ಪಾಗೋಜಿ